For Quick Alerts
ALLOW NOTIFICATIONS  
For Daily Alerts

ಕೊರೊನಾ ಸೋಂಕು ಹೆಚ್ಚಳ: ಕಚ್ಚಾ ತೈಲ ಬೆಲೆ ಕುಸಿತ

|

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಅನೇಕ ರಾಷ್ಟ್ರಗಳು ಈಗಾಗಲೇ ಕಟ್ಟುನಿಟ್ಟಾದ ಕ್ರಮವನ್ನು ಜಾರಿಗೊಳಿಸಿವೆ. ಆರ್ಥಿಕ ಚಟುವಟಿಕೆಗಳ ಮೇಲೆ ಭಾರೀ ಹೊಡೆತ ಬೀಳುವುದರ ಜೊತೆಗೆ ಸೋಮವಾರ ಕಚ್ಚಾ ತೈಲ ದರವು ಕುಸಿದಿದೆ.

 

ಬ್ರೆಂಟ್ ಕಚ್ಚಾ ತೈಲದರವು ಬ್ಯಾರೆಲ್‌ಗೆ 43 ಸೆಂಟ್ಸ್‌ ಅಥವಾ ಶೇಕಡಾ 0.6ರಷ್ಟು ಕುಸಿದು $66.34 ತಲುಪಿದೆ. ಕಳೆದ ವಾರ ಶೇಕಡಾ 6ರಷ್ಟು ಏರಿಕೆಗೊಂಡ ಬಳಿಕ ಇಳಿಕೆಗೊಂಡಿದೆ. ಜೊತೆಗೆ ಅಮೆರಿಕಾದ ಕಚ್ಚಾ ತೈಲವು ಕೂಡ ಬ್ಯಾರೆಲ್‌ಗೆ 42 ಸೆಂಟ್ಸ್‌ ಅಥವಾ ಶೇಕಡಾ 0.7ರಷ್ಟು ಇಳಿಕೆಗೊಂಡು $62.71ಗೆ ಮುಟ್ಟಿದೆ. ಕಳೆದ ವಾರ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇಕಡಾ 6.4ರಷ್ಟು ಏರಿಕೆಗೊಂಡಿತ್ತು.

ಕೊರೊನಾ ಸೋಂಕು ಹೆಚ್ಚಳ: ಕಚ್ಚಾ ತೈಲ ಬೆಲೆ ಕುಸಿತ

ಭಾರತ ಮತ್ತು ಇತರೆ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವು ಪ್ರಮುಖವಾಗಿ ಲಾಭಗಳಿಕೆಗೆ ತಡೆ ಗೋಡೆಗಳಾಗಿ ಪರಿಣಮಿಸಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತವು ಭಾನುವಾರ 2,61,500 ಹೊಸ ಕೊರೊನಾವೈರಸ್ ಸೋಂಕುಗಳನ್ನು ವರದಿ ಮಾಡಿದ್ದು, ಇದು ಸುಮಾರು 14.8 ಮಿಲಿಯನ್‌ಗೆ ತಲುಪಿದೆ. ಅಮೆರಿಕಾದ ನಂತರದಲ್ಲಿ ಭಾರತವು ಅತಿ ಹೆಚ್ಚು ಸೋಂಕುಗಳನ್ನು ವರದಿ ಮಾಡಿದೆ. ಅಮೆರಿಕಾವು ಬರೋಬ್ಬರಿ 31 ಮಿಲಿಯನ್‌ಗಿಂತ ಹೆಚ್ಚು ಸೋಂಕುಗಳನ್ನು ವರದಿ ಮಾಡಿದೆ.

English summary

Covid 2nd Wave Impact: Crude Oil Prices Down

Crude Oil Prices Down on monday amid mounting concerns that surging caseloads of coronavirus infections in India and other countries.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X