For Quick Alerts
ALLOW NOTIFICATIONS  
For Daily Alerts

533 ಮಿಲಿಯನ್ ಫೇಸ್‌ಬುಕ್‌ ಬಳಕೆದಾರರ ಡೇಟಾ ಸೋರಿಕೆ: ಭಾರತೀಯ ಬಳಕೆದಾರರೆಷ್ಟು?

|

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್‌ನ ಭಾರೀ ಪ್ರಮಾಣದ ಬಳಕೆದಾರರ ಡೇಟಾ ಸೋರಿಕೆ ಆಗಿದೆ ಎಂದು ಸೈಬರ್ ಕ್ರೈಂ ತಜ್ಞರು ಹೇಳಿರುವ ಬಗ್ಗೆ ವರದಿಯಾಗಿದೆ. ಫೇಸ್‌ಬುಕ್‌ನ ಇಮೇಲ್‌ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ 533 ಮಿಲಿಯನ್ ಫೇಸ್‌ಬುಕ್‌ ಬಳಕೆದಾರರ ಡೇಟಾ 2019ರಲ್ಲಿ ಸೋರಿಕೆ ಆಗಿದೆ.

'ಹಡ್ಸನ್‌ ರಾಕ್‌ ಸೈಬರ್ ಕ್ರೈಮ್‌ ಇಂಟೆಲಿಜೆನ್ಸ್‌' ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲನ್ ಗಾಲ್‌ ಟ್ವೀಟ್‌ ಮೂಲಕ ಈ ಮಾಹಿತಿ ಬಹಿರಂಗಪಡಿಸಿದ್ದು, 2019ರಲ್ಲಿ ಆನ್‌ಲೈನ್ ವೇದಿಕೆ ಮುಖಾಂತರ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ತಿಳಿಸಿದ್ದಾರೆ.

533 ಮಿಲಿಯನ್ ಫೇಸ್‌ಬುಕ್‌ ಬಳಕೆದಾರರ ಡೇಟಾ ಸೋರಿಕೆ!

ಡೇಟಾ ಸೋರಿಕಗೆ ಫೇಸ್‌ಬುಕ್‌ನ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. 2019 ರಲ್ಲಿ ಮೊದಲ ಬಾರಿಗೆ ಸೋರಿಕೆಯಾದ ಡೇಟಾಬೇಸ್ ಅನ್ನು ಆರಂಭದಲ್ಲಿ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ನಲ್ಲಿ ಪ್ರತಿ ಹುಡುಕಾಟಕ್ಕೆ $ 20 ಶುಲ್ಕಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಆದರೆ, ಜೂನ್ 2020 ರಲ್ಲಿ, ಮತ್ತು ನಂತರ ಜನವರಿ 2021 ರಲ್ಲಿ ಅದೇ ಡೇಟಾಬೇಸ್ ಮತ್ತೆ ಸೋರಿಕೆಯಾಯಿತು. ಇದು ಫೇಸ್‌ಬುಕ್‌ನ ಸ್ಪಷ್ಟ ದುರ್ಬಲತೆಯನ್ನು ಸೂಚಿಸುತ್ತದೆ. ಅನ್ಯ ವ್ಯಕ್ತಿಯ ಸಂಖ್ಯೆಯನ್ನು ಹುಡುಕಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತು. ಸೈಬರ್ ಸೆಕ್ಯುರಿಟಿ ಸಂಸ್ಥೆ ಹಡ್ಸನ್ ರಾಕ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಅಲೋನ್ ಗಾಲ್ ಈ ವಿಷಯವನ್ನು ಮೊದಲು ಬಹಿರಂಗಪಡಿಸಿದ್ದಾರೆ.

Read more about: facebook data
English summary

Facebook Data On 533 Million Users Leaked: 6 Million Indians

The personal data of more than half a billion Facebook Inc. users reemerged online for free on Saturday says Report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X