For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್‌ನಿಂದ ರೆಡ್‌ಮಿ ನೋಟ್‌ 8 ಮೊಬೈಲ್ ಬೆಲೆ ಹೆಚ್ಚಳ

|

ವಿಶ್ವದ ಎರಡನೇ ಬಹುದೊಡ್ಡ ಆರ್ಥಿಕತೆ ಚೀನಾವನ್ನು ನಡುಗಿಸಿರುವ ಕೊರೊನಾವೈರಸ್ ಅಲ್ಲಿನ ಬಹುತೇಕ ಎಲ್ಲಾ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತಿರುವ ಕೊರೊನಾ ಮೊಬೈಲ್ ತಯಾರಿಕಾ ಕಂಪನಿಯ ಉದ್ಯಮಕ್ಕೂ ಹೊಡೆತ ನೀಡಿದೆ.

ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯಿಂದ - ಕಾರಿನ ತನಕ ಕೊರೊನಾವೈರಸ್ ಎಫೆಕ್ಟ್ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯಿಂದ - ಕಾರಿನ ತನಕ ಕೊರೊನಾವೈರಸ್ ಎಫೆಕ್ಟ್

ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದ್ದು, ಈ ಸಾಲಿನಲ್ಲಿ ಕ್ಸಿಯೋಮಿ ಕಂಪನಿಯು ಸೇರ್ಪಡೆಗೊಂಡಿದೆ. ಕ್ಸಿಯೋಮಿ ತನ್ನ ರೆಡ್‌ಮಿ ನೋಟ್ 8 ಮೊಬೈಲ್ ಫೋನ್‌ಗಳ ಬೆಲೆಯನ್ನು ಭಾರತದಲ್ಲಿ 500 ರುಪಾಯಿ ಹೆಚ್ಚಿಸಿದೆ.

ಕೊರೊನಾ ವೈರಸ್‌ನಿಂದ ರೆಡ್‌ಮಿ ನೋಟ್‌ 8 ಮೊಬೈಲ್ ಬೆಲೆ ಹೆಚ್ಚಳ

ರೆಡ್‌ಮಿ ನೋಟ್ 8ನ 4GB RAM, 64 GB ಸ್ಟೋರೆಜ್ ಹೊಂದಿರುವ ಮೊಬೈಲ್ ಮಾದರಿಗೆ ಮಾತ್ರ ಈ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ. ರೆಡ್‌ಮಿ ನೋಟ್ 8ನ 4GB RAM, 64 GB ಮಾದರಿಯ ಮೊಬೈಲ್ ಬೆಲೆಯು ಈ ಹಿಂದೆ 9,999 ರುಪಾಯಿ ಇತ್ತು. ಬೆಲೆ ಏರಿಕೆಯಿಂದಾಗಿ ಈ ಫೋನ್ ಬೆಲೆ 10,499 ರುಪಾಯಿಗೆ ಏರಿಕೆಯಾಗಲಿದೆ. ಆದರೆ ಈ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು ಪರಿಸ್ಥಿತಿ ಸರಿ ಹೋದ ಬಳಿಕ ಬೆಲೆ ಇಳಿಕೆ ಮಾಡುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾದ ವಿವಿಧ ಪ್ರದೇಶಗಳಲ್ಲಿ ಕೊರೊನಾವೈರಸ್‌ ಭೀತಿಯಿಂದಾಗಿ ಬಹುತೇಕ ಕೈಗಾರಿಕೆಗಳು ಉತ್ಪಾದನೆ ತಗ್ಗಿಸವೆ. ಇದರಿಂದ ಮೊಬೈಲ್ ತಯಾರಿಕಾ ಕೈಗಾರಿಕೆಗಳಲ್ಲಿ ಬಿಡಿಭಾಗಗಳು ಹೆಚ್ಚು ಉತ್ಪಾದನೆ ಆಗದೆ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮೊಬೈಲ್ ತಯಾರಿಕೆಗೆ ಅಗತ್ಯವಿರುವ ಬಿಡಿಭಾಗಗಳನ್ನು ಬೇರೆ ಭಾಗದಲ್ಲಿ ಉತ್ಪಾದನೆ ಮಾಡುವವರೆಗೆ ಮಾತ್ರ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

English summary

Coronavirus Effect On Redmi Note 8 Mobile Price

Xiaomi has increased the price of the redmi note 8 in india due to issues in the supply chain.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X