For Quick Alerts
ALLOW NOTIFICATIONS  
For Daily Alerts

Amazon Layoff: ಭಾರತ ಸೇರಿ ಜಾಗತಿಕ ಸಾವಿರಾರು ನೌಕರರ ವಜಾಗೆ ಕಂಪನಿ ನಿರ್ಧಾರ, ಕಾರಣ ತಿಳಿಯಿರಿ

|

ಬೆಂಗಳೂರು, ಜನವರಿ 15: ಇ-ಕಾಮರ್ಸ್ ದೈತ್ಯ ಕಂಪನಿಯಾಗಿರುವ ಅಮೆರಿಕಾ ಮೂಲಕ 'ಅಮೆಜಾನ್' ಸಂಸ್ಥೆ ಸಾಮೂಹಿಕ ವಾಗಿ ಭಾರತದ ಸೇರಿದಂತೆ ಜಾಗತಿಕವಾಗಿ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಸಾವಿರಾರು ಉದ್ಯೋಗಿಗಳಿಗೆ ಕಂಪನಿ ಆಘಾತ ನೀಡಿದೆ.

 

ನೌಕರರ ವಜಾ ಸುದ್ದಿ ಇತ್ತೀಚೆಗಷ್ಟೇ ಹೊರ ಬಿದ್ದಿದೆ. ಭಾರತದಲ್ಲಿ ಸುಮಾರು 1,000 ನೌಕರರೂ ಸೇರಿದಂತೆ ಜಾಗತಿಕವಾಗಿ 18,000 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವುದಾಗಿ ಅಮೆಜಾನ್ ಘೋಷಣೆ ಮಾಡಿದೆ. ಕಂಪನಿಯಿಂದ ವಜಾಗೊಳ್ಳಲಿರುವ ಉದ್ಯೋಗಿಗಳು ಸುದ್ದಿ ತಾವು ವಜಾ ಪಟ್ಟಿಯಲ್ಲಿದ್ದೇವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಕೆಲವರು ದಿಗ್ಭ್ರಮೆಗೊಂಡಿದ್ದು, ಕಚೇರಿಯಿಂದಲೇ ಕಣ್ಣೀರು ಹಾಕುತ್ತಾ ಹೊರ ನಡೆದ ಪ್ರಸಂಗವು ನಡೆದಿದೆ ಎಂದು ನ್ಯೂಯಾಕ್‌ ಟೈಮ್ಸ್ ವರದಿ ಮಾಡಿದೆ.

 
Amazon Layoff: ಸಾವಿರಾರು ನೌಕರರ ವಜಾಗೆ ನಿರ್ಧಾರ, ಕಾರಣ ತಿಳಿಯಿರಿ

7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ

ಅಮೆಜಾನ್ ಸಾಮೂಹಿಕ ವಜಾ ಮಾಡುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಉದ್ಯೋಗಿಗಳು ದುಃಖದ ಕಡಲಲ್ಲಿ ಮುಳಗುಇದ್ದಾರೆ. ಅವರು ಅಳುವ ದೃಶ್ಯಗಳನ್ನು 'ಅಮೆಜಾನ್ ಇಂಡಿಯಾ' ನೌಕರರೊಬ್ಬರು 'ಗ್ರೇಪ್‌ವೈನ್‌' ಎಂಬ ವೃತ್ತಿಪರರ ಸಮುದಾಯ ಅಪ್ಲಿಕೇಶನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬೇರೆ ಬೇರೆ ಕಂಪನಿಗಳ ನೌಕರರು ವಿಷಾದ ವ್ಯಕ್ತಪಡಿಸಿದ್ದಾರೆ. ಕೆಲವರು ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಅಮೆಜಾನ್ ಸಂಸ್ಥೆಗೆ ಲಾಭ ಕಡಿಮೆ ಆಗಿದೆ ಎನ್ನಲಾಗಿದೆ. ಈ ಕಾರಣಕ್ಕೆ ಭಾರತ ಸೇರಿದಂತೆ ಜಾಗತಿಕವಾಗಿ ಒಂದಷ್ಟು ನೌಕರರನ್ನು ವಜಾಗೊಳಿಸಿ ವೆಚ್ಚಕ್ಕೆ ಕಡಿವಾಣ ಹಾಕುವ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

Amazon Layoff: ಸಾವಿರಾರು ನೌಕರರ ವಜಾಗೆ ನಿರ್ಧಾರ, ಕಾರಣ ತಿಳಿಯಿರಿ

ಉದ್ಯೋಗಿಗಳ ಆತಂಕ:ಗ್ರೇಪ್‌ವೈನ್‌ ಪೋಸ್ಟ್
ನನ್ನ ಟೀಂನ ಶೇ. 75ರಷ್ಟು ಉದ್ಯೋಗಿಗಳು ವಜಾಗೊಂಡಿದ್ದಾರೆ. ಉಳಿದುಕೊಂಡಿರುವ ಶೇ. 25 ಉದ್ಯೋಗಿಗಳ ಪೈಕಿ ನಾನು ಒಬ್ಬ. ಈ ವಜಾ ಪ್ರಕ್ರಿಯೆಯಿಂದಾಗಿ ನೆಮ್ಮದಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೇಲಧಿಕಾರಿಗಳು ಕ್ಯಾಬಿನ್‌ಒಳಗೆ ಕೂತು ಸಿಬ್ಬಂದಿಯನ್ನು ವಜಾ ಮಾಡುತ್ತಿದ್ದಾರೆ. ಸಿಬ್ಬಂದಿ ಕಚೇರಿಯಲ್ಲಿ ಅಳುತ್ತಿದ್ದಾರೆ ಎಂದು ಮತ್ತೊಬ್ಬ ಉದ್ಯೋಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಉದ್ಯೋಗಿಗಳು ಹಂಚಿಕೊಂಡ ವಿಡಿಯೋ/ ಪೋಸ್ಟ್‌ಗಳನ್ನು ಗ್ರೇಪ್‌ವೈನ್‌ ನಲ್ಲಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಪ್ರಕಟಿಸಿದೆ.

ಕಳೆದ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಂಪನಿ ಶಾಕಿಂಗ್ ಸುದ್ದಿಯೊಂದನ್ನು ನೀಡಿತ್ತು. ಕಂಪನಿಯ ವ್ಯವಹಾರ, ವಹೀವಾಟಿನಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇದೀಗ ಇದೇ ಕಾರಣದಿಂದ ಹೊಸಬರು, ಹಿರಿಯ ಅನುಭವಸ್ಥರು ಎಂಬ ಸಣ್ಣದೊಂದು ಲೆಕ್ಕವು ಇಲ್ಲದೇ ಭಾರತದಲ್ಲಿ ಸುಮಾರು ಒಂದು ಸಾವಿರ ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಹೀಗಾಗಿ ಬೆಂಗಳೂರು, ಗುರುಗ್ರಾಮ್ ಮತ್ತು ಇತರ ಸ್ಥಳಗಳಲ್ಲಿನ ಅಮೆಜಾನ್ ಇಂಡಿಯಾ ಕಚೇರಿಗಳ ನೌಕರರು ಸಂಕಷ್ಟ ಎದುರಾಗುವ ಆತಂಕದಲ್ಲಿದ್ದಾರೆ.

ಸಾಮೂಹಿಕ ವಜಾ ಹಾಗೂ ಸ್ವಯಂಪ್ರೇರಿತ ಪ್ರತ್ಯೇಕತಾ ನೀತಿಗೆ ಕುರಿತಂತೆ ವಾರದ ಹಿಂದಷ್ಟೇ ಪುಣೆಯಲ್ಲಿರುವ ಕಾರ್ಮಿಕರ ಆಯುಕ್ತರ ಕಚೇರಿಯು ಅಮೆಜಾನ್‌ಗೆ ಇಂಡಿಯಾಗೇ ನೋಟಿಸ್ ಜಾರಿ ಮಾಡಿತ್ತು. ಕೆಲವು ಕಾರಣಗಳಿಂದ ಅಮೆಜಾನ್ ತನ್ನ ಆರಂಭಿಕ ಹಂತದ ವ್ಯವಹಾರ ನಿಲ್ಲಿಸಲಿದೆ ಎಂದು ತಿಳಿದು ಬಂದಿದೆ.

English summary

E Commerce Amazon Company Has Announced For 18,000 Employees Layoff In Globally Soon

E Commerce Amazon Company has announced for approximately 18,000 employees dismissed in globally soon, include Indian 1000 employee,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X