For Quick Alerts
ALLOW NOTIFICATIONS  
For Daily Alerts

ಇನ್‌ಸ್ಟಾಗ್ರಾಮ್, ಮೆಸೆಂಜರ್ ಮೂಲಕ 'ಆನ್‌ಲೈನ್ ಶಾಪ್' ಸೇವೆ ನೀಡಲಿದೆ ಫೇಸ್‌ಬುಕ್

|

ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋದಲ್ಲಿ 9.99 ಪರ್ಸೆಂಟ್‌ರಷ್ಟು ಪಾಲು ಖರೀದಿಸಿದ್ದ ಫೇಸ್‌ಬುಕ್, ಇದರ ಬೆನ್ನಲ್ಲೇ ಚಿಲ್ಲರೆ ಇ-ಕಾಮರ್ಸ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ಶಾಪ್ಸ್‌ ಸೇವೆಯನ್ನು ನೀಡಲು ಮುಂದಾಗಿದೆ.

 

ಶಾಪ್ಸ್‌ ಎಂಬ ಹೊಸ ಸೇವೆಯನ್ನು ಫೇಸ್‌ಬುಕ್ ತನ್ನ ಬಳಕೆದಾರರಿಗೆ ತೆರೆದಿದೆ. ಯಾವುದೇ ವ್ಯಾಪಾರಿಗಳು, ತಮ್ಮ ವ್ಯಾಪ್ತಿ, ವಿಸ್ತಾರದ ಚಿಂತೆಯಲ್ಲಿದ್ದರೆ ಅಂತವರು ಫೇಸ್‌ಬುಕ್‌ನ ಈ ಸೇವೆಯನ್ನು ಬಳಸಿಕೊಳ್ಳಬಹುದು. ಅದರಲ್ಲೂ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದೇ, ತಾನು ಈ ಸೇವೆಯನ್ನು ಆರಂಭಿಸಿದ್ದೇನೆ. ಜನ ಪ್ರಯಾಸಪಟ್ಟು ಕೊಳ್ಳುವುದಕ್ಕಿಂತ, ಅವರಿಗೆ ಅದು ಆನಂದವಾಗಬೇಕು, ಮನೆ ಬಾಗಿಲಿಗೆ ತಲುಪಬೇಕು ಎಂದು ಫೇಸ್‌ಬುಕ್‌ ಪರವಾಗಿ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ತಿಳಿಸಿದ್ದಾರೆ.

ಜಗತ್ತಿನಲ್ಲಿ ಕೊರೊನಾವೈರಸ್ ಗ್ರಾಹಕರ ಕೊಂಡುಕೊಳ್ಳುವಿಕೆಯ ಮನಸ್ತಿತಿಯನ್ನು ಬದಲಾಯಿಸಿದೆ. ಜನರು ಸುರಕ್ಷತೆಯ ವಹಿವಾಟು ನಡೆಸಲು ಮನಸ್ಸು ಮಾಡುತ್ತಿದ್ದಾರೆ. ಇದರಿಂದ ರಿಟೈಲ್ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದ್ದು, ಅಂತರ್ಜಾಲದ ಸೇವೆಯ ಮೂಲಕ ಸಮೀಪದ ಅಂಗಡಿಗಳನ್ನು ಮತ್ತು ಅಲ್ಲಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ತೋರಿಸುವ ವ್ಯವಸ್ಥೆ ಇದಾಗಿದೆ.

ಫೇಸ್‌ಬುಕ್ ಅಷ್ಟೇ ಅಲ್ಲ ಇನ್‌ಸ್ಟಾಗ್ರಾಮ್ ಬಳಕೆದಾರರಿಗೂ ಸೇವೆ ಲಭ್ಯ

ಫೇಸ್‌ಬುಕ್ ಅಷ್ಟೇ ಅಲ್ಲ ಇನ್‌ಸ್ಟಾಗ್ರಾಮ್ ಬಳಕೆದಾರರಿಗೂ ಸೇವೆ ಲಭ್ಯ

ಫೇಸ್‌ಬುಕ್‌ನ ಶಾಪ್ಸ್‌ ಸೇವೆ ಇನ್‌ಸ್ಟಾಗ್ರಾಮ್ ಬಳಕೆದಾರರಿಗೂ ಸಿಗುತ್ತದೆ. ಫೇಸ್‌ ಬುಕ್‌ನಲ್ಲಿ ಅಂಗಡಿ ಮಾಲಕರು ತಮ್ಮ ಅಂಗಡಿಯನ್ನು ನೋಂದಣಿ ಮಾಡಬೇಕು. ಅಲ್ಲಿ ತಮ್ಮಲ್ಲಿರುವ ವಸ್ತುಗಳನ್ನು ತೋರಿಸಬಹುದು. ಜೊತೆಗೆ ತಮ್ಮ ಅಂಗಡಿಯ ಚಿತ್ರ ಹಾಕಿ, ವಿಶಿಷ್ಟ ಬಣ್ಣವನ್ನು ಬಳಸಿ ಇನ್ನೂ ಅಂದಗಾಣಿಸಬಹುದು! ಈ ವ್ಯಾಪಾರಿಗಳಿಗೆ ಫೇಸ್‌ಬುಕ್‌, ಗ್ರಾಹಕರನ್ನು ತಲುಪಲು ತಾನೇ ನೆರವು ನೀಡಲಿದೆ.

ವಾಟ್ಸಾಪ್, ಮೆಸೆಂಜರ್  ಮೂಲಕ ಮಾರಾಟ ಮಾಡಬಹುದು

ವಾಟ್ಸಾಪ್, ಮೆಸೆಂಜರ್ ಮೂಲಕ ಮಾರಾಟ ಮಾಡಬಹುದು

ರಿಜಿಸ್ಟರ್ ಆದ ಅಂಗಡಿಯವರು ನೋಂದಣಿಯಾದ ಗ್ರಾಹಕರಿಗೆ ವಾಟ್ಸಾಪ್, ಮೆಸೆಂಜರ್‌, ಇನ್ಸ್ಟಾಗ್ರಾಮ್‌ ಮೂಲಕ ಸಂದೇಶ ಕಳುಹಿಸಬಹುದು. ಜನರು ಕೇಳಿದ ವಸ್ತುಗಳನ್ನು ಅವರ ಮನೆಗೆ ತಲುಪಿಸುವುದು ಮಾತ್ರ ಅಂಗಡಿಯವರ ಕೆಲಸ.

ಈಗಾಗಲೇ ಇ-ಕಾಮರ್ಸ್ ಸೇವೆ ನೀಡುತ್ತಿರುವ ಫೇಸ್‌ಬುಕ್
 

ಈಗಾಗಲೇ ಇ-ಕಾಮರ್ಸ್ ಸೇವೆ ನೀಡುತ್ತಿರುವ ಫೇಸ್‌ಬುಕ್

ಫೇಸ್‌ಬುಕ್ ಈಗಾಗಲೇ ಇ-ಕಾಮರ್ಸ್‌ನಲ್ಲಿ ತೊಡಗಿಸಿಕೊಂಡಿದೆ. ಸರಕುಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸ್ಥಳವಾಗಿದೆ ಮತ್ತು ಸಾಮಾಜಿಕ ಜಾಲತಾಣ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಪೇಜ್ ಮೂಲಕ ಗ್ರಾಹಕರು ವ್ಯವಹಾರಗಳನ್ನು ನಡೆಸುವ ಸ್ಥಳವಾಗಿದೆ.

ಅಮೆರಿಕಾದಲ್ಲಿ ವ್ಯಾಪಾರಿಗಳು ವ್ಯವಹಾರವನ್ನು ನಿರ್ವಹಿಸಲು ಫೇಸ್‌ಬುಕ್ ಚೆಕ್ ಔಟ್ ಸೇವೆಯನ್ನು ಬಳಸಬಹುದು. ಅತ್ಯಲ್ಪ ಶುಲ್ಕವನ್ನು ಪಾವತಿಸಬಹುದು ಎಂದು ಇನ್‌ಸ್ಟಾಗ್ರಾಮ್ ಶಾಪಿಂಗ್ ಉಪ್ಪನ್ನದ ಮುಖ್ಯಸ್ಥ ಜಾರ್ಜ್ ಲೀ ಹೇಳಿದ್ದಾರೆ.

 

ಚಿಕ್ಕ ಬಿಜಿನೆಸ್ ಇದ್ರೂ ಆನ್‌ಲೈನ್ ಮೂಲಕ ಮಾರಾಟ ಮಾಡುವ ಅವಕಾಶ

ಚಿಕ್ಕ ಬಿಜಿನೆಸ್ ಇದ್ರೂ ಆನ್‌ಲೈನ್ ಮೂಲಕ ಮಾರಾಟ ಮಾಡುವ ಅವಕಾಶ

ಇದರರ್ಥ ಯಾವುದೇ ಮಾರಾಟಗಾರ, ಅವರ ಗಾತ್ರ ಅಥವಾ ಬಜೆಟ್ ಇರಲಿ, ತಮ್ಮ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ತರಬಹುದು ಮತ್ತು ಗ್ರಾಹಕರಿಗೆ ಅನುಕೂಲಕರವಾದಗಲ್ಲೆಲ್ಲಾ ಸಂಪರ್ಕ ಸಾಧಿಸಬಹುದು ಎಂದು ಫೇಸ್‌ಬುಕ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

English summary

Facebook Launches Online Shops At The Social Network

Facebook reached out to businesses struggling to survive the pandemic with free tools for creating online "Shops" at the social network and Instagram.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X