For Quick Alerts
ALLOW NOTIFICATIONS  
For Daily Alerts

ಕೊರೊನಾ ಭೀತಿ: ಸೆನ್ಸೆಕ್ಸ್ 2,700 ಪಾಯಿಂಟ್ಸ್ ಕುಸಿತ, 8 ಸಾವಿರ ಗಡಿಯಿಂದ ಕೆಳಗಿಳಿದ ನಿಫ್ಟಿ

|

ವಿಶ್ವದಾದ್ಯಂತ ಕೊರೊನಾವೈರಸ್ ಹರಡುವಿಕೆ ಮುಂದುವರಿದಿದ್ದು, ಇಟಲಿಯಲ್ಲಿ ಸಾವಿನ ಸಂಖ್ಯೆ 5,000 ಗಡಿ ದಾಟಿದೆ. ವೈರಸ್ ಹರಡುವಿಕೆ ಹೆಚ್ಚಾದ್ದರಿಂದ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಸೋಮವಾರ ಭಾರತದಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭದಲ್ಲೇ 2,700 ಪಾಯಿಂಟ್ಸ್ ಕುಸಿದಿದೆ.

 

ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 8.5 ಪರ್ಸೆಂಟ್ ಇಳಿಕೆಯಾಗಿದ್ದು 800 ಪಾಯಿಂಟ್ಸ್ ಇಳಿಕೆಗೊಂಡು 8,000 ಗಡಿಯಿಂದ ಕೆಳಗೆ ಕುಸಿದಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 2,700 ಪಾಯಿಂಟ್ಸ್ ಇಳಿಕೆಯಾಗಿದೆ 27,213 ಪಾಯಿಂಟ್ಸ್‌ಗೆ ತಲುಪಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಸಾವಿರಾರು ಕೋಟಿ ರುಪಾಯಿಗಳನ್ನು ಬಂಡವಾಳ ಹಿಂತೆಗೆದುಕೊಳ್ಳುತ್ತಿದ್ದಾರೆ.

 
ಕೊರೊನಾ ಭೀತಿ: ಸೆನ್ಸೆಕ್ಸ್ 2,700 ಪಾಯಿಂಟ್ಸ್ ಕುಸಿತ

ಕೊರೊನಾ ಭೀತಿಯಿಂದಾಗಿ ಹೂಡಿಕೆದಾರರು ತಮ್ಮ ಬಂಡವಾಳ ಹಿಂಪಡೆಯುತ್ತಿರುವುದಕ್ಕೆ ಈ ಭಾರೀ ಕುಸಿತ ಕಾಣುತ್ತಿದೆ. ಡಾಲರ್ ಎದುರು ರುಪಾಯಿ ಮೌಲ್ಯವೂ ಕೂಡ ದಿನೇ ದಿನೇ ಕುಸಿಯತೊಡಗಿದೆ. ಇದರೊಂದಿಗೆ ಕಚ್ಛಾ ತೈಲ ದರವು ಕೂಡ ಭಾರೀ ವೇಗವಾಗಿ ಬೆಲೆಯಲ್ಲಿ ಕುಸಿತ ಕಾಣುತ್ತಿದೆ.

ಸೋಮವಾರ ಮಾರುಕಟ್ಟೆ ವಹಿವಾಟು ಆರಂಭವಾದಾಗ ಯೆಸ್ ಬ್ಯಾಂಕ್ ಹೊರತುಪಡಿಸಿ ಎಲ್ಲಾ ಕಂಪನಿಯ ಷೇರುಗಳು ಇಳಿಕೆಯತ್ತ ಮುಖಮಾಡಿವೆ. ಅದರಲ್ಲೂ ಬ್ಯಾಂಕಿಂಗ್ ಷೇರುಗಳು ಪಾತಾಳದತ್ತ ಮುಖಮಾಡಿವೆ. ಇಂಡಸ್‌ಲ್ಯಾಂಡ್ ಬ್ಯಾಂಕ್ ಷೇರು 32 ವಾರಗಳ ಕನಿಷ್ಟ ಮಟ್ಟಕ್ಕೆ ತಲುಪಿದೆ. ಜೊತೆಗೆ ಎಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನಾನ್ಸ್‌, ಬಿಪಿಸಿಎಲ್, ಒಎನ್‌ಜಿಸಿ ಕಂಪನಿಯನ ಭಾರೀ ನಷ್ಟ ಅನುಭವಿಸಿವೆ.

English summary

Corona Impact Sensex Down 2700 Points Nifty Worst Hit

Monday sensex down 2700 points, and Nifty hit worst below 8000
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X