For Quick Alerts
ALLOW NOTIFICATIONS  
For Daily Alerts

ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?

|

ವಾಷಿಂಗ್ಟನ್, ನ. 9: ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದಾಗಿನಿಂದ ಇಲಾನ್ ಮಸ್ಕ್ ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. 44 ಬಿಲಿಯನ್ ಡಾಲರ್ ತೆತ್ತು ಟ್ವಿಟ್ಟರ್ ಕೊಂಡ ಇಲಾನ್ ಮಸ್ಕ್ 70 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಅವರ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಷೇರುಗಳು ಕುಸಿತ ಕಂಡಿರುವುದು ಈ ನಷ್ಟಕ್ಕೆ ಕಾರಣ ಎನ್ನಲಾಗಿದೆ. ವರದಿಯ ಪ್ರಕಾರ 273.5 ಬಿಲಿಯನ್ ಡಾಲರ್ (22 ಲಕ್ಷ ಕೋಟಿ ರೂಪಾಯಿ) ಇದ್ದ ಇಲಾನ್ ಮಸ್ಕ್ ಒಟ್ಟು ಆಸ್ತಿ ಮೌಲ್ಯ 200 ಬಿಲಿಯನ್ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಈಗ್ಗೆ ಅವರು 6 ಲಕ್ಷ ಕೋಟಿ ರೂಗಿಂತ ಹೆಚ್ಚು ಮೌಲ್ಯದ ಸಂಪತ್ತನ್ನು ಕಳೆದುಕೊಂಡಿದ್ದಾರೆ.

 

ವಿಶ್ವದ ಅತಿದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಇಲಾನ್ ಮಸ್ಕ್ ಅವರ ಅಗ್ರಸ್ಥಾನದ ಅಂತರ ಕಡಿಮೆ ಆಗಿದೆ. ಗೌತಮ್ ಅದಾನಿ ಮತ್ತು ಬೆರ್ನಾರ್ಡ್ ಆರ್ನಾಲ್ಟ್ ಅವರು ಇಲಾನ್ ಮಸ್ಕ್ ಸಮೀಪವೇ ಇದ್ದಾರೆ. ಮೊದಲ ಸ್ಥಾನ ಮತ್ತು ಎರಡನೇ ಸ್ಥಾನದ ನಡುವೆ ಅಂತರ 50 ಬಿಲಿಯನ್ ಡಾಲರ್ ಕೂಡ ಇಲ್ಲ.

ಯಾಕೆ ಈ ಪರಿ ಕುಸಿತ?

ಯಾಕೆ ಈ ಪರಿ ಕುಸಿತ?

ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಹಣ ಹೊಂದಿಸಲು ತಮ್ಮ ಟೆಸ್ಲಾ ಷೇರುಗಳನ್ನು ಮಾರುತ್ತಾ ಬಂದಿದ್ದಾರೆ. ಆಗಸ್ಟ್ ತಿಂಗಳಲ್ಲಿ 7 ಬಿಲಿಯನ್ ಡಾಲರ್ (57 ಸಾವಿರ ಕೋಟಿ ರೂಪಾಯಿ) ಮೌಲ್ಯದ ಷೇರುಗಳನ್ನು ಮಾರಿದ್ದರು. ಅಗ ಷೇರುಪೇಟೆಯಲ್ಲಿ ಟೆಸ್ಲಾ ಷೇರುಗಳು ಕುಸಿತ ಕಂಡಿದ್ದವು. ಈಗ ನವೆಂಬರ್ 4ರಿಂದ ನವೆಂಬರ್ 8ರವರೆಗಿನ ಅವಧಿಯಲ್ಲಿ ಎಲಾನ್ ಮಸ್ಕ್ ಟೆಸ್ಲಾದ 1.95 ಕೋಟಿ ಷೇರುಗಳನ್ನು 4 ಬಿಲಿಯನ್ ಡಾಲರ್ ಮೊತ್ತಕ್ಕೆ ಮಾರಿದ್ದಾರೆ. ಇದು ನಿನ್ನೆ ಮಂಗಳವಾರ ಸಲ್ಲಿಸಲಾದ ಸೆಕ್ಯೂರಿಟಿ ಫೈಲಿಂಗ್‌ನಿಂದ ಮಾಹಿತಿ ಗೊತ್ತಾಗಿದೆ.

ಏಪ್ರಿಲ್‌ನಿಂದ ಈಚೆಗೆ ಎಲಾನ್ ಮಸ್ಕ್ 19 ಬಿಲಿಯನ್ ಡಾಲರ್ (ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ವರ್ಷ ಟೆಸ್ಲಾದ ಷೇರು ಮೌಲ್ಯ ಶೇ. 52ರಷ್ಟು ಕುಸಿತವಾಗಿದೆ. ಸದ್ಯ ಒಂದು ಷೇರು ಬೆಲೆ 191.30 ಡಾಲರ್‌ಗೆ (ಸುಮಾರು 15 ಸಾವಿರ ರೂಪಾಯಿ) ಬಂದು ನಿಂತಿದೆ.

ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಗೋಸ್ಕರ ಹಣ ಹೊಂದಿಸಲು ಟೆಸ್ಲಾದ ತಮ್ಮ ಆಸ್ತಿ ಮಾರಾಟ ಮಾಡಿದ್ದು ಇತರ ಷೇರುದಾರರಿಗೆ ಆತಂಕ ತಂದಿರಬಹುದು. ಅವರು ಟೆಸ್ಲಾ ಷೇರು ಮಾರಿದಾಗೆಲ್ಲಾ ಬೆಲೆ ಕುಸಿತ ಕಾಣುತ್ತಲೇ ಬಂದಿದ್ದಾರೆ. ಆದಾಗ್ಯೂ ಮಸ್ಕ್ ತಮ್ಮ ಮಾರಾಟ ಪ್ರಯತ್ನ ನಿಲ್ಲಿಸಲೇ ಇಲ್ಲ.

 

ಷೇರು ಮಾರದೇ ದಾರಿ ಇಲ್ಲ
 

ಷೇರು ಮಾರದೇ ದಾರಿ ಇಲ್ಲ

ಟೆಸ್ಲಾ ಷೇರು ಮಾರುವುದು ಬಿಟ್ಟರೆ ಮಸ್ಕ್‌ಗೆ ಅನ್ಯಥಾ ದಾರಿ ಇರಲಿಲ್ಲ. ಟ್ವಿಟ್ಟರ್ ಅನ್ನು 44.5 ಬಿಲಿಯನ್ ಡಾಲರ್‌ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಎಲಾನ್ ಮಸ್ಕ್ ಅದಕ್ಕಾಗಿ ಹಣವನ್ನು ಹೊಂದಿಸಬೇಕಿತ್ತು. ಮಾರ್ಗನ್ ಸ್ಟಾನ್ಲೀ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಟ್ವಿಟ್ಟರ್‌ಗೆ ಹೂಡಿಕೆ ಮಾಡಿದವು. ಮಸ್ಕ್ ವೈಯಕ್ತಿಕವಾಗಿ 15.5 ಬಿಲಿಯನ್ ಡಾಲರ್ ಹಣವನ್ನು ಹೊಂದಿಸಬೇಕಿತ್ತು.

ಇಲಾನ್ ಮಸ್ಕ್ ಅವರ ಬಹುತೇಕ ಆಸ್ತಿ ನೆಲೆ ನಿಂತಿರುವುದು ಅವರ ಟೆಸ್ಲಾ ಕಂಪನಿಯ ಷೇರುಗಳಲ್ಲಿ. ಹೀಗಾಗಿ, ಅವರು ಅದನ್ನು ಮಾರದೇ ಬೇರೆ ದಾರಿ ಇರಲಿಲ್ಲ. ಈಗ ಒಂದು ವೇಳೆ ಮಾರ್ಗನ್ ಸ್ಟಾನ್ಲೀ ಮೊದದಲಾದ ಹೂಡಿಕೆದಾರರು ಟ್ವಿಟ್ಟರ್‌ನಿಂದ ನಿರ್ಗಮಿಸಿದರೆ ಮಸ್ಕ್ ಅವರು ಟೆಸ್ಲಾದ ಇನ್ನಷ್ಟು ಷೇರುಗಳನ್ನು ಮಾರಬೇಕಾಗಬಹುದು. ಅದೆಲ್ಲವೂ ಮಸ್ಕ್ ನೇತೃತ್ವದಲ್ಲಿ ಟ್ವಿಟ್ಟರ್ ಮುಂದಿನ ಹೆಜ್ಜೆಗಳು ಹೇಗಿರುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ.

 

ಶ್ರೀಮಂತರ ಪಟ್ಟಿ

ಶ್ರೀಮಂತರ ಪಟ್ಟಿ

ಇಲಾನ್ ಮಸ್ಕ್ ಅವರ 273.5 ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಈಗ ಕರಗಿ ಸುಮಾರು 198 ಬಿಲಿಯನ್ ಡಾಲರ್‌ಗೆ ಬಂದಿರುವ ಅಂದಾಜಿದೆ. ಆದರೂ ವಿಶ್ವ ಶ್ರೀಮಂತಿಕೆಯಲ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ. ಫ್ರಾನ್ಸ್ ದೇಶದ ಲಕ್ಸುರಿ ಸರಕುಗಳ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗೆ ತೀರಾ ಸಮೀಪವೇ ಭಾರತದ ಗೌತಮ್ ಅದಾನಿ ಇದ್ದಾರೆ. ಬರ್ನಾರ್ಡ್ ಆರ್ನಾಲ್ಟ್‌ಗೂ ಮಸ್ಕ್‌ಗೂ ಇರುವ ಅಂತರ ಬಹಳ ಕಡಿಮೆ ಆಗಿದೆ. ಇತ್ತೀಚಿಗೆ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿಶ್ವದ ಅತಿದೊಡ್ಡ ಶ್ರೀಮಂತರು ಮತ್ತು ಅವರ ಸಂಪತ್ತಿನ ವಿವರ ಇಲ್ಲಿದೆ.

1) ಇಲಾನ್ ಮಸ್ಕ್: 198.6 ಬಿಲಿಯನ್ ಡಾಲರ್ (ಸುಮಾರು 16 ಲಕ್ಷ ಕೋಟಿ ರೂಪಾಯಿ)
2) ಬರ್ನಾರ್ಡ್ ಆರ್ನಾಲ್ಟ್: 154.7 ಬಿಲಿಯನ್ ಡಾಲರ್ (ಸುಮಾರು 12.6 ಲಕ್ಷ ಕೋಟಿ ರೂಪಾಯಿ)
3) ಗೌತಮ್ ಅದಾನಿ: 152.2 ಬಿಲಿಯನ್ ಡಾಲರ್
4) ಜೆಫ್ ಬೇಜೋಸ್: 146.9 ಬಿಲಿಯನ್ ಡಾಲರ್
5) ಬಿಲ್ ಗೇಟ್ಸ್: 104.6 ಬಿಲಿಯನ್ ಡಾಲರ್
6) ಲ್ಯಾರಿ ಎಲಿಸನ್: 96.8 ಬಿಲಿಯನ್ ಡಾಲರ್
7) ವಾರನ್ ಬಫೆಟ್: 95.9 ಬಿಲಿಯನ್ ಡಾಲರ್
8) ಮುಕೇಶ್ ಅಂಬಾನಿ: 91.4 ಬಿಲಿಯನ್ ಡಾಲರ್
9) ಲ್ಯಾರಿ ಪೇಜ್: 88.8 ಬಿಲಿಯನ್ ಡಾಲರ್
10) ಸೆರ್ಗೇ ಬ್ರಿನ್: 85.2 ಬಿಲಿಯನ್ ಡಾಲರ್

 

English summary

Elon Musk Twitter Saga, Tesla Loss, Net Worth Down To Below 200 Billion USD

Elon Musk is reportedly sold of his Tesla shares in last few days, resulting in the fall of tesla shares in stock market. Musk's net worth has come down to below 200 billion USD.
Story first published: Wednesday, November 9, 2022, 12:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X