For Quick Alerts
ALLOW NOTIFICATIONS  
For Daily Alerts

ಕಚ್ಛಾ ತೈಲ ಬೆಲೆ ಶೇ. 3ರಷ್ಟು ಏರಿಕೆ; ದುಬಾರಿಯಾಗುತ್ತಾ ಪೆಟ್ರೋಲ್?

|

ವಾಷಿಂಗ್ಟನ್, ಅ. 27: ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ. ನಿನ್ನೆಗಿಂತ ಇಂದು ಗುರುವಾರ ಕ್ರೂಡ್ ಆಯಿಲ್ ಶೇ. 3ರಷ್ಟು ಬೆಲೆ ಹೆಚ್ಚಿಸಿಕೊಂಡಿದೆ. ಅಮೆರಿಕನ್ ಡಾಲರ್ ಕರೆನ್ಸಿ ಮೌಲ್ಯ ತುಸು ಕಡಿಮೆ ಆಗಿದ್ದು ಮತ್ತು ಅಮೆರಿಕದಿಂದ ಕಚ್ಛಾ ತೈಲ ದಾಖಲೆ ಪ್ರಮಾಣದಲ್ಲಿ ರಫ್ತಾಗಿದ್ದು ಈ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

 

ಬ್ರೆಂಟ್ ಕ್ರೂಡ್ ಫ್ಯೂಚರ್ಸ್‌ನಲ್ಲಿ ಶೇ. 0.2ರಷ್ಟು ಬೆಲೆ ಹೆಚ್ಚಿದೆ. ಅಲ್ಲಿ ಒಂದು ಬ್ಯಾರಲ್ ತೈಲ 95.89 ಡಾಲರ್ (7895 ರೂಪಾಯಿ) ಬೆಲೆಗೆ ಮಾರಾಟವಾಗುತ್ತಿದೆ. ಇನ್ನು, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಛಾ ತೈಲ ಮಾರುಕಟ್ಟೆಯಲ್ಲೂ ಶೇ. 0.2ರಷ್ಟು ಬೆಲೆ ಹೆಚ್ಚಳವಾಗಿದೆ. ಅಲ್ಲಿ ಒಂದು ಬ್ಯಾರಲ್ ತೈಲ 88.10 ಡಾಲರ್ (7,253 ರೂಪಾಯಿ) ದರದಲ್ಲಿ ವಹಿವಾಟಾಗುತ್ತಿದೆ.

ಆದರೆ, ಚೀನಾದಲ್ಲಿ ಪೆಟ್ರೋಲ್‌ಗೆ ಬೇಡಿಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲ ಬೆಲೆ ಇನ್ನಷ್ಟು ಏರಿಕೆಯಾಗುವುದು ತಪ್ಪಿದೆ. ಇದೇ ವೇಳೆ ಅಮೆರಿಕದಿಂದ ಈ ವಾರ ಕಚ್ಛಾ ತೈಲದ ರಫ್ತು ಹೆಚ್ಚಾಗಿದೆ. ಅಕ್ಟೋಬರ್ 21ಕ್ಕೆ ಅಂತ್ಯವಾಗುವ ವಾರದಲ್ಲಿ ದಿನಕ್ಕೆ ಸರಾಸರಿಯಾಗಿ 1.14 ಕೋಟಿ ಬ್ಯಾರಲ್ ತೈಲ ಮಾರಾಟವಾಗಿದೆ. ಹಿಂದಿನ ವಾರದಲ್ಲಿ ದಿನಕ್ಕೆ 94 ಲಕ್ಷ ಬ್ಯಾರಲ್ ತೈಲ ಮಾರಾಟವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕುರುಹು ಇದು.

ಕಚ್ಛಾ ತೈಲ ಬೆಲೆ ಶೇ. 3ರಷ್ಟು ಏರಿಕೆ; ದುಬಾರಿಯಾಗುತ್ತಾ ಪೆಟ್ರೋಲ್?

ಇನ್ನು, ಅಮೆರಿಕದಿಂದ ಕಚ್ಛಾ ತೈಲದ ಆಮದು ಕೂಡ ಹೆಚ್ಚಾಗಿದೆ. ಕಳೆದ ವಾರ ದಿನಕ್ಕೆ 62 ಲಕ್ಷ ಬ್ಯಾರಲ್‌ಗಳಂತೆ ಅಮೆರಿಕ ತೈಲ ಅಮದು ಮಾಡಿಕೊಂಡಿತ್ತು.

ಇನ್ನು, ಅಮೆರಿಕದ ವಾಣಿಜ್ಯಾತ್ಮಕ ಕಚ್ಛಾ ತೈಲ ಸಂಗ್ರಹ 26 ಲಕ್ಷ ಬ್ಯಾರಲ್‌ಗಳಷ್ಟು ಹೆಚ್ಚಾಗಿದೆ. ಅಮೆರಿಕದಲ್ಲೀಗ 43.99 ಕೋಟಿ ಬ್ಯಾರಲ್ ತೈಲ ದಾಸ್ತಾನು ಇದೆ. ಆದರೆ, ಕಳೆದ ಐದು ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಶೇ. 2ರಷ್ಟು ಕಡಿಮೆ ಇದೆ ಎಂದೆನ್ನಲಾಗುತ್ತಿದೆ.

ಡಾಲರ್ ದುರ್ಬಲ

ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಏರಿಸುವ ಸಾಧ್ಯತೆ ಕಡಿಮೆ ಇದೆ ಎಂಬ ಸುಳಿವು ಸಿಗುತ್ತಲೇ, ಹೂಡಿಕೆದಾರರು ಡಾಲರ್ ಅಪ್ಪುಗೆಯನ್ನು ಸಡಿಲಗೊಳಿಸತೊಡಗಿದ್ದಾರೆ. ಪರಿಣಾಮವಾಗಿ ಫೋರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ತುಸು ತಗ್ಗಿದೆ. ಈ ಕಾರಣಕ್ಕೆ ಕಚ್ಛಾ ತೈಲ ಬೆಲೆ ಏರಿರಬಹುದು ಎಂದು ಭಾವಿಸಲಾಗಿದೆ. ಡಾಲರ್ ದುರ್ಬಲವಾಗಿದ್ದರೆ ಬೇರೆ ಕರೆನ್ಸಿಗಳನ್ನು ಹೊಂದಿದವರು ಪೆಟ್ರೋಲ್ ಖರೀದಿಗೆ ಹೆಚ್ಚು ಮುಗಿಬೀಳುತ್ತಾರೆ.

 

ಕಚ್ಛಾ ತೈಲ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮೊದಲಾದವುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಸದ್ಯ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 96 ರೂನಿಂದ 109 ರೂವರೆಗೂ ಇದೆ.

English summary

Crude Oil Rates Rise US Inventory Goes Down Amidst Weakened Dollar

Crude oil prices have risen due to growing demand for petroleum products and weakening of dollar. US increasing the export of its oil reserves also contributed to the rising of crude oil price.
Story first published: Thursday, October 27, 2022, 13:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X