For Quick Alerts
ALLOW NOTIFICATIONS  
For Daily Alerts

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ: ಬದಲಾದೀತೆ ರೈತರ ಬದುಕು?

|

ದಶಕಗಳಷ್ಟು ಹಳೆಯದಾದ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಈ ತಿದ್ದುಪಡಿಯಿಂದಾಗಿ ಕೃಷಿ ವಲಯಕ್ಕೆ ಬಂಡವಾಳ ಆಕರ್ಷಿಸಬಹುದು. ಈ ಹೊಸ ನಡೆಯಿಂದ ಧಾನ್ಯಗಳು, ಅಡುಗೆ ಎಣ್ಣೆ, ಎಣ್ಣೆ ಕಾಳುಗಳು, ದ್ವಿದಳ ಧಾನ್ಯ, ಈರುಳ್ಳಿ ಹಾಗೂ ಆಲೂಗಡ್ಡೆಯಂಥದ್ದರ ಮೇಲೆ ಇರುವ ನಿಯಂತ್ರಣ ಹೋಗುತ್ತದೆ ಎಂದಿದ್ದಾರೆ.

ಇನ್ನು ಮುಂದೆ ವರ್ತಕರಿಗೆ ಇಷ್ಟು ಪ್ರಮಾಣದಲ್ಲಿ ಮಾತ್ರ ದಾಸ್ತಾನು ಇಟ್ಟುಕೊಳ್ಳಬೇಕು ಎಂಬ ಮಿತಿ ಇರುವುದಿಲ್ಲ. ಈ ದಿನ ಐತಿಹಾಸಿಕವಾದದ್ದು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿದ್ದರೆ, ದೇಶದ ರೈತರಿಗೆ ಈ ದಿನ ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದು ತೋಮರ್ ಹೇಳಿದ್ದಾರೆ. ಇನ್ನು ಮುಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಮಸ್ಯೆಗಳು ಸಹ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.

14 ಖಾರಿಫ್ ಬೆಳೆಗೆ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ14 ಖಾರಿಫ್ ಬೆಳೆಗೆ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

ರೈತರು ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಎಲ್ಲಾದರೂ ಮಾರಾಟ ಮಾಡಬಹುದು. ರೈತರೇ ಎಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು ಎಪಿಎಂಸಿಯಿಂದ ಹೊರಗೆ ಮಾರುವ ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹಾಕುವುದಿಲ್ಲ ಒಂದು ದೇಶ, ಒಂದು ಮಾರುಕಟ್ಟೆ ಎಂಬ ದೂರದೃಷ್ಟಿಯೊಂದಿಗೆ ಭಾರತ ಮುಂದುವರಿಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಒಪ್ಪಿಗೆ: ಬದಲಾದೀತೆ ರೈತರ ಬದುಕು

ಮತ್ತೊಂದು ಮಹತ್ವದ ತೀರ್ಮಾನದಲ್ಲಿ, ರೈತರ ಭೂಮಿ ವ್ಯಾಜ್ಯಗಳ ನಿವಾರಣೆಗೆ ಎಸ್ ಡಿಎಂ ಅಥವಾ ಡಿಸಿ ಜವಾಬ್ದಾರರು ಎನ್ನಲಾಗಿದೆ. ಭಾರತದಲ್ಲಿ ಶೇಕಡಾ ಎಂಬತ್ತೈದರಷ್ಟು ಸಣ್ಣ ಹಿಡುವಳಿ ರೈತರು ಇದ್ದಾರೆ. ಇಂದಿನ ಕ್ರಮದಿಂದ ವರ್ತಕರು, ಬಂಡವಾಳ, ತಂತ್ರಜ್ಞಾನ ಹೀಗೆ ಎಲ್ಲ ಅಗತ್ಯವೂ ರೈತರಿಗೆ ದೊರೆತಂತೆ ಆಗುತ್ತದೆ ಎಂದು ತೋಮರ್ ಹೇಳಿದ್ದಾರೆ.

ಮೋದಿ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಒಪ್ಪಿಕೊಂಡಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ವ್ಯವಸ್ಥೆ ಮಾಡಿದೆ. ಸರ್ಕಾರದ ಇಂದಿನ ನಿರ್ಧಾರವು ಕೃಷಿ ವಲಯವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ಭಾರತದ ಕೃಷಿಕರ ಜೀವನ ಮಟ್ಟವು ಇದರಿಂದ ಸುಧಾರಣೆ ಕಾಣುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

English summary

Essential Commodities Act Amended Today: Highlights Of Decision

Essential commodities act amendment approved by union cabinet today. Here is the explainer about farmers benefit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X