For Quick Alerts
ALLOW NOTIFICATIONS  
For Daily Alerts

ಸೈಟ್ ಮಾರಾಟಕ್ಕೂ ಜಿಎಸ್ ಟಿ; ರಿಯಲ್ ಎಸ್ಟೇಟ್ ಗೆ ಗಾಯದ ಮೇಲೆ ಬರೆ

|

ಒಳಚರಂಡಿ, ನೀರಿನ ಸಂಪರ್ಕ ಹಾಗೂ ವಿದ್ಯುತ್ ವ್ಯವಸ್ಥೆ ಇರುವಂಥ ಸೈಟುಗಳ ಮಾರಾಟ ಮಾಡಿದರೂ ಅದಕ್ಕೆ ಜಿಎಸ್ ಟಿ (ಸರಕು ಹಾಗೂ ಸೇವಾ ತೆರಿಗೆ) ಅನ್ವಯ ಆಗುತ್ತದೆ ಎಂದು ಅಥಾರಿಟಿ ಆನ್ ಆಡ್ವಾನ್ಸ್ ರೂಲಿಂಗ್ (ಎಎಆರ್) ತಿಳಿಸಿದೆ. ರಿಯಲ್ ಎಸ್ಟೇಟ್ ಡೆವಲಪರ್ ಸೈಟ್ ಗೆ ಒಳಚರಂಡಿ, ನೀರಿನ ಸಂಪರ್ಕ ಹಾಗೂ ವಿದ್ಯುತ್ ವ್ಯವಸ್ಥೆ ಯಂಥ ಪ್ರಾಥಮಿಕ ಅಗತ್ಯಗಳನ್ನು ಒದಗಿಸಿದಲ್ಲಿ ಅಂಥ ಭೂಮಿ ಮಾರಾಟ ಮಾಡುವಾಗ ಜಿಎಸ್ ಟಿ ಬೀಳುತ್ತದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದ್ದು, ತಾತ್ಕಾಲಿಕ ತಡೆ ಸಿಕ್ಕಿದೆ. ಕೆಲವು ತಜ್ಞರ ಪ್ರಕಾರ, ಸೈಟ್ ಗಳು ಜಿಎಸ್ ಟಿ ಅಡಿಯಲ್ಲಿ ಬರುವುದಿಲ್ಲ. ಎಎಆರ್ ಅಂತಿಮಗೊಳಿಸಿರುವಂತೆ, "ಖರೀದಿದಾರರಿಗೆ ಮಾರಾಟ ಮಾಡುವ ಉದ್ದೇಶದಿಂದ ಕಟ್ಟಿರುವ ಸಮುಚ್ಚಯ" ಎಂಬ ವರ್ಗದ ಅಡಿಯಲ್ಲಿ ಅಭಿವೃದ್ಧಿ ಮಾಡಲಾದ ಸೈಟ್ ಗಳು ಬರುತ್ತವೆ. ಅಂಥದ್ದಕ್ಕೆ ಜಿಎಸ್ ಟಿ ಹಾಕಲಾಗುತ್ತದೆ.

ರಿಯಲ್ ಎಸ್ಟೇಟ್ ಬುಡ ಅಲುಗಾಡಿಸಿದ ವಾಣಿಜ್ಯ ಸಚಿವ ಗೋಯಲ್ ಹೇಳಿಕೆರಿಯಲ್ ಎಸ್ಟೇಟ್ ಬುಡ ಅಲುಗಾಡಿಸಿದ ವಾಣಿಜ್ಯ ಸಚಿವ ಗೋಯಲ್ ಹೇಳಿಕೆ

ಅರ್ಜಿದಾರರೊಬ್ಬರು ಗುಜರಾತ್ ಎಎಆರ್ ಮೆಟ್ಟಿಲೇರಿದ್ದರು. ಅಲ್ಲಿನ ಪೀಠ ನೀಡಿದ ಆದೇಶ ಇದು. ಇನ್ನು ಇದೇ ವೇಳೆ, ಅಭಿವೃದ್ಧಿ ಪಡಿಸಿದ ಭೂಮಿಯನ್ನು ಸೈಟುಗಳಾಗಿ ಮಾರಾಟ ಮಾಡುವಾಗ ಭೂಮಿಯ ವೆಚ್ಚದಲ್ಲಿ ಸೇರಿಸಬಹುದು. ಅದೇ ರೀತಿ ವಿವಿಧ ವ್ಯವಸ್ಥೆಗಳನ್ನು ಆಯಾ ಪ್ರಮಾಣದ ಆಧಾರದಲ್ಲಿ ಸೇರಿಸಲು ಸೂಚಿಸಲಾಗಿದೆ.

ಸೈಟ್ ಮಾರಾಟಕ್ಕೂ ಜಿಎಸ್ ಟಿ; ರಿಯಲ್ ಎಸ್ಟೇಟ್ ಗೆ ಗಾಯದ ಮೇಲೆ ಬರೆ

ಈ ಆದೇಶದಿಂದ ರಿಯಲ್ ಎಸ್ಟೇಟ್ ವಲಯಕ್ಕೆ ಹೊಡೆತ ಬೀಳಲಿದೆ. ಈಗಾಗಲೇ ಆರ್ಥಿಕ ಕುಸಿತದಿಂದ ರಿಯಲ್ ಎಸ್ಟೇಟ್ ಸಮಸ್ಯೆಯಲ್ಲಿದೆ. ಅಭಿವೃದ್ಧಿ ಪಡಿಸಿದ ಸೈಟ್ ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಈಗಿರುವ ತೆರಿಗೆ ಅನುಕೂಲವೂ ಹೋದರೆ ಸನ್ನಿವೇಶ ಕಠಿಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary

Sale of plots with drainage, water line, electricity to attract GST

Developed plots with drainage, electricity, water line attracts GST. Here is the details of AAR order.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X