ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಮನ್ನಾ ಮಾಡಿದ ದೆಹಲಿ ಸರ್ಕಾರ

ಬ್ಯಾಟರಿಯಿಂದ ಚಲಿಸುವ ವಾಹನಗಳಿಗೆ ದೆಹಲಿ ಸರ್ಕಾರ ರಸ್ತೆ ತೆರಿಗೆಯಿಂದ ವಿನಾಯಿತಿ ಘೋಷಿಸಿದೆ. ಈ ಬಗ್ಗೆ ಭಾನುವಾರ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದು, ಇವಿ (ಎಲೆಕ್ಟಿಕ್ ವಾಹನ) ನೀತಿ ಘೋಷಿಸುವ ವೇಳೆ ಅರವಿಂದ್ ಕೇಜ್ರಿವಾಲ್ ಏನು ಹೇಳಿದ್ದರೋ ಆ ರೀತಿ ಬ್ಯಾಟರಿಯಿಂದ ಚಲಿಸುವ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ.

ಕೇಜ್ರಿವಾಲ್ ಸರ್ಕಾರವು ಆಗಸ್ಟ್ ನಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಆರಂಭಿಸಿತ್ತು. ದೆಹಲಿಯಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ನೋಂದಣಿ ಶುಲ್ಕ, ರಸ್ತೆ ತೆರಿಗೆ ಮನ್ನಾ ಹಾಗೂ ಹೊಸ ಕಾರಿಗೆ 1.5 ಲಕ್ಷ ರುಪಾಯಿ ತನಕ ಪ್ರೋತ್ಸಾಹಧನ ಒದಗಿಸುವುದಾಗಿ ಘೋಷಣೆ ಮಾಡಲಾಗಿತ್ತು.

ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಮನ್ನಾ ಮಾಡಿದ ದೆಹಲಿ ಸರ್ಕಾರ

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 30 ಸಾವಿರ ರುಪಾಯಿ ತನಕ ಪ್ರೋತ್ಸಾಹಧನ, ಆಟೋ, ಇ ರಿಕ್ಷಾಗಳು, ಸರಕು ಸಾಗಣೆ ಹಾಗೂ ಕಾರುಗಳಿಗೆ 1.5 ಲಕ್ಷದ ತನಕ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಲಾಗಿತ್ತು. ಈ ಹೊಸ ನೀತಿಯ ಮೂಲಕ ದೆಹಲಿಯಲ್ಲಿ 2024ರ ಹೊತ್ತಿಗೆ ಶೇಕಡಾ 25ರಷ್ಟು ಎಲೆಕ್ಟ್ರಿಕ್ ವಾಹನ ಇರಬೇಕು ಎಂಬ ಗುರಿ ಇರಿಸಿಕೊಂಡಿದೆ. ಜತೆಗೆ ದೆಹಲಿ ಆರ್ಥಿಕತೆಗೆ ಇದರಿಂದ ಉತ್ತೇಜನ ದೊರೆತು, ಮಾಲಿನ್ಯ ಪ್ರಮಾಣ ಕಡಿಮೆ ಆಗುವ ನಿರೀಕ್ಷೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+