ಟಾಟಾ ವರ್ಸಸ್ ಸೈರಸ್: ಅ. 24, 2016ರಿಂದ ಡಿ. 18, 2019ರ ತನಕ

ಮೂರು ವರ್ಷದ ತಿಕ್ಕಾಟಕ್ಕೆ ಡಿಸೆಂಬರ್ 18ರ ಬುಧವಾರದಂದು ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಇದು ಟಾಟಾ ಗ್ರೂಪ್ ನ ಸೈರಸ್ ಮಿಸ್ತ್ರಿಯ ವಜಾ ಪ್ರಕರಣದ ಮುಂದುವರಿದ ಭಾಗ. ಎನ್ ಸಿಎಲ್ ಎಟಿಯಿಂದ ಸೈರ ಮಿಸ್ತ್ರಿ ಅವರನ್ನು ಮತ್ತೆ ಟಾಟಾ ಗ್ರೂಪ್ ಕಾರ್ಯ ನಿರ್ವಾಹಕ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿದೆ. ಈ ಮೂರು ವರ್ಷದಲ್ಲಿ ಏನೆಲ್ಲ ಆಯಿತು ಎಂಬುದರ ಘಟನಾವಳಿಗಳು ಇಲ್ಲಿವೆ.

ಅಕ್ಟೋಬರ್ 24, 2016: ಟಾಟಾ ಸನ್ಸ್ ನ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ; ರತನ್ ಟಾಟಾ ಮಧ್ಯಂತರ ಅಧ್ಯಕ್ಷರಾಗಿ ನೇಮಕ

ಅಕ್ಟೋಬರ್ 25, 2016: ಟಾಟಾ ಟ್ರಸ್ಟಿಗಳ ನೆರಳಿನಂಥ ನಿಯಂತ್ರಣ ಇದೆ ಎಂದು ಟಾಟಾ ಸನ್ಸ್ ಆಡಳಿತ ಮಂಡಳಿಗೆ ಪತ್ರ ಬರೆದ ಸೈರಸ್ ಮಿಸ್ತ್ರಿ

ಡಿಸೆಂಬರ್ 19, 2016: ಟಾಟಾ ಗ್ರೂಪ್ ಎಲ್ಲ ಸಂಸ್ಥೆಗಳ ನಿರ್ದೇಶಕ ಹುದ್ದೆಗೆ ಸೈರಸ್ ಮಿಸ್ತ್ರಿ ರಾಜೀನಾಮೆ

ಡಿಸೆಂಬರ್ 20, 2016: National Company Law Tribunal (NCLT) ಮೆಟ್ಟಿಲೇರಿದ ಮಿಸ್ತ್ರಿ. ಅಧಿಕಾರ ದುರುಪಯೋಗದ ಆರೋಪ.

ಜನವರಿ 12, 2017: ಟಾಟಾ ಸನ್ಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ಹೆಸರು ಘೋಷಣೆ

ಫೆಬ್ರವರಿ 6, 2017: ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ

ಸೆಪ್ಟೆಂಬರ್ 21, 2017: ಖಾಸಗಿ ಕಂಪೆನಿ ಆಗುವ ಯೋಜನೆಗೆ ಟಾಟಾ ಸನ್ಸ್ ಮಂಡಳಿಯಿಂದ ಒಪ್ಪಿಗೆ

ಟಾಟಾ ವರ್ಸಸ್ ಸೈರಸ್: ಅ. 24, 2016ರಿಂದ ಡಿ. 18, 2019ರ ತನಕ

ಜೂನ್ 12, 2018: National Company Law Tribunal (NCLT) ಜುಲೈ 4ರಂದು ಆದೇಶದ ದಿನವಾಗಿ ನಿಗದಿ

ಜುಲೈ 4, 2018: NCLTಯಿಂದ ತೀರ್ಪು ಜುಲೈ 9ರ ತನಕ ಮುಂದೂಡಿಕೆ

ಜುಲೈ 9, 2018: ಟಾಟಾ ಸನ್ಸ್ ನಿಂದ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ ಕ್ರಮ ಪ್ರಶ್ನಿಸಿ, ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿ NCLTಯಿಂದ ವಜಾ. ಆಡಳಿತ ಮಂಡಳಿಯು ವಿಶ್ವಾಸ ಕಳೆದುಕೊಂಡ ಕಾರಣಕ್ಕೆ ಮಿಸ್ತ್ರಿ ಅವರನ್ನು ವಜಾ ಮಾಡಿದೆ ಎಂದ ನ್ಯಾಯಮಂಡಳಿ.

ಡಿಸೆಂಬರ್ 18, 2019: National Company Law Appellate Tribunal (NCLAT)ನಿಂದ ಬುಧವಾರ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮತ್ತೆ ನೇಮಕ. ಇನ್ನು ಟಾಟಾ ಗ್ರೂಪ್ ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ನೇಮಕ ಕಾನೂನು ಬಾಹಿರ ಎಂದು ಘೋಷಣೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+