For Quick Alerts
ALLOW NOTIFICATIONS  
For Daily Alerts

ಫ್ಲಿಪ್‌ಕಾರ್ಟ್‌ನಿಂದ ಸಪ್ಲೈ ಚೇನ್ ಆಪರೇಷನ್ಸ್ ಅಕಾಡೆಮಿ, ಉದ್ಯೋಗಕ್ಕೆ ನಾಂದಿ

|

ಬೆಂಗಳೂರು, ಅಕ್ಟೋಬರ್ 21: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್‌ಕಾರ್ಟ್‌ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಡಿಜಿಟಲ್ ಕಲಿಕಾ ಅಕಾಡೆಮಿಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಸಪ್ಲೈ ಚೇನ್ ಆಪರೇಷನ್ಸ್ ಅಕಾಡೆಮಿ (ಎಸ್ ಸಿಒಎ) ಫ್ಲಿಪ್‌ಕಾರ್ಟ್‌ನ ಬಹುನಿರೀಕ್ಷಿತ ಯೋಜನೆ ಮತ್ತು ದೇಶದಲ್ಲಿ ನುರಿತ ಸಪ್ಲೈ ಚೇನ್ ಕಾರ್ಯಾಚರಣೆಯ ಪ್ರತಿಭೆಯನ್ನು ಸೃಷ್ಟಿಸಲು ಮತ್ತು ಸಂಬಂಧಿತ ಉದ್ಯಮದ ತರಬೇತಿ ಹಾಗೂ ಜ್ಞಾನವನ್ನು ಒದಗಿಸುವ ಬದ್ಧತೆಯನ್ನು ಹೊಂದಲು ಸಹಾಯ ಮಾಡುತ್ತದೆ. ಇದಲ್ಲದೇ, ಈ ಅಕಾಡೆಮಿಯು ಕೌಶಲ್ಯದ ಕೊರತೆಯನ್ನು ನಿವಾರಣೆ ಮಾಡುವುದು ಮತ್ತು ಸಪ್ಲೈ ಚೇನ್ ಉದ್ಯಮವನ್ನು ವಿಸ್ತರಣೆ ಮಾಡುವ ಮೂಲಕ ಮತ್ತಷ್ಟು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನೆರವಾಗುತ್ತದೆ.

ಎಸ್‌ಸಿಒಎ ಅಡಿಯಲ್ಲಿ ವಿಶೇಷ ಮತ್ತು ದೃಢವಾದ ತರಬೇತಿ ಕಾರ್ಯಕ್ರಮವನ್ನು ಫ್ಲಿಪ್‌ಕಾರ್ಟ್‌ ತಂಡವು ವಿನ್ಯಾಸಗೊಳಿಸಿದೆ ಮತ್ತು ರಚಿಸಿದ್ದು, ಅಭ್ಯರ್ಥಿಗಳಿಗೆ ಸಮಗ್ರ ಅನುಭವ ಹಾಗೂ ತರಬೇತಿ ನೀಡಲು ಇದರಲ್ಲಿ ಫ್ಲಿಪ್‌ಕಾರ್ಟ್‌ ಪೂರೈಕೆ ಜಾಲದಲ್ಲಿ 15 ದಿನಗಳ ಡಿಜಿಟಲ್ ತರಗತಿ ಹಾಗೂ 45 ದಿನಗಳ ಕಾಲ ಉದ್ಯೋಗದ ಅಪ್ರೆಂಟಿಸ್‌ಶಿಪ್ ಅನ್ನು ಒಳಗೊಂಡಿರುತ್ತದೆ.

ಯುವ ಸಮುದಾಯವನ್ನು ಸಬಲಗೊಳಿಸಲಿದೆ

ಯುವ ಸಮುದಾಯವನ್ನು ಸಬಲಗೊಳಿಸಲಿದೆ

ಇ-ಕಾಮರ್ಸ್ ಸಪ್ಲೈ ಚೇನ್‌ನ ವಿವಿಧ ಅಂಶಗಳ ಬಗ್ಗೆ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಸಪ್ಲೈ ಚೇನ್ ಪಾತ್ರಗಳು, ಸಾಫ್ಟ್ ಸ್ಕಿಲ್ಸ್, ಸುರಕ್ಷತೆ ಮತ್ತು ಅನುಸರಣೆಯ ಜ್ಞಾನ ಸೇರಿದಂತೆ ಇನ್ನಿತರ ಅಂಶಗಳು ಇವೆ. ಈ ಒಟ್ಟು 60 ದಿನಗಳ ಕೌಶಲ್ಯ ತರಬೇತಿ ಕಾರ್ಯಕ್ರಮವು ಸಪ್ಲೈ ಚೇನ್ ನಿರ್ವಹಣೆಯ ವಿವಿಧ ಅಂಶಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಸಬಲಗೊಳಿಸಲಿದೆ ಮತ್ತು ತಮ್ಮ ಉದ್ಯೋಗದಲ್ಲಿನ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸುತ್ತದೆ.

ವಿದ್ಯಾರ್ಥಿಗಳಿಗೆ ಫ್ಲಿಪ್‌ಕಾರ್ಟ್‌ನ ಕಲಿಕೆಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿರುವ ಕಲಿಕಾ ನಿರ್ವಹಣಾ ವ್ಯವಸ್ಥೆ ಮೂಲಕ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಉದ್ಯಮದ ಪ್ರಮುಖ ತಜ್ಷರು ಅಭಿವೃದ್ಧಿಪಡಿಸಿದ ಕೋರ್ಸ್‌ಗಳ ಮೂಲಕ ವೈವಿಧ್ಯಮಯ ಕೌಶಲ್ಯಗಳನ್ನು ಕಲಿಯಬಹುದಾಗಿದೆ.

ಮುಖ್ಯಸ್ಥ ಹೇಮಂತ್ ಬದ್ರಿ
 

ಮುಖ್ಯಸ್ಥ ಹೇಮಂತ್ ಬದ್ರಿ

ಈ ಕಾರ್ಯಕ್ರಮ ಆರಂಭದ ಬಗ್ಗೆ ಮಾತನಾಡಿದ ಫ್ಲಿಪ್‌ಕಾರ್ಟ್‌ನಲ್ಲಿ ಸಪ್ಲೈ ಚೇನ್ ನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಹೇಮಂತ್ ಬದ್ರಿ, ''ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿರುವ ಭಾರತವು ತನ್ನ ಜನಸಂಖ್ಯಾ ಲಾಭಾಂಶವನ್ನು ಪಡೆಯಲು ದೊಡ್ಡ ಪ್ರಮಾಣದ ಕೌಶಲ್ಯವನ್ನು ಮತ್ತು ಉತ್ಕೃಷ್ಠತೆಯ ಉಪಕ್ರಮಗಳ ಮೂಲಕ ತನ್ನ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಬಹುದಾಗಿದೆ. ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿ ಫ್ಲಿಪ್ ಕಾರ್ಟ್ ಅಭ್ಯರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಿ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಹೊಂದಿರುವ ಆಧುನಿಕ ಸಪ್ಲೈ ಚೇನ್‌ಗಳನ್ನು ರಚಿಸಿದ ನಂತರ ಉದ್ಯಮದಲ್ಲಿ ಎದುರಾಗುವ ಕೌಶಲ್ಯದ ಅಂತರವನ್ನು ನಿವಾರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್‌ ಸಪ್ಲೈ ಚೇನ್ ಕಾರ್ಯಾಚರಣೆಯ ಕುರಿತಾದ ಅಕಾಡೆಮಿಯನ್ನು ಆರಂಭಿಸಿದ್ದು, ಇದರ ಮೂಲಕ ಕೌಶಲ್ಯದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ನ್ಯಾಯಯುತವಾದ ಆನ್ ಲೈನ್ ಮಿಶ್ರಣ ಮತ್ತು ಉದ್ಯೋಗಿಗಳಿಗೆ ಕೆಲಸದ ಬಗೆಗಿನ ಸೂಕ್ತ ತರಬೇತಿಯನ್ನು ನೀಡುತ್ತದೆ,'' ಎಂದರು.

ಡೆಲ್ ಫೌಂಡೇಷನ್ ಅಧ್ಯಯನದ ಪ್ರಕಾರ

ಡೆಲ್ ಫೌಂಡೇಷನ್ ಅಧ್ಯಯನದ ಪ್ರಕಾರ

ಇತ್ತೀಚಿನ ಬಿಸಿಜಿ ಮತ್ತು ಡೆಲ್ ಫೌಂಡೇಷನ್ ಅಧ್ಯಯನದ ಪ್ರಕಾರ, ಭಾರತದಲ್ಲಿ ಕೃಷಿಯೇತರ ವಲಯದಲ್ಲಿ 90 ಮಿಲಿಯನ್‌ಗೂ ಅಧಿಕ ಉದ್ಯೋಗಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಗಿಗ್ ಆರ್ಥಿಕತೆ ಹೊಂದಿದೆ ಹಾಗೂ ಇದು ದೀರ್ಘಾವಧಿಯಲ್ಲಿ ದೇಶದ ಜಿಡಿಪಿಗೆ 1.25% ರಷ್ಟು ಕೊಡುಗೆ ನೀಡುವ ಸಾಧ್ಯತೆಗಳಿವೆ. ಸಪ್ಲೈ ಚೇನ್ ನಿರ್ವಹಣೆಯ ವಿವಿಧ ಅಂಶಗಳಲ್ಲಿ ಪರಿಣತಿ ಹೊಂದಿರುವ ಪ್ರತಿಭಾನ್ವಿತ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಲು ವಿಶೇಷವಾಗಿ ಇ-ಕಾಮರ್ಸ್ ಲಾಜಿಸ್ಟಿಕ್ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಕೌಶಲ್ಯ ಮತ್ತು ಉತ್ಕೃಷ್ಠತೆಯ ಉಪಕ್ರಮಗಳ ಅಗತ್ಯವಿದೆ. ಅಲ್ಲದೇ, ಫ್ಲಿಪ್‌ಕಾರ್ಟ್‌ನ ಸಪ್ಲೈ ಚೇನ್ ಆಪರೇಷನ್ಸ್ ಅಕಾಡೆಮಿ ಇದನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಅಕ್ಟೋಬರ್ 22 ರಂದು ಆರಂಭವಾಗಲಿದೆ

ಅಕ್ಟೋಬರ್ 22 ರಂದು ಆರಂಭವಾಗಲಿದೆ

ಈ ಕಾರ್ಯಕ್ರಮದ ಮೊದಲ ಹಂತ ಅಕ್ಟೋಬರ್ 22 ರಂದು ಆರಂಭವಾಗಲಿದ್ದು, ಇದರಲ್ಲಿ ಬಿಹಾರ, ದೆಹಲಿ, ಹರ್ಯಾಣ, ಜಾರ್ಖಂಡ್, ಪಂಜಾಬ್, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಅವರಿಗೆ ತರಬೇತಿ ನೀಡಿದ ನಂತರ ಆನ್-ದಿ-ಜಾಬ್ ತರಬೇತಿಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅವರಿಗೆ ದೇಶಾದ್ಯಂತ ಇರುವ ಪೂರ್ಣ ಪ್ರಮಾಣದ ಸಪ್ಲೈ ಚೇನ್‌ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುವ ಅವಕಾಶವನ್ನು ನೀಡಲಾಗುತ್ತದೆ.

ಹಲವು ವರ್ಷಗಳಿಂದ ಫ್ಲಿಪ್‌ಕಾರ್ಟ್‌ ದೇಶಾದ್ಯಂತ ಅನೇಕ ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ತನ್ನ ಸಪ್ಲೈ ಚೇನ್‌ನ ಸಾವಿರಾರು ಉದ್ಯೋಗಿಗಳಿಗೆ ತರಬೇತಿಯನ್ನು ನೀಡಿದೆ. ಇದರ ಮೂಲಕ ಉದ್ಯೋಗಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ವೃತ್ತಿ ಜೀವನದ ಮಟ್ಟವನ್ನು ವೃದ್ಧಿಸಿಕೊಳ್ಳಲು ನೆರವಾಗಿದೆ.

English summary

Flipkart launches Supply Chain Operations Academy

Flipkart launches Supply Chain Operations Academy. The program will certify over 4,000 workers in its first year by offering 15-days of online training and 45 days of on-the-job training at Flipkart’s supply chain facilities.
Story first published: Thursday, October 21, 2021, 15:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X