For Quick Alerts
ALLOW NOTIFICATIONS  
For Daily Alerts

ಜೆಫ್ ಬೇಜೋಸ್ ಮೊಬೈಲ್ ಹ್ಯಾಕ್ ಆಗಲು 'ಆಪಲ್' ಕಾರಣ ಎಂದ ಫೇಸ್‌ಬುಕ್

|

ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಓ ಜೆಫ್ ಬೇಜೋಸ್ ಮೊಬೈಲ್ ಹ್ಯಾಕ್ ಆಗಲು ಆ್ಯಪಲ್ ಮೊಬೈಲ್ ಕಾರಣ ಎಂದು ಫೇಸ್ ಬುಕ್ ಆರೋಪ ಮಾಡಿದೆ.

ವಾಟ್ಸಾಪ್ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅನ್ನು ಪರಿಶೀಲಿಸಲಾಗುವುದಿಲ್ಲ, ಆ್ಯಪಲ್ ಆಪರೇಟಿಂಗ್ ಸಿಸ್ಟಂನಿಂದಲೇ ಅಮೆಜಾನ್ ಸಿಇಒ ಜೆಫ್ ಬೇಜೋಸ್ ಮೊಬೈಲ್ ಹ್ಯಾಕ್ ಆಗಿದೆ ಎಂದು ಫೇಸ್‌ಬುಕ್‌ ದೂರಿದೆ.

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಮೊಬೈಲ್‌ಗೆ ಕನ್ನ ಹಾಕಿದ್ದ ಸೌದಿ ರಾಜಕುಮಾರ!ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಮೊಬೈಲ್‌ಗೆ ಕನ್ನ ಹಾಕಿದ್ದ ಸೌದಿ ರಾಜಕುಮಾರ!

ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಮೊಬೈಲ್ ಫೋನ್ ಹ್ಯಾಕ್ ಆಗಿತ್ತು ಎಂದು ಈ ಹಿಂದೆ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿತ್ತು. ಅದು ಕೂಡ ಸೌದಿ ಅರೇಬಿಯಾದ ರಾಜಕುಮಾರನಿಂದ ಸಂದೇಶವನ್ನು ಸ್ವೀಕರಿಸಿದ ಬಳಿಕ ಜೆಫ್ ಬೇಜೋಸ್ ಮೊಬೈಲ್ ಹ್ಯಾಕ್ ಆಗಿತ್ತು ಎಂದು ವರದಿ ಪ್ರಕಟಿಸಿತ್ತು.

ಜೆಫ್ ಬೇಜೋಸ್ ಮೊಬೈಲ್ ಹ್ಯಾಕ್ ಆಗಲು 'ಆಪಲ್' ಕಾರಣ ಎಂದ ಫೇಸ್‌ಬುಕ್

ಬ್ರಿಟಿಸ್ ಡೈಲಿ ಪ್ರಕಾರ, ಮೊಹಮ್ಮದ್ ಬಿನ್ ಸಲ್ಮಾನ್ ಬಳಸಿದ ಮೊಬೈಲ್ ಸಂಖ್ಯೆಯಿಂದ ಜೆಫ್ ಬೇಜೋಸ್‌ಗೆ ವಾಟ್ಸಾಪ್ ಸಂದೇಶವೊಂದು ಬಂದಿದೆ. ಎನ್‌ಕ್ರಿಪ್ಟ್ ಮಾಡಲಾದ ಈ ಸಂದೇಶವು ದುರುದ್ದೇಶದಿಂದ ಕೂಡಿದ ಫೈಲ್‌ ಅನ್ನು ಒಳಗೊಂಡಿದ್ದು ಬೇಜೋಸ್ ಫೋನ್‌ಗೆ ಬಂದಿದೆ. ಜೊತೆಗೆ ಸೌದಿ ರಾಜಕುಮಾರ ಖಾತೆಯಿಂದ ಕಳುಹಿಸಲಾಗಿದೆ ಎನ್ನಲಾದ ಸೋಂಕಿತ ವೀಡಿಯೋ ಫೈಲ್‌ನಿಂದ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ರವಾನಿಸಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ.

ಆದರೆ ಈ ಕುರಿತು ಕಳೆದ ವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಫೇಸ್‌ಬುಕ್‌ನ ಗ್ಲೋಬಲ್ ಅಫೇರ್ಸ್ ಅಂಡ್ ಕಮ್ಯುನಿಕೇಷನ್ಸ್ ಉಪಾಧ್ಯಕ್ಷ ನಿಕ್ ಕ್ಲೆಗ್ ಮಾತನಾಡಿದ್ದು '' ಇದು ವಾಟ್ಸಾಪ್‌ನ ತಪ್ಪು ಅಲ್ಲ, ಏಕೆಂದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಶೀಲಿಸಲಾಗುವುದಿಲ್ಲ, (ಅಂದರೆ ವಾಟ್ಸಾಪ್ ಹ್ಯಾಕ್ ಮಾಡಲು ಸಾಧ್ಯವಿಲ್ಲ) . ಆಪಲ್ ಆಪರೇಟಿಂ್ ಸಿಸ್ಟಮ್‌ನಿಂದಲೇ ಬೇಜೋಸ್ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.

English summary

Facebook Blames Apple For Jeff Bezos Phone Hacking

Facebook has blamed Apple's operating system for the hacking of Amazon Founder and CEO Jeff Bezos' phone
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X