For Quick Alerts
ALLOW NOTIFICATIONS  
For Daily Alerts

3 ಸಾವಿರ ಕೋಟಿ ವಂಚನೆ: ಹೈದರಾಬಾದ್‌ ಕಂಪನಿಯ ಎಂಡಿ ಇಡಿ ವಶಕ್ಕೆ

|

ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಹೈದರಾಬಾದ್‌ ಮೂಲದ ಕಂಪನಿಯ ನಿರ್ದೇಶಕರನ್ನು ಕಳೆದ ವಾರ ಬಂಧನ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇಡಿ) ಗುರುವಾರ ಹೇಳಿದೆ. ಈ ಬಂಧನವವು ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟದಲ್ಲಿ ರೂ 3,316 ಕೋಟಿ ವಂಚನೆಗೆ ಸಂಬಂಧಿಸಿದ್ದಾಗಿದೆ ಎಂದು ವರದಿ ತಿಳಿಸಿದೆ.

ಪೃಥ್ವಿ ಇನ್ಫರ್ಮೇಷನ್ ಸೊಲ್ಯೂಷನ್ಸ್ ಲಿಮಿಟೆಡ್ (ಪಿಐಎಸ್ಎಲ್) ನ ವ್ಯವಸ್ಥಾಪಕ ನಿರ್ದೇಶಕರಾದ ಉಪಲಪತಿ ಸತೀಶ್ ಕುಮಾರ್‌ರನ್ನು ಆಗಸ್ಟ್ 12 ರಂದು ಬಂಧಿಸಲಾಗಿದೆ ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಪ್ರಕರಣ ದಾಖಲಾಗಿದ್ದು ಹಣ ವಂಚನೆಗೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಸತೀಶ್ ಕುಮಾರ್‌ರನ್ನು ಹತ್ತು ದಿನಗಳ ಕಸ್ಟಡಿಗೆ ನೀಡಿದೆ ಎಂದು ಹೇಳಲಾಗಿದೆ.

ಎಸ್‌ಬಿಐನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ: ಇಲ್ಲಿದೆ ವಿವರಎಸ್‌ಬಿಐನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ: ಇಲ್ಲಿದೆ ವಿವರ

ಈ ಹಿಂದೆ ಪಿಐಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಉಪಲಪತಿ ಸತೀಶ್ ಕುಮಾರ್‌ರ ಸಹೋದರಿ ವಿ ಹಿಮಾ ಬಿಂಧುವನ್ನು ಬಂಧಿಸಲಾಗಿದೆ. ವಿ ಹಿಮಾ ಬಿಂಧು ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ ಎಂದು ವರದಿ ಉಲ್ಲೇಖ ಮಾಡಿದೆ. ವಿ ಹಿಮಾ ಬಿಂಧು ನಗರ ಮೂಲದ ಟೆಲಿಕಾಂ ಉಪಕರಣಗಳ ತಯಾರಿಕಾ ಕಂಪನಿ ವಿಎಂಸಿಎಸ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಎಂದು ಮಾಹಿತಿ ಲಭಿಸಿದೆ. ಆಕೆಯನ್ನು ಜಾರಿ ಜಾರಿ ನಿರ್ದೇಶನಾಲಯವು ಈ ತಿಂಗಳ ಆರಂಭದಲ್ಲಿ ಬಂಧನ ಮಾಡಿತ್ತು ಎಂದು ವರದಿಯು ವಿವರಿಸಿದೆ.

 3 ಸಾವಿರ ಕೋಟಿ ವಂಚನೆ: ಹೈದರಾಬಾದ್‌ ಕಂಪನಿಯ ಎಂಡಿ ಇಡಿ ವಶಕ್ಕೆ

ಆದರೆ ತನಗೆ ಹಾಗೂ ಈ ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಿಐಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಉಪಲಪತಿ ಸತೀಶ್ ಕುಮಾರ್‌ ಹೇಳಿಕೊಂಡಿದ್ದಾರೆ. ನನಗೆ ಹಾಗೂ ಈ ಪಿಐಎಸ್ಎಲ್‌ನ ನಾನ್‌ ಪರ್ಫಾಮಿಂಗ್‌ ಅಸೆಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸತೀಶ್ ಕುಮಾರ್‌ ಹೇಳಿದ್ದಾರೆ. ಆದರೆ ಸುಮಾರು 40 ಕ್ಕೂ ಅಧಿಕ ಕಂಪೆನಿಯ ಹಾರ್ಡ್ ಡಿಸ್ಕ್‌ಗಳು ಜುಲೈ 20 ರಂದು ಸತೀಶ್ ಕುಮಾರ್‌ ನಿವಾಸದಲ್ಲಿ ಇಡಿ ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.

ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಕುಸಿತ: ಆಗಸ್ಟ್ 19ರ ಲೇಟೆಸ್ಟ್‌ ರೇಟ್‌ ಇಲ್ಲಿದೆಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಕುಸಿತ: ಆಗಸ್ಟ್ 19ರ ಲೇಟೆಸ್ಟ್‌ ರೇಟ್‌ ಇಲ್ಲಿದೆ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಾರಿ ನಿರ್ದೇಶನಾಲಯ, ಈ ಡಿಜಿಟಲ್‌ ಡಿವೈಸ್‌ಗಳ ವಿಧಿ ವಿಜ್ಞಾನ ಪರೀಕ್ಷೆಯ ಸಂದರ್ಭದಲ್ಲಿ ಬೇನಾಮಿ ವರ್ಗಾವಣೆಯಲ್ಲಿ ತೊಡಗಿರುವುದು ತಿಳಿದು ಬಂದಿದೆ. ವಂಚನೆಯ ಮೊತ್ತವನ್ನು ವರ್ಗಾಯಿಸುವ ಪ್ರಯತ್ನಗಳಲ್ಲಿ ಭಾಗಿಯಾಗಿದ್ದರು. ತನಿಖೆಯ ಸಮಯದಲ್ಲಿ ಸತೀಶ್ ಕುಮಾರ್‌ ಯಾವುದೇ ಸಹಕಾರವನ್ನು ನೀಡಿಲ್ಲ. ಹಾಗೆಯೇ ತಮ್ಮದೇ ಆದ ಉದ್ಯಮದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಒದಗಿಸುತ್ತಿಲ್ಲ," ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ವಿಎಂಸಿಎಸ್‌ಎಲ್ ಮತ್ತು ಅದರ ಪ್ರವರ್ತಕರ ವಿರುದ್ಧ ಇಡಿ ದಾಖಲು ಮಾಡಿರುವ ಹಣ ವರ್ಗಾವಣೆ ಪ್ರಕರಣವು, ಸಿಬಿಐ ಎಫ್‌ಐಆರ್‌ ಮೇಲೆ ಆಧಾರಿಸಿದೆ. "ವಿಎಮ್‌ಸಿಎಸ್‌ಎಲ್‌ ಬ್ಯಾಂಕುಗಳ ಒಕ್ಕೂಟದಿಂದ ಸಾಲವನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಬ್ಯಾಂಕುಗಳಿಗೆ ಪ್ರಸ್ತುತ ಬಾಕಿ ಇರುವ ಮೊತ್ತವು ರೂ 3,316 ಕೋಟಿಗಳಾಗಿವೆ. ವಿಎಂಸಿಎಸ್ಎಲ್ ತನ್ನ ಖಾತೆಗಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಸಂಬಂಧಿತ ಸಂಸ್ಥೆಗಳಿಗೆ ಸಾಲವನ್ನು ನೀಡಿದೆ ಎಂದು ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಬಹಿರಂಗಪಡಿಸಿದೆ," ಎಂದು ಜಾರಿ ನಿರ್ದೇಶನಾಲಯ ಈ ಹಿಂದೆ ಆರೋಪ ಮಾಡಿತ್ತು.

ಬಿಟ್‌ಕಾಯಿನ್‌ ಬೆಲೆ ಮತ್ತಷ್ಟು ಕುಸಿತ: ಪ್ರಮುಖ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 19ರ ಬೆಲೆ ಇಲ್ಲಿದೆಬಿಟ್‌ಕಾಯಿನ್‌ ಬೆಲೆ ಮತ್ತಷ್ಟು ಕುಸಿತ: ಪ್ರಮುಖ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 19ರ ಬೆಲೆ ಇಲ್ಲಿದೆ

"ಈ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಪಿಐಎಸ್ಎಲ್ ಯಾವುದೇ ನಿರ್ದಿಷ್ಟ ಪಾತ್ರವಿಲ್ಲದೆ ಬಿಎಸ್‌ಎನ್‌ಎಲ್‌ನಿಂದ ಎಲ್ಲಾ ರಿಸಿಪ್ಟ್‌ಗಳಿಗೆ ಶೇಕಡಾ 3 ರಷ್ಟು ಕಮಿಷನ್‌ ನೀಡಲಾಗಿದೆ ಎಂಬುವುದನ್ನು ಕೂಡಾ ಬಹಿರಂಗಪಡಿಸಿದೆ. ವಿಎಂಸಿಎಸ್‌ಎಲ್ ನಕಲಿ ಘಟಕಗಳ ಹೆಸರಿನಲ್ಲಿ 692 ಕೋಟಿ ಮೌಲ್ಯದ ವಿವಿಧ ಕ್ರೆಡಿಟ್ ಲೆಟರ್‌ಗಳನ್ನು ತೆರೆದಿದೆ ಎಂಬುವುದನ್ನು ಕೂಡಾ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಕಂಡುಹಿಡಿದಿದೆ," ಎಂದು ಜಾರಿ ನಿರ್ದೇಶನಾಲಯ ದೂರಿದೆ.

(ಒನ್‌ ಇಂಡಿಯಾ)

English summary

ED Arrests PISL managing director in 3,316 crore bank fraud case

ED Arrests Hyderabad-based company PISL managing director V Satish Kumar in 3,316 crore bank fraud.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X