For Quick Alerts
ALLOW NOTIFICATIONS  
For Daily Alerts

ಕಳೆದ 21 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ತಲುಪಿದ ಕಚ್ಚಾ ತೈಲ ದರ

|

ವಿಶ್ವದಾದ್ಯಂತ ಕೊರೊನಾದಿಂದ ಆಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ತೈಲ ಬೆಲೆಯು ಮತ್ತಷ್ಟು ನೆಲಕಚ್ಚಿ ಹೋಗಿದೆ. ಪೆಟ್ರೋಲ್, ಡೀಸೆಲ್ ಬೇಡಿಕೆ ಗಣನೀಯ ಕುಸಿತ ಕಾಣುತ್ತಿದ್ದು, ಸೋಮವಾರ ಅಮೆರಿಕಾದಲ್ಲಿ ಕಚ್ಚಾ ತೈಲ ಬೆಲೆ ಎರಡು ದಶಕಗಳ ಹಿಂದಕ್ಕೆ ಹೋಗಿ ತಲುಪಿದೆ.

ಅಮೆರಿಕಾದ ವೆಸ್ಟ್ ಟೆಕ್ಸಾಸ್ ಮಧ್ಯಂತರ(ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 15 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಕಳೆದ 21 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ.

ಕಳೆದ 21 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ತಲುಪಿದ ಕಚ್ಚಾ ತೈಲ ದರ

ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ದುರ್ಬಲ ಬೇಡಿಕೆಯ ಹಿನ್ನೆಲೆಯಲ್ಲಿ ತೈಲ ಬೆಲೆಗಳ ಕುಸಿತವು ಕಂಡು ಬರುತ್ತಿದೆ. ಸಾಂಕ್ರಾಮಿಕ ರೋಗವು ಜಾಗತಿಕ ಪ್ರವಾಸೋದ್ಯಮವನ್ನು ಬಹುತೇಕ ಸ್ಥಗಿತಗೊಳಿಸಿದೆ, ಈ ವರ್ಷ ಸುಮಾರು ಮೂರನೇ ಒಂದು ಭಾಗದಷ್ಟು ಸರಕುಗಳ ಬೇಡಿಕೆಯನ್ನು ಸೀಮಿತಗೊಳಿಸಿದೆ. ಇದಲ್ಲದೆ, ಜಾಗತಿಕ ಶೇಖರಣೆಯು ಬಹುತೇಕ ತುಂಬಿರುವುದರಿಂದ ಶೇಖರಣೆಗೆ ಸಂಬಂಧಿಸಿದ ಕಳವಳಗಳು ಮಾರುಕಟ್ಟೆಗಳಲ್ಲೂ ವ್ಯಕ್ತವಾಗುತ್ತಿದೆ.

ಪ್ರಸ್ತುತ, ಡಬ್ಲ್ಯುಟಿಐ ಕಚ್ಚಾ ಬ್ಯಾರೆಲ್‌ಗೆ 14.78 ಡಾಲರ್‌ರಂತೆ ವಹಿವಾಟು ನಡೆಸುತ್ತಿದ್ದು, ಹಿಂದಿನ ಮುಕ್ತಾಯಕ್ಕಿಂತ 19.5 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 27.66 ಡಾಲರ್‌ರಷ್ಟಿದ್ದು, ಹಿಂದಿನ ಮುಕ್ತಾಯಕ್ಕಿಂತ 1.5 ಪರ್ಸೆಂಟ್‌ರಷ್ಟು ಕಡಿಮೆಯಾಗಿದೆ.

ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ಮತ್ತು ಅದರ ಮಿತ್ರ ರಾಷ್ಟ್ರಗಳ ನಡುವಿನ ಇತ್ತೀಚಿನ ಉತ್ಪಾದನಾ ಕಡಿತದ ಒಪ್ಪಂದದ ಹೊರತಾಗಿಯೂ ಈ ಕುಸಿತ ಕಂಡುಬಂದಿದೆ. ಒಪ್ಪಂದವು ತೈಲ ಬೆಲೆಗಳನ್ನು ಸ್ಥಿರಗೊಳಿಸುತ್ತದೆ ಎಂಬ ಭರವಸೆಗಳು ಇದ್ದವು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗವು ಮುಂದುವರಿಯುವುದರೊಂದಿಗೆ, ಬೇಡಿಕೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ.

ಪ್ರಸ್ತುತ ಮಾರುಕಟ್ಟೆಯು ಕುಗ್ಗುತ್ತಿರುವ ಬೇಡಿಕೆಯ ಮೇಲೆ ಅತಿಯಾಗಿ ಪೂರೈಕೆಯಾಗಿದ್ದು, ಕಚ್ಚಾ ಮುಕ್ತ ಕುಸಿತದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಉತ್ಪಾದನಾ ಕಡಿತದ ಕುರಿತಾದ ಒಪೆಕ್-ರಷ್ಯಾ ಮಾತುಕತೆ ಕಳೆದ ತಿಂಗಳ ಆರಂಭದಲ್ಲಿ ವಿಫಲವಾದ ಬೆನ್ನಲ್ಲೇ, ಕಚ್ಚಾ ತೈಲ 25 ಪರ್ಸೆಂಟ್‌ಕ್ಕಿಂತಲೂ ಹೆಚ್ಚು ಕುಸಿದಿದೆ. ಇದು 1991ರ ಕೊಲ್ಲಿ ಯುದ್ಧದ ನಂತರದ ಅತಿದೊಡ್ಡ ಕುಸಿತ, ಮಾರ್ಚ್ 9 ರಂದು ಬ್ಯಾರೆಲ್‌ಗೆ 34 ಡಾಲರ್‌ಗೆ ಇಳಿದಿತ್ತು.

English summary

Crude Oil Fall To The Lowest In 21 Years

Crude oil prices plunged Monday with the WTI crude in the US falling below the $15 per barrel mark, the lowest level in 21 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X