For Quick Alerts
ALLOW NOTIFICATIONS  
For Daily Alerts

ಟಾಟಾ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಮೃತ

|

ಟಾಟಾ ಸನ್ಸ್ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಸಮೀಪ ಸೈರಸ್ ಮಿಸ್ತ್ರಿ ಅವರಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ, ಅಪಘಾತದಲ್ಲಿ ಸೈರಸ್ ಮಿಸ್ತ್ರೀ ಮೃತಪಟ್ಟಿದ್ದಾರೆ.

 

ಇನ್ನು ಮಿಸ್ತ್ರೀ ಜೊತೆಗಿದ್ದ ಮೂವರು ಗಾಯಗೊಂಡಿದ್ದಾರೆ. ಮಿಸ್ತ್ರಿ ಅವರ ಜೊತೆಗೆ ಕಾರು ಚಾಲಕ ಸೇರಿದಂತೆ ಇನ್ನಿಬ್ಬರು ಪ್ರಯಾಣಿಸುತ್ತಿದ್ದು ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, "ಮಿಸ್ತ್ರಿ ಅವರು ಅಹಮದಾಬಾದಿನಿಂದ ಮುಂಬೈ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 3.15ಕ್ಕೆ ಅಪಘಾತ ನಡೆದಿದ್ದು, ಸೂರ್ಯ ನದಿಯ ಮೇಲಿನ ಸೇತುವೆ ಬಳಿ ಅಪಘಾತ ಸಂಭವಿಸಿದೆ,'' ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಟಾಟಾ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ  ಅಪಘಾತದಲ್ಲಿ ಮೃತ

ಸೈರಸ್ ಮಿಸ್ತ್ರಿ ವೃತ್ತಿ ಜೀವನ

2011ರಲ್ಲಿ ಟಾಟಾ ಮೂಹದ ಸಾರಥಿಯಾಗಿ ಸೈರಸ್ ಮಿಸ್ತ್ರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬಳಿಕ ಹಲವಾರು ಭಿನ್ನಾಭಿಪ್ರಾಯದಿಂದಾಗಿ ಸಮೂಹವನ್ನು ತೊರೆದಿದ್ದರು. ಅಕ್ಟೋಬರ್ 24, 2016 ರಂದು ಟಾಟಾ ಸನ್ಸ್ ನ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ ನೀಡಿದ್ದು, ರತನ್ ಟಾಟಾ ಮಧ್ಯಂತರ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಅಕ್ಟೋಬರ್ 25, 2016ರಲ್ಲಿ ಟಾಟಾ ಟ್ರಸ್ಟಿಗಳ ನೆರಳಿನಂಥ ನಿಯಂತ್ರಣ ಇದೆ ಎಂದು ಸೈರಸ್ ಮಿಸ್ತ್ರಿ ಟಾಟಾ ಸನ್ಸ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಡಿಸೆಂಬರ್ 19, 2016ರಂದು ಟಾಟಾ ಗ್ರೂಪ್ ಎಲ್ಲ ಸಂಸ್ಥೆಗಳ ನಿರ್ದೇಶಕ ಹುದ್ದೆಗೆ ಸೈರಸ್ ಮಿಸ್ತ್ರಿ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 6, 2017ರಂದು ಟಾಟಾ ಸನ್ಸ್ ಆಡಳಿತ ಮಂಡಳಿ ನಿರ್ದೇಶಕ ಹುದ್ದೆಯಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಲಾಯಿತು. ಇದನ್ನು ಪ್ರಶ್ನಿಸಿ ಸೈರಸ್ ಮಿಸ್ತ್ರಿ ಅರ್ಜಿಯನ್ನು ಕೂಡಾ ಸಲ್ಲಿಕೆ ಮಾಡಿದ್ದರು.

English summary

Former Tata Chairman Cyrus Mistry killed in road accident

Former Tata Sons chairman Cyrus Mistry was on Sunday killed in a road accident after his car hit a divider in Maharashtra's Palghar district neighbouring Mumbai.
Story first published: Sunday, September 4, 2022, 18:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X