For Quick Alerts
ALLOW NOTIFICATIONS  
For Daily Alerts

ಮೆಟಾ ಷೇರು ಇತಿಹಾಸದಲ್ಲೇ ಮೊದಲ ಬಾರಿಗೆ ಕುಸಿತ: 230 ಬಿಲಿಯನ್‌ ಡಾಲರ್‌ಗೂ ಅಧಿಕ ನಷ್ಟ

|

ಈ ಹಿಂದೆ ಫೇಸ್‌ಬುಕ್ ಎಂದು ಕರೆಯಲ್ಪಡುತ್ತಿದ್ದ ಮೆಟಾ ಕಂಪನಿಯ ಷೇರುಗಳು ಫೆಬ್ರವರಿ 3 ರಂದು ಐತಿಹಾಸಿಕ ಕುಸಿತವನ್ನು ಕಂಡಿದೆ. ಯುನೈಟೆಡ್ ಸ್ಟೇಟ್ಸ್ ಬಳಕೆದಾರರಿಂದ ಬರುವ ಲಾಭದ ಕುಸಿತ, ವೆಚ್ಚಗಳಲ್ಲಿ ಹೆಚ್ಚಳ ಮೊದಲಾದ ಕಾರಣದಿಂದಾಗಿ ಈ ಭಾರೀ ಕುಸಿತ ಕಂಡು ಬಂದಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

 

ಷೇರುಗಳು 26 ಪ್ರತಿಶತಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯದ 230 ಶತಕೋಟಿ ಡಾಲರ್‌ಗಿಂತ ಅಧಿಕ ನಷ್ಟ ಉಂಟಾಗಿದೆ. ಮೆಟಾದ ಮಾರುಕಟ್ಟೆ ಮೌಲ್ಯದಲ್ಲಿ 200 ಶತಕೋಟಿ ಡಾಲರ್‌‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ನಿವ್ವಳ ಮೌಲ್ಯದಿಂದ ಸುಮಾರು 29 ಬಿಲಿಯನ್ ಡಾಲರ್‌ ನಷ್ಟ ಉಂಟಾಗಿದೆ. ಈ ಮೂಲಕ ಮೆಟಾ ಸ್ಟಾಕ್‌ ಮಾರುಕಟ್ಟೆಯಲ್ಲಿ ಕೆಳಕ್ಕೆ ಇಳಿದಿದೆ.

 

ಶೇ.34 ಲಾಭಕ್ಕಾಗಿ ಈ ಪೆಟ್ರೋಲಿಯಂ ಸ್ಟಾಕ್‌ ಖರೀದಿಸಿ!ಶೇ.34 ಲಾಭಕ್ಕಾಗಿ ಈ ಪೆಟ್ರೋಲಿಯಂ ಸ್ಟಾಕ್‌ ಖರೀದಿಸಿ!

ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾಗೆ ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡ ಭಾರೀ ಕುಸಿತವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಹೆಡ್ಜ್ ಫಂಡ್‌ಗಳನ್ನು ಒಳಗೊಂಡಂತೆ ವಿವಿಧ ಹೂಡಿಕೆದಾರರ ಗುಂಪುಗಳಿಂದ ಮೆಟಾ ವ್ಯಾಪಕವಾಗಿ ಜನಪ್ರಿಯ ಸ್ಟಾಕ್‌ ಆಗಿದೆ. ಪ್ರಮುಖವಾಗಿ ಚಿಲ್ಲರೆ ಹೂಡಿಕೆದಾರರಿಗೆ ಇದು ಜನಪ್ರಿಯ ಸ್ಟಾಕ್ ಆಗಿತ್ತು. ಆದರೆ ಈಗ ಭಾರೀ ಕುಸಿತ ಕಂಡಿದೆ.

ಮೆಟಾ ಷೇರು ಕುಸಿತ: 230 ಬಿಲಿಯನ್‌ ಡಾಲರ್‌ಗೂ ಅಧಿಕ ನಷ್ಟ

ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರು ಮೊದಲ ಬಾರಿಗೆ ಕುಸಿತ

ಹೂಡಿಕೆದಾರರನ್ನು ನಿರಾಶೆಗೊಳಿಸಿದ ಅದರ ಷೇರುಗಳು 26.4% ಕುಸಿದಿದೆ. ಇನ್ನು ಇದೇ ಸಂದರ್ಭದಲ್ಲಿ ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರು ತನ್ನ 18 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕುಸಿದಿದೆ ಎಂದು ಮೆಟಾ ಹೇಳಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ನಿವ್ವಳ ಮೌಲ್ಯವು 31 ಬಿಲಿಯನ್‌ಗಳಷ್ಟು ಕುಸಿತ ಕಂಡಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಕುಸಿತ ಕಂಡಿದೆ.

ಮುಖೇಶ್ ಅಂಬಾನಿ ಕ್ಯಾಡಿಲಾಕ್ ಎಸ್ಕಲೇಡ್ ಕಾರಿನ ಬೆಲೆಯೇ 1.2 ಕೋಟಿ ರೂ.!ಮುಖೇಶ್ ಅಂಬಾನಿ ಕ್ಯಾಡಿಲಾಕ್ ಎಸ್ಕಲೇಡ್ ಕಾರಿನ ಬೆಲೆಯೇ 1.2 ಕೋಟಿ ರೂ.!

ಟಿಕ್‌ಟಾಕ್ ಮತ್ತು ಯೂಟ್ಯೂಬ್ ಸೇರಿದಂತೆ ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ಗಳ ಸ್ಪರ್ಧೆಯ ಹಿನ್ನೆಲೆ ಆದಾಯದ ಬೆಳವಣಿಗೆ ನಿಧಾನವಾಗುವ ಬಗ್ಗೆ ಮೆಟಾ ಎಚ್ಚರಿಕೆ ನೀಡಿದೆ. ಈ ನಡುವೆ ಜಾಹೀರಾತುದಾರರು ಸಹ ವೆಚ್ಚವನ್ನು ಕಡಿತಗೊಳಿಸುತ್ತಿದ್ದಾರೆ. ಪ್ರೇಕ್ಷಕರು, ವಿಶೇಷವಾಗಿ ಕಿರಿಯ ವಯಸ್ಸಿನ ಬಳಕೆದಾರರು ಪ್ರತಿಸ್ಪರ್ಧಿಗಳತ್ತ ಹೆಚ್ಚು ಆಕರ್ಷಿತರಾಗುವ ಹಿನ್ನೆಲೆ ನಮ್ಮ ಬೆಳವಣಿಗೆಗೆ ಹಾನಿ ಉಂಟಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.

ಟಿಕ್‌ಟಾಕ್‌ಗೆ ಸ್ಫರ್ಧೆ ನೀಡಿದರೂ ಕಡಿಮೆ ಗಳಿಕೆ

ಚೀನಾದ ತಂತ್ರಜ್ಞಾನ ದೈತ್ಯ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್‌ನೊಂದಿಗೆ ಸ್ಪರ್ಧಿಸಲು ಕಂಪನಿಯು ವೀಡಿಯೊ ಸೇವೆಗಳಲ್ಲಿ ಹೂಡಿಕೆ ಮಾಡುತ್ತಿದೆಯಾದರೂ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಈ ವಿಡಿಯೋಗಳಿಂದ ಕಡಿಮೆ ಹಣವನ್ನು ಗಳಿಸುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಮೆಟಾ ವಿವಿಧ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ ಎಂಬುವುದು ಈಗ ಸ್ಪಷ್ಟವಾಗಿದೆ. ಮೆಟಾದಂತಹ ಕಂಪನಿಗಳು ಇಂಟರ್ನೆಟ್‌ನಲ್ಲಿ ಟ್ರ್ಯಾಕ್ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಲು ಜನರಿಂದ ಅನುಮತಿ ಪಡೆಯುತ್ತದೆ. ನಂತರ ಅವರು ಆ ಮಾಹಿತಿಯನ್ನು ಜಾಹೀರಾತುದಾರರಿಗೆ ಮಾರಾಟ ಮಾಡಬಹುದು. ನಿಮ್ಮ ಬಗ್ಗೆ ಮಾಹಿತಿಯನ್ನು ಕಂಡುಹಿಡಿಯುವುದು ಮತ್ತು ಅದನ್ನು ಜಾಹೀರಾತುದಾರರಿಗೆ ಮಾರಾಟ ಮಾಡುವುದರ ಮೂಲಕ ಹಣ ಗಳಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ದೀರ್ಘಾವಧಿ ಸಮಸ್ಯೆಗಳೂ ಇವೆ. ಮೆಟಾ ಜಾಹೀರಾತಿನಿಂದ ಹಣವನ್ನು ಗಳಿಸುತ್ತದೆ. ಆದರೂ ಕಂಪನಿಯ ಹೆಸರನ್ನು ಗುರುತಿಸುವ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ಮೆಟಾದ ಷೇರು ಬೆಲೆ ಕುಸಿತವು ಇತರ ಸಾಮಾಜಿಕ ಮಾಧ್ಯಮದಲ್ಲಿ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

English summary

Facebook owner Meta sees biggest ever stock market loss

Meta Shares Crash 26% in Biggest Single-Day Wipe out in History; Valuation Slumped By Nearly 220 Billion.
Story first published: Friday, February 4, 2022, 14:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X