For Quick Alerts
ALLOW NOTIFICATIONS  
For Daily Alerts

ಫೋಕ್ಸ್ ವ್ಯಾಗನ್ ನಿಂದ ಹತ್ತು ಲಕ್ಷ ಎಲೆಕ್ಟ್ರಿಕಲ್ ಕಾರು ತಯಾರಿಗೆ ಸಿದ್ಧತೆ

|

ಫೋಕ್ಸ್ ವ್ಯಾಗನ್ ನಿಂದ ಹತ್ತು ಲಕ್ಷ ಎಲೆಕ್ಟ್ರಿಕಲ್ ಕಾರುಗಳನ್ನು ತಯಾರಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿಂದೆ ಕಂಪೆನಿ ಇರಿಸಿಕೊಂಡಿದ್ದ ಗುರಿಗಿಂತ ಎರಡು ವರ್ಷ ಮುಂಚಿತವಾಗಿ ವರ್ಷಕ್ಕೆ ಹತ್ತು ಲಕ್ಷ ಎಲೆಕ್ಟ್ರಿಕ್ ಕಾರು ಉತ್ಪಾದಿಸುವುದಾಗಿ ಘೋಷಿಸಿದೆ. ಶುಕ್ರವಾರದಂದು ಈ ಬಗ್ಗೆ ಕಂಪೆನಿ ಘೋಷಣೆ ಮಾಡಿದೆ. ಜಾಗತಿಕ ತಾಪಮಾನ ಹೆಚ್ಚಳದ ಹಿನ್ನೆಲೆಯಲ್ಲಿ ವಾಹನಗಳಿಂದ ಹೊಗೆಯುಗುಳುವ ಪ್ರಮಾಣ ತಗ್ಗಿಸಬೇಕು ಎಂಬ ಒತ್ತಡವಿದೆ.

2025ರ ಹೊತ್ತಿಗೆ ಸಂಪೂರ್ಣವಾಗಿ ಬ್ಯಾಟರಿ ಚಾಲಿತ ಕಾರು ತಯಾರಿಸಬೇಕು ಎಂಬ ಗುರಿ ಈ ಹಿಂದೆ ಇತ್ತು. ಆದರೆ ಈಗ 2023ರ ಕೊನೆಗೆ ಹತ್ತು ಲಕ್ಷ ಕಾರನ್ನು, 2025ರ ಹೊತ್ತಿಗೆ 15 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಗುರಿ ಇರಿಸಿಕೊಂಡಿದೆ. ಈ ವರ್ಷ ಎಪ್ಪತ್ತು ಸಾವಿರ ಎಲೆಕ್ಟ್ರಿಕ್ ಕಾರು ಹಾಗೂ ಕಳೆದ ವರ್ಷ ಒಟ್ಟು ಐವತ್ತು ಸಾವಿರ ಎಲೆಕ್ಟ್ರಿಕ್ ಕಾರು ತಯಾರಿಸಲಾಗಿದೆ.

ಫೋಕ್ಸ್ ವ್ಯಾಗನ್ ನಿಂದ ID.3 ಪರಿಚಯಿಸುವ ಮೂಲಕ ಉತ್ಪಾದನೆ ಮತ್ತು ಮಾರಾಟ ಹೆಚ್ಚಳ ಮಾಡುವ ಗುರಿ ಇದೆ. ಇದು ಬ್ಯಾಟರಿ ಮಾಡೆಲ್ ಕಾರು. ಜತೆಗೆ ಈ ಕಾರಿಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುವ ನಿರೀಕ್ಷೆಯೂ ಇದೆ. ID.3 ಮಾಡೆಲ್ ಬೆಲೆಯು 30 ಸಾವಿರ ಯುರೋಗಿಂತ ಕಡಿಮೆ ಆಗುತ್ತದೆ. ಜತೆಗೆ ಒಮ್ಮೆ ಚಾರ್ಜ್ ಮಾಡಿದರೆ 330ರಿಂದ 550 ಕಿ.ಮೀ. ದೂರಕ್ಕೆ ಚಲಿಸುತ್ತದೆ.

ಫೋಕ್ಸ್ ವ್ಯಾಗನ್ ನಿಂದ 10 ಲಕ್ಷ ಎಲೆಕ್ಟ್ರಿಕಲ್ ಕಾರು ತಯಾರಿ ಸಿದ್ಧತೆ

2021ರಿಂದ ಯುರೋಪಿಯನ್ ಕಾರು ತಯಾರಿಕೆ ಕಂಪೆನಿಗಳಿಗೆ ಕಠಿಣ ಸವಾಲಿದೆ. ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಬಿಡುಗಡೆಗೆ ಮಿತಿ ವಿಧಿಸಲಾಗುತ್ತದೆ. ತಪ್ಪಿದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

English summary

European Car Maker Volkswagen Plans To Produce 1 Million Electric Car

European car maker Volkswagen plans to produce one million electric car by 2023.
Story first published: Friday, December 27, 2019, 20:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X