For Quick Alerts
ALLOW NOTIFICATIONS  
For Daily Alerts

ದೇಶದ ಹೋಟೆಲ್‌ ಉದ್ಯಮದ ಮೇಲೆ ಕೊರೊನಾ ಪ್ರಭಾವ:2020ರಲ್ಲಿ 20% ಆದಾಯವು ಸಿಗಲ್ಲ

|

ವಿಶ್ವದಲ್ಲಿ ಬಹುತೇಕ ರಾಷ್ಟ್ರಗಳನ್ನು ಹೇಳತೀರದ ಪರಿಸ್ಥಿತಿಗೆ ಕೊಂಡೊಯ್ದಿರುವ ಕೊರೊನಾವೈರಸ್ ಎಂಬ ಮಹಾಮಾರಿ ಜನರ ಜೀವವನ್ನು ಬಲಿ ಪಡೆಯುವುದರ ಜೊತೆಗೆ ಇರುವವರ ಆದಾಯವನ್ನೆಲ್ಲಾ ಕಸಿಯುತ್ತಿದೆ. ಎಲ್ಲಾ ಉದ್ಯಮಗಳು ನೆಲಕಚ್ಚಿರುವ ಜೊತೆಗೆ ಉದ್ಯೋಗವನ್ನೆಲ್ಲಾ ನುಂಗಿಹಾಕುತ್ತಿದೆ.

ಕೊರೊನಾವೈರಸ್ ಪ್ರಭಾವದಿಂದಾಗಿ ಅತಿ ಹೆಚ್ಚು ಪೆಟ್ಟು ತಿಂದಿರುವುದರಲ್ಲಿ ಹೋಟೆಲ್ ಉದ್ಯಮ ಕೂಡ ಒಂದು. ಉನ್ನತ ಆತಿಥ್ಯ ಸಲಹಾ ಸಂಸ್ಥೆ ಪ್ರಕಾರ 2020 ರಲ್ಲಿ ಹೋಟೆಲ್ ಉದ್ಯಮವು ಹಿಂದಿನ ವರ್ಷಗಳ ಆದಾಯದ 20 ಪರ್ಸೆಂಟ್‌ನಷ್ಟು ಗಳಿಸೋಕೆ ಸಾಧ್ಯವಾಗುವುದಿಲ್ಲ.

2020 ರಲ್ಲಿ 37,000 ಕೋಟಿ ರುಪಾಯಿ ಆದಾಯ ಬಂದರೆ ಹೆಚ್ಚು

2020 ರಲ್ಲಿ 37,000 ಕೋಟಿ ರುಪಾಯಿ ಆದಾಯ ಬಂದರೆ ಹೆಚ್ಚು

ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ 2020 ರಲ್ಲಿ 15 ರಿಂದ 20 ಪರ್ಸೆಂಟ್‌ನಷ್ಟು ಆದಾಯ ಅಂದರೆ ವಾರ್ಷಿಕ 37,000 ಕೋಟಿ ರುಪಾಯಿ ಸಿಗಬಹುದು. ಹೀಗಾಗಿ ಸಾವಿರಾರು ಕೋಟಿ ರುಪಾಯಿ ನಷ್ಟ ಎದುರಿಸುವ ಸವಾಲು ಮುಂದಿದೆ.

" ಆದಷ್ಟು ಬೇಗ ತುರ್ತು ಕ್ರಮಗಳನ್ನು ತೆಗೆದುಕೊಳ್ಳದ ಹೊರತು, ಭಾರತದ ಬ್ರ್ಯಾಂಡ್ ಅಥವಾ ಸಂಘಟಿತ ಹೋಟೆಲ್ ಮಾರುಕಟ್ಟೆಯು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ನಷ್ಟ ಅನುಭವಿಸಬಹುದು." ಎಂದು ಹೋಟೆಲಿವೇಟ್‌ನ ಕಾರ್ಯತಂತ್ರದ ಸಲಹೆಗಾರ, ವ್ಯವಸ್ಥಾಪಕ ಪಾಲುದಾರ ಅಚಿನ್ ಖನ್ನಾ ವರದಿಯಲ್ಲಿ ತಿಳಿಸಿದ್ದಾರೆ.

21 ದಿನಗಳ ಲಾಕ್‌ಡೌನ್‌ಗೂ ಮೊದಲೇ ಕುಸಿದಿದ್ದ ಹೋಟೆಲ್ ಉದ್ಯಮ

21 ದಿನಗಳ ಲಾಕ್‌ಡೌನ್‌ಗೂ ಮೊದಲೇ ಕುಸಿದಿದ್ದ ಹೋಟೆಲ್ ಉದ್ಯಮ

ದೇಶಾದ್ಯಂತ ಕೊರೊನಾವೈರಸ್ ಪರಿಣಾಮ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಯಿತು. ಆದರೆ ಈ ಮೂರು ವಾರಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾಗುವ ಮೂರು ದಿನಗಳ ಮೊದಲೇ(ಮಾರ್ಚ್ 21) ಭಾರತದಾದ್ಯಂತ ಹೋಟೆಲ್ ರೂಮ್‌ಗಳ ಬುಕ್ಕಿಂಗ್ ಪ್ರಮಾಣದಲ್ಲಿ 67 ಪರ್ಸೆಂಟ್ ಇಳಿಕೆಯಾಗಿತ್ತು. ಇದಕ್ಕೂ ಮೊದಲೂ ಮಾರ್ಚ್‌ 7ರಂದು 12 ಪರ್ಸೆಂಟ್ ಕುಸಿದಿದೆ ಎಂದು ಸಂಶೋಧನಾ ಸಂಸ್ಥೆ ಎಸ್‌ಟಿಆರ್ ತಿಳಿಸಿದೆ.

ಹೀಗೆ ಕುಸಿಯುತ್ತಾ ಸಾಗಿದ ಹೋಟೆಲ್ ಬುಕ್ಕಿಂಗ್ ಮಾರ್ಚ್‌ 21 ರ ಹೊತ್ತಿಗೆ ಬಹುತೇಕ ಇಳಿಕೆ ಕಂಡಿತು. ಜೊತೆಗೆ ಆದಾಯವು 73 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ.

ಬೇಗ ಕ್ರಮ ಕೈಗೊಳ್ಳದಿದ್ದರೆ ಲಕ್ಷಾಂತರ ಉದ್ಯೋಗ ನಷ್ಟ

ಬೇಗ ಕ್ರಮ ಕೈಗೊಳ್ಳದಿದ್ದರೆ ಲಕ್ಷಾಂತರ ಉದ್ಯೋಗ ನಷ್ಟ

ಹೋಟೆಲ್ ಉದ್ಯಮವು ಅದೋ ಗತಿಗೆ ತಲುಪಿರುವ ಈ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವನ್ನು ಎದುರಿಸಬೇಕಾಗುತ್ತದೆ.

''ಮುಳುಗುತ್ತಿರುವ ಹಡಗನ್ನು ತಕ್ಷಣವೇ ರಕ್ಷಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಲಕ್ಷಾಂತರ ಉದ್ಯೋಗ ನಷ್ಟವನ್ನು ನೋಡಬೇಕಾಗುತ್ತದೆ'' ಎಂದು ಬೃಹತ್ ಹೋಟೆಲ್ ಕಂಪನಿಯ ಹಿರಿಯ ಕಾರ್ಯ ನಿರ್ವಾಹಕರೊಬ್ಬರು ಹೇಳಿದ್ದಾರೆ.

 

1000 ಬ್ರ್ಯಾಂಡೆಡ್ ಹೋಟೆಲ್‌ನಲ್ಲಿವೆ 1.25 ಲಕ್ಷ ಕೊಠಡಿಗಳು

1000 ಬ್ರ್ಯಾಂಡೆಡ್ ಹೋಟೆಲ್‌ನಲ್ಲಿವೆ 1.25 ಲಕ್ಷ ಕೊಠಡಿಗಳು

ದೇಶಾದ್ಯಂತ ಬ್ರಾಂಡೆಡ್‌ ಹಾಗೂ ಐಷಾರಾಮಿ ಹೋಟೆಲ್‌ಗಳು 1000 ನಷ್ಟಿದ್ದು ಸುಮಾರು 1.25 ಲಕ್ಷ ಕೊಠಡಿಗಳನ್ನು ಹೊಂದಿವೆ. ಇನ್ನು ಅಸಂಘಟಿತವಲಯವಾದ 1, 2 ಮತ್ತು 3 ಸ್ಟಾರ್ ವಿಭಾಗದ ಹೋಟೆಲ್‌ಗಳು ಕೂಡ ಇವೆ. ದೊಡ್ಡ ದೊಡ್ಡ ಹೋಟೆಲ್‌ಗಳೇ ಭಾರೀ ನಷ್ಟು ಎದುರಿಸುತ್ತಿರುವಾಗ ಚಿಕ್ಕ ಪುಟ್ಟ ಹೋಟೆಲ್‌ಗಳು ಭಾರೀ ಅಪಾಯವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಉದ್ಯೋಗ ನಷ್ಟಕ್ಕೂ ಇದು ಕಾರಣವಾಗುತ್ತದೆ .

ಬ್ರ್ಯಾಂಡೆಡ್ ಹೋಟೆಲ್‌ನಲ್ಲಿದ್ದಾರೆ 2 ಲಕ್ಷ ಉದ್ಯೋಗಿಗಳು

ಬ್ರ್ಯಾಂಡೆಡ್ ಹೋಟೆಲ್‌ನಲ್ಲಿದ್ದಾರೆ 2 ಲಕ್ಷ ಉದ್ಯೋಗಿಗಳು

ದೇಶದಲ್ಲಿ ಬ್ರ್ಯಾಂಡೆಡ್ ಹೋಟೆಲ್ ಎಂದು ಗುರುತಿಸಿಕೊಂಡಿರುವ ಉದ್ಯಮದಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳಿದ್ದು, ಇವರಿಗೆ ವೇತನವನ್ನು ನೀಡಬೇಕಾಗುತ್ತದೆ. ಇದಲ್ಲದೆ ಅಸಂಘಟಿತ ವಲಯದ ಹೋಟೆಲ್, ಲಾಡ್ಜ್‌ಗಳು, ರೆಸ್ಟೋರೆಂಟ್‌ಗಳು ಲೆಕ್ಕವಿಲ್ಲದಷ್ಟಿವೆ. ಇದರಲ್ಲಿ ಲಕ್ಷಾಂತರ ಜನರು ಕಾರ್ಯ ನಿರ್ವಹಿಸುತ್ತಿದ್ದು, ವೇತನ ಪಾವತಿ ನಿಜಕ್ಕೂ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಈಗಾಗಲೇ ಸಾಲ ಪಡೆದು ಹೋಟೆಲ್ ಮಾಡಿ ನಿರ್ವಹಿಸುತ್ತಿರುವ ಪರಿಸ್ಥಿತಿ ಹೇಳ ತೀರದಂತಾಗಿದ್ದು, ಹೋಟೆಲ್ ಉದ್ಯಮದ ನಷ್ಟದ ಜೊತೆಗೆ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟದ ಭೀತಿಯು ಮುಂದಿದೆ.

 

English summary

Coronavirus Impact On Hotel Industry High Job losses

In the worst-case scenario, the hotel industry in 2020 would not be able to claw back even 20 percent of the previous years revenue as coronavirus takes toll on business
Story first published: Thursday, April 2, 2020, 16:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X