For Quick Alerts
ALLOW NOTIFICATIONS  
For Daily Alerts

ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

|

ವಿದೇಶಿಗರು ಭಾರತಕ್ಕೆ ಪ್ರವಾಸ ಕೈಗೊಳ್ಳಲು ಸಾಕಷ್ಟು ಆಸಕ್ತಿ ತೋರುತ್ತಿದ್ದು, ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯು ಜನವರಿ ಯಿಂದ ನವೆಂಬರ್ 2019ರಲ್ಲಿ 3 ಪರ್ಸೆಂಟ್ ಏರಿಕೆಯಾಗಿದೆ.

2019ರ ಜನವರಿ-ನವೆಂಬರ್ ಅವಧಿಯಲ್ಲಿ ವಿದೇಶಿ ಪ್ರವಾಸಿಗರ ಆಗಮನವು 3.2 ಪರ್ಸೆಂಟ್ ಹೆಚ್ಚಾಗಿದ್ದು, 96 ಲಕ್ಷ 69 ಸಾವಿರದ 633 ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ ಎಂದು ಪ್ರವಾಸೋದ್ಯಮ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. 2018ರಲ್ಲಿ ಇದೇ ಅವಧಿಯಲ್ಲಿ 93 ಲಕ್ಷ 66 ಸಾವಿರದ 478 ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು ಎಂದು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಮರ್ಧಾತ್ಮಕತೆ ಸೂಚ್ಯಂಕದಲ್ಲಿ (ಟಿಟಿಐಸಿ) ಭಾರತದ ಶ್ರೇಯಾಂಕವು 2019ರಲ್ಲಿ 34ನೇ ಸ್ಥಾನಕ್ಕೆ ಜಿಗಿದಿದೆ. ಆದರೆ ಇದು 2013ರಲ್ಲಿ 65ನೇ ಸ್ಥಾನದಲ್ಲಿತ್ತು.

ಮಲೇಷಿಯಾ ಪ್ರವಾಸಕ್ಕೆ ಇನ್ಮುಂದೆ ವೀಸಾ ಬೇಕಿಲ್ಲಮಲೇಷಿಯಾ ಪ್ರವಾಸಕ್ಕೆ ಇನ್ಮುಂದೆ ವೀಸಾ ಬೇಕಿಲ್ಲ

ಕಳೆದ ವರ್ಷ ಪ್ರವಾಸೋದ್ಯಮಕ್ಕೆ ಬೂಸ್ಟ್‌ ನೀಡಲು ಸಚಿವಾಲಯ ಪರ್ವತಾರೋಹಣಕ್ಕಾಗಿ 120 ಶಿಖರಗಳನ್ನು ತೆರೆಯುವುದು, ಇ-ವೀಸಾ ಶುಲ್ಕ ಮತ್ತು ಹೋಟೆಲ್ ರೂಮ್ ಬುಕ್ಕಿಂಗ್‌ನಲ್ಲಿ ಜಿಎಸ್‌ಟಿ ದರವನ್ನು ಕಡಿಮೆ ಮಾಡುವ ಮೂಲಕ ಮುಂತಾದ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. 1 ಸಾವಿರದಿಂದ 7,500 ರುಪಾಯಿಯ ಹೋಟೆಲ್ ರೂಮ್‌ಗಳಿಗೆ 12 ಪರ್ಸೆಂಟ್ ಜಿಎಸ್‌ಟಿ ಹಾಗೂ 7,500 ರುಪಾಯಿ ಮೇಲ್ಪಟ್ಟ ಹೋಟೆಲ್ ರೂಮ್‌ಗಳಿಗೆ 18 ಪರ್ಸೆಂಟ್ ಜಿಎಸ್‌ಟಿ ದರವನ್ನು ಕಡಿತಗೊಳಿಸಿತು.

2019ರ ಕ್ಯಾಲೆಂಡರ್ ವರ್ಷದ ಮೊದಲ 11 ತಿಂಗಳಿನಲ್ಲಿ 25 ಲಕ್ಷ 51 ಸಾವಿರದ 211 ಪ್ರವಾಸಿಗರು ಇ-ಟೂರಿಸ್ಟ್ ವೀಸಾದ ಅಡಿಯಲ್ಲಿ ಭಾರತಕ್ಕೆ ಆಗಮಿಸಿದ್ದು, 2018ಕ್ಕೆ ಹೋಲಿಸಿದರೆ ಹೆಚ್ಚಾಗಿದೆ. 2018ರ ಇದೇ ಅವಧಿಯಲ್ಲಿ 20 ಲಕ್ಷ 61 ಸಾವಿರದ 511 ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ 23.8 ಪರ್ಸೆಂಟ್ ಬೆಳವಣಿಗೆ ಸಾಧಿಸಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

English summary

Foreign Tourist Visit India Up 3 Percent In 2019

Foreign tourist arrivals india grew by 3.23 percent during Jan-Nov 2019 said Tourism ministry on Friday
Story first published: Saturday, January 4, 2020, 11:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X