For Quick Alerts
ALLOW NOTIFICATIONS  
For Daily Alerts

EPF ಬಡ್ಡಿದರ 8.65 ಪರ್ಸೆಂಟ್ ಉಳಿಸಿಕೊಳ್ಳಲು ಕಾರ್ಮಿಕ ಸಚಿವಾಲಯ ಒಲವು

|

ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯ ಸುಮಾರು ಆರು ಕೋಟಿ ಚಂದಾದಾರರಿಗೆ ಭವಿಷ್ಯ ನಿಧಿ ಠೇವಣಿಗಳ ಮೇಲೆ ಪಾವತಿಸಿದ 8.65 ಪರ್ಸೆಂಟ್ ಬಡ್ಡಿದರವನ್ನು ಉಳಿಸಿಕೊಳ್ಳಲು ಕಾರ್ಮಿಕ ಸಚಿವಾಲಯ ಒಲವು ತೋರಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಮಂಡಳಿಯ ಟ್ರಸ್ಟಿಗಳ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020 ರ ಮಾರ್ಚ್ 5 ರಂದು ನಡೆಯಲಿರುವ ಸಭೆಯಲ್ಲಿ ಇಪಿಎಫ್ (ನೌಕರರ ಭವಿಷ್ಯ ನಿಧಿ) ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಗಣಿಸುವ ಸಾಧ್ಯತೆಯಿದೆ.

EPF ಬಡ್ಡಿದರ 8.65 ಪರ್ಸೆಂಟ್ ಉಳಿಸಿಕೊಳ್ಳಲು ಕಾರ್ಮಿಕ ಸಚಿವಾಲಯ ಒಲವು

2018-19ನೇ ಹಣಕಾಸು ವರ್ಷಕ್ಕೆ 8.65 ಪರ್ಸೆಂಟ್ ಬಡ್ಡಿದರ ನೀಡಲಾಗಿತ್ತು. ಅಂಚೆ ಕಚೇರಿ ಸಣ್ಣ ಉಳಿತಾಯ ಮತ್ತು ಬ್ಯಾಂಕ್ ಬಡ್ಡಿ ಹಾಗೂ ಠೇವಣಿಗಳ ಬಡ್ಡಿ ದರಗಳು ಕಡಿಮೆಯಾಗಿರುವ ಕಾರಣಕ್ಕೆ ಪ್ರಸಕ್ತ ಹಣಕಾಸು ವರ್ಷದ ಬಡ್ಡಿ ದರ 8.35 ಪರ್ಸೆಂಟ್‌ಗೆ ತಗ್ಗಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಆದರೆ ಮಾರ್ಚ್‌ 5ರಂದು ಇಪಿಎಫ್‌ನ ಕೇಂದ್ರ ಮಂಡಳಿಯ ಟ್ರಸ್ಟಿಗಳ (ಸಿಬಿಟಿ) ಸಭೆ ನಡೆಯಲಿದ್ದು, ಬಡ್ಡಿದರದ ನಿರ್ಧಾರ ಪ್ರಕಟಗೊಳ್ಳಲಿದೆ.

ಪಿಪಿಎಫ್‌ ಮತ್ತು ಅಂಚೆ ಉಳಿತಾಯ ಯೋಜನೆಗಳ ಬಡ್ಡಿದರಕ್ಕೆ ಅನುಗುಣವಾಗಿ ಇಪಿಎಫ್‌ ಬಡ್ಡಿದರವನ್ನೂ ನಿಗದಿಪಡಿಸುವಂತೆ ಹಣಕಾಸು ಸಚಿವಾಲಯವು ಕಾರ್ಮಿಕ ಸಚಿವಾಲಯವನ್ನು ಒತ್ತಾಯಿಸುತ್ತಿದೆ. ಕೇಂದ್ರೀಯ ಮಂಡಳಿಯು ನಿಗದಿಪಡಿಸಿದ ಬಡ್ಡಿ ದರ ನೀಡಲು ಕಾರ್ಮಿಕ ಸಚಿವಾಲಯಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆಯ ಅಗತ್ಯವಿದೆ.

English summary

EPF Interest Rate Keen To Retain 8.65 Percent

The labour ministry is keen to retain an interest rate of 8.65 per cent paid on provident fund deposits
Story first published: Monday, March 2, 2020, 10:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X