For Quick Alerts
ALLOW NOTIFICATIONS  
For Daily Alerts

ಯೆಸ್‌ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ: ಅನಿಲ್ ಅಂಬಾನಿಗೆ ಇಡಿ ಸಮನ್ಸ್

|

ಯೆಸ್‌ ಬ್ಯಾಂಕ್‌ನಿಂದ ಅಕ್ರಮ ಹಣ ವರ್ಗಾವಣೆ ಹಾಗೂ ನಷ್ಟವೊಂದಿದ ಕಂಪನಿಗಳಿಗೆ ಸಾಲ ನೀಡಿರುವ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಬಹಳ ಜಾಗರೂಕತೆಯಿಂದ ವಿಚಾರಣೆ ನಡೆಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಲಯನ್ಸ್ ಗ್ರೂಪ್ ಚೇರ್‌ಮೆನ್ ಅನಿಲ್ ಅಂಬಾನಿಗೂ ಸೋಮವಾರ ಸಮನ್ಸ್‌ ನೀಡಿದೆ.

 

ಯೆಸ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, ವಿತ್‌ಡ್ರಾ ಮಿತಿ ಬುಧವಾರಕ್ಕೆ ಕೊನೆ

ಯೆಸ್ ಬ್ಯಾಂಕ್ ಸಾವಿರಾರು ಕೋಟಿ ರುಪಾಯಿ ವಸೂಲಾಗದ ಸಾಲ(ಎನ್‌ಪಿಎ)ವನ್ನು ಹೊಂದಿದೆ. ಹೀಗೆ ಯೆಸ್‌ ಬ್ಯಾಂಕ್ ನಿಂದ ಸಾಲ ಪಡೆದು ತೀರಿಸದೆ ಇರುವ ಕಂಪನಿಯಲ್ಲಿ ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಕೂಡ ಸೇರಿದೆ. ಬಹುಮೊತ್ತದ ಸಾಲ ಪಡೆದಿರುವ ಅನಿಲ್ ಅಂಬಾನಿ ನಷ್ಟವೊಂದಿದ್ದು ಸಾಲವನ್ನು ತೀರಿಸಿಲ್ಲ. ಹೀಗೆ ಬಹು ಪ್ರಕರಣಗಳು ಸಾಲ ಪಡೆದು ತೀರಿಸದೇ ಇರುವುದು ಯೆಸ್‌ ಬ್ಯಾಂಕ್‌ನ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ.

ಯೆಸ್‌ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ: ಅನಿಲ್ ಅಂಬಾನಿಗೆ ಇಡಿ ಸಮನ್ಸ್

ಈ ವಿಚಾರವಾಗಿ ಅನಿಲ್‌ ಅಂಬಾನಿಗೆ ಇಡಿ ಸಮನ್ಸ್ ನೀಡಿದ್ದು, ಹಾಜರಾಗುವಂತೆ ಹೇಳಿದೆ. ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮೇಲ್ವಿಚಾರಣೆಯಲ್ಲಿ ಅಂಬಾನಿ ಸಾವಿರಾರು ಕೋಟಿ ಸಾಲ ಪಡೆದಿದ್ದಾರೆ. ಆದಾಗ್ಯೂ ಆರೋಗ್ಯ ಸಮಸ್ಯೆಯಿಂದ ಇಡಿ ಕಚೇರಿಗೆ ಹಾಜರಾಗುವ ದಿನಾಂಕದಲ್ಲಿ ವಿನಾಯಿತಿ ಬೇಕು ಎಂದು ಅನಿಲ್ ಅಂಬಾನಿ ಕೇಳಿಕೊಂಡಿದ್ದು, ಹಾಜರಾಗಬೇಕಿರುವ ದಿನಾಂಕ ಬದಲಾಗಿದೆ.

ಅಂಬಾನಿಯ ಗ್ರೂಪ್ ಬ್ಯಾಂಕಿನಿಂದ 12,800 ಸಾವಿರ ಕೋಟಿಗಳಷ್ಟು ಸಾಲ ಪಡೆದಿದ್ದು ಹಿಂದಿರುಗಿಸಲ್ಲ. ಇದೆಲ್ಲಾ ದೊಡ್ಡ ಮಟ್ಟದಲ್ಲಿ ಬ್ಯಾಂಕ್‌ಗೆ ಹೊರೆಯಾಗಿದ್ದು ವಸೂಲಾಗದ ಸಾಲವಾಗಿ ಪರಿಣಮಿಸಿದೆ.

ಮಾರ್ಚ್‌ 6ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನಿಲ್ ಅಂಬಾನಿ ಗ್ರೂಪ್, ಎಸ್ಸೆಲ್, ಐಎಲ್ಎಫ್ಎಸ್, ಡಿಹೆಚ್ಎಫ್ಎಲ್ ಮತ್ತು ವೊಡಾಫೋನ್ ಕಾರ್ಪೊರೇಟ್‌ ಸಾಲಗಳಿಂದ ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದರು.

English summary

ED Summons Anil Ambani Connection With Yes Bank

The Enforcement Directorate on Monday summoned Anil Ambani in connection with its money laundering probe against Yes Bank
Story first published: Monday, March 16, 2020, 11:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X