For Quick Alerts
ALLOW NOTIFICATIONS  
For Daily Alerts

ಭಾರತದ ಮೊದಲ ಸವರನ್ ಗ್ರೀನ್ ಬಾಂಡ್‌ನ ಯೋಜನೆಗೆ ವಿತ್ತ ಸಚಿವೆ ಅನುಮೋದನೆ

|

ಭಾರತದ ಮೊದಲ ಸವರನ್ ಗ್ರೀನ್ ಬಾಂಡ್‌ ಯೋಜನೆಯ ಅಂತಿಮ ಚೌಕಟ್ಟನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ಹೇಳಿಕೆ ನೀಡಿದ್ದು, ಇದು ಭಾರತಕ್ಕೆ ಬಲ ತುಂಬಲಿದೆ ಎಂದಿದ್ದಾರೆ.

ನ್ಯಾಷನಲ್ ಡಿಟರ್ಮೈನ್ಡ್ ಕಾಂಟ್ರಿಬ್ಯೂಷನ್ (ಎನ್‌ಡಿಸಿ) ಗುರಿಯನ್ನು ತಲುಪುವ ನಿಟ್ಟಿನಲ್ಲಿ ಬಲತುಂಬಲಿದೆ, ಹಾಗೆಯೇ ಜಾಗತಿಕ ಹಾಗೂ ಸ್ಥಳೀಯವಾಗಿ ಹೂಡಿಕೆದಾರರನ್ನು ಈ ಯೋಜನೆ ಆಕರ್ಷಿಸಲಿದೆ ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಇದು ನಮ್ಮ ಆರ್ಥಿಕತೆಗೆ ಸಹಾಯಕವಾಗಿದೆ. ಹಸಿರು ಯೋಜನೆಗಳಿಗೆ ಸಂಪನ್ಮೂಲವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ದೇಶದಲ್ಲಿ ಈಗ ಸವರನ್ ಗ್ರೀನ್ ಬಾಂಡ್ ಅನ್ನು ಜಾರಿ ಮಾಡಲಾಗುತ್ತದೆ ಎಂದು ಕೂಡಾ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಷ್ಟಕ್ಕೂ ದೇಶದ ಈ ಮೊದಲ ಸವರನ್ ಗ್ರೀನ್ ಬಾಂಡ್‌ ಎಂದರೇನು ಎಂದು ನಿಮಗೆ ತಿಳಿದಿದೆಯೇ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

 ದೇಶದ ಮೊದಲ ಸವರನ್ ಗ್ರೀನ್ ಬಾಂಡ್‌ನ ಯೋಜನೆಗೆ ವಿತ್ತ ಸಚಿವೆ ಅನುಮೋದನೆ

ಸವರನ್ ಗ್ರೀನ್ ಬಾಂಡ್‌ ಎಂದರೇನು?

ಹವಾಮಾನ ಬದಲಾವಣೆ, ಹವಾಮಾನ ಸಂಬಂಧಿತ ಯೋಜನೆಗಳಿಗೆ ನಿಧಿಯನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಸವರನ್ ಗ್ರೀನ್ ಬಾಂಡ್ ಅನ್ನು ಮಾರಾಟ ಮಾಡುತ್ತದೆ. ಈ ಸವರನ್ ಗ್ರೀನ್ ಬಾಂಡ್ ಹೊಂದಿರುವವರು ತೆರಿಗೆ ವಿನಾಯಿತಿಯನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ಯಾರಿಗೆ ಹವಾಮಾನ ಹಾಗೂ ವಾತಾವರಣಕ್ಕೆ ಸಂಬಂಧಿಸಿದ ಹಸಿರು ಯೋಜನೆಗಳ ಮೇಲೆ ಆಸಕ್ತಿ ಇದೆಯೋ, ಆ ಹೂಡಿಕೆದಾರರು ಈ ಸವರನ್ ಗ್ರೀನ್ ಬಾಂಡ್‌ ಮೇಲೆ ಹೂಡಿಕೆ ಮಾಡಬಹುದು.

ಯುಎಸ್‌ನಲ್ಲಿ ಭಾರತದ ಆರ್ಥಿಕತೆ ಬಗ್ಗೆ ವಿತ್ತ ಸಚಿವೆ ಹೇಳಿದ್ದೇನು?ಯುಎಸ್‌ನಲ್ಲಿ ಭಾರತದ ಆರ್ಥಿಕತೆ ಬಗ್ಗೆ ವಿತ್ತ ಸಚಿವೆ ಹೇಳಿದ್ದೇನು?

ಈ ಸವರನ್ ಗ್ರೀನ್ ಬಾಂಡ್‌ ಹೊರತಾಗಿ ದೇಶದಲ್ಲಿ 2007ರಲ್ಲಿ ಮೊದಲ ಬಾರಿಗೆ ಗ್ರೀನ್ ಬಾಂಡ್ ಅನ್ನು ಪರಿಚಯಪಡಿಸಲಾಗಿದೆ. ಹವಾಮಾನ ಸಂಬಂಧಿತ ಯೋಜನೆಗೆ ಹೂಡಿಕೆಯನ್ನು ಹೆಚ್ಚಿಸುವ ಈ ಗ್ರೀನ್ ಬಾಂಡ್‌ಗಳು ಆರ್ಥಿಕ ಅಸ್ತ್ರವಾಗಿದೆ. ಬೇರೆ ಬಾಂಡ್‌ಗಳಿಗೆ ಹೋಲಿಕೆ ಮಾಡಿದಾಗ ಸಾಮಾನ್ಯವಾಗಿ ಈ ಗ್ರೀನ್‌ ಬಾಂಡ್‌ಗಳಿಗೆ ಹೆಚ್ಚು ದುಬಾರಿಯಾಗಿರಲಾರದು. ಕಡಿಮೆ ಮೊತ್ತಕ್ಕೆ ಈ ಗ್ರೀನ್ ಬಾಂಡ್‌ಗಳು ಲಭ್ಯವಿರುತ್ತದೆ.

English summary

FM Approves India’s First Sovereign Green Bonds Framework, Explained in Kannada

The final sovereign green bonds framework of India has been approved by Union Finance Minister Nirmala Sitharaman. what is Green Bonds, explained in kananda. read on.
Story first published: Thursday, November 10, 2022, 15:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X