For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬರೂ ಧೀರೂಭಾಯ್ ಅಂಬಾನಿ, ಬಿಲ್‌ಗೇಟ್ಸ್‌ ಆಗಬಹುದು : ಮುಕೇಶ್ ಅಂಬಾನಿ

|

ಭಾರತದಲ್ಲಿ ಯುವ ಉದ್ಯಮಿಗಳು ಬೆಳೆಯಲು ಅನುಕೂಲವಾದ ಪರಿಸ್ಥಿತಿ ಇದೆ. ಇಲ್ಲಿಯ ಪ್ರತಿಯೊಬ್ಬ ಸಣ್ಣ ಉದ್ಯಮಿ ಮತ್ತು ಉದ್ಯಮವೂ ಧೀರೂಭಾಯ್ ಅಂಬಾನಿಯೋ ಅಥವಾ ಬಿಲ್ ಗೇಟ್ಸ್ ಆಗುವ ಅವಕಾಶ ಹೊಂದಿದ್ದಾರೆ ಎಂದು ಆರ್‌ಐಎಲ್ ಚೇರ್‌ಮನ್ ಮುಕೇಶ್ ಅಂಬಾನಿ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ''ಫ್ಯೂಚರ್ ಡೀಕೋಡೆಡ್ ಸಿಇಒ 2020'' ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅಂಬಾನಿ ಭವಿಷ್ಯದಲ್ಲಿ ಗೇಮಿಂಗ್ ಉತ್ತುಂಗಕ್ಕೇರುತ್ತದೆ ಎಂದು ಭವಿಷ್ಯ ನುಡಿದರು.

ಪ್ರತಿಯೊಬ್ಬರೂ ಧೀರೂಭಾಯ್, ಬಿಲ್‌ಗೇಟ್ಸ್‌ ಆಗಬಹುದು : ಮುಕೇಶ್ ಅಂಬಾನಿ

 

ಇದೇ ವೇಳೆ ಮಾತನಾಡಿದ ಮುಕೇಶ್ ಅಂಬಾನಿ ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ವಿಶೇಷತೆಯೇ ಇದಾಗಿದೆ. ತಳಮಟ್ಟದಲ್ಲಿ ಉದ್ಯಮಶೀಲತೆಯ ಶಕ್ತಿ ಸಾಕಷ್ಟಿದೆ. ಈ ಸಣ್ಯ ಉದ್ಯಮಗಳು ದೇಶದ 70 ಪರ್ಸೆಂಟ್‌ರಷ್ಟು ಉದ್ಯೋಗ ನೀಡುತ್ತವೆ. ಭಾರತದ ರಫ್ತಿನಲ್ಲಿ 40 ಪರ್ಸೆಂಟ್ ಪಾಲು ಈ ಉದ್ಯಮಗಳಿಗಿದೆ. ಇವರಿಗೆ ಉತ್ತಮ ತಂತ್ರಜ್ಞಾನ ಸಿಕ್ಕರೆ ಭಾರತ ಇನ್ನಷ್ಟು ವೇಗದಲ್ಲಿ ಬೆಳೆಯಬಲ್ಲುದು ಎಂದು ಮುಕೇಶ್ ಅಂಬಾನಿ ಹೇಳಿದರು.

ಇನ್ನು 5 ಅಥವಾ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ. ನೀವು 1992ರಲ್ಲಿ ಮೈಕ್ರೋಸಾಫ್ಟ್‌ಗೆ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಭಾರತದ ಆರ್ಥಿಕತೆ 300 ಬಿಲಿಯನ್ ಡಾಲರ್ (21 ಲಕ್ಷ ಕೋಟಿ ರೂ) ಇತ್ತು. ಇವತ್ತು 3 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಬೆಳೆದು ನಿಂತಿದೆ. ಇಷ್ಟು ಅಗಾಧವಾಗಿ ಭಾರತ ಬೆಳೆಯುತ್ತದೆಂದು ಯಾರೂ ಅಂದಾಜು ಮಾಡಿರಲಿಲ್ಲ ಎಂದು ಸತ್ಯ ನಾಡೆಲ್ಲಾ ಅವರಿಗೆ ಅಂಬಾನಿ ತಿಳಿಸಿದರು.

ಭಾರತದಲ್ಲಿ ಜಿಯೋ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೇ ಮಾಡಿಬಿಟ್ಟಿದೆ. ನಮ್ಮ ಟೆಲಿಕಾಂ ಉದ್ಯಮವು ಡೇಟಾ ಬೆಲೆ ತಗ್ಗಲು ಪ್ರಮುಖ ಪಾತ್ರವಹಿಸಿದೆ. ಜಿಯೋ ಬರುವುದಕ್ಕೂ ಮೊದಲು ಪ್ರತಿ ಒಂದು ಜಿಬಿ ಡೇಟಾಗೆ 300 ರಿಂದ 500 ರುಪಾಯಿ ದರವಿತ್ತು. ಆದರೆ ಜಿಯೋ ಪ್ರತಿ ಜಿಬಿ ಡೇಟಾವನ್ನು 12 ರಿಂದ 14 ರುಪಾಯಿಗೆ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ ಎಂದಿದ್ದಾರೆ.

English summary

Every Small Businessman Can Become Ambani, Gates

Every small businessman or entrepreneur in India has the potential to become a Dhirubhai Ambani or a Bill Gates said mukesh ambani
Story first published: Monday, February 24, 2020, 20:01 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more