For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಫಿಕ್ಸೆಡ್ ಡೆಪಾಸಿಟ್

|

ಕೋವಿಡ್-19 ಸಾಂಕ್ರಾಮಿಕದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ವಿಮೆ ಜೊತೆಗೆ ಅವರ ಹೆಸರಿನಲ್ಲಿ 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡುವುದಾಗಿ ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಒಂದು ವೇಳೆ ಕಾನೂನುಬದ್ಧ ಗಾರ್ಡಿಯನ್ ಜೊತೆಯಲ್ಲಿದ್ದ ಮಗು ಕೂಡ ಈ ಸೌಲಭ್ಯವನ್ನು ಪಡೆಯಲಿದ್ದು, ಮಕ್ಕಳಿಗೆ ಪಿಎಂ-ಕೇರ್ಸ್' ಯೋಜನೆಯಡಿ ಈ ಬೆಂಬಲ ನೀಡಲಾಗುವುದು.

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ -19 ರ ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಬೆಂಬಲಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದರು. ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಘೋಷಿಸಿದರು.

ಅಂತಹ ಎಲ್ಲ ಮಕ್ಕಳನ್ನು ಆಯುಷ್ಮಾನ್ ಭಾರತ್ ಸ್ಕೀಮ್ (ಪಿಎಂ-ಜಯ್) ಅಡಿಯಲ್ಲಿ ಫಲಾನುಭವಿಗಳಾಗಿ ದಾಖಲಿಸಲಾಗುವುದು ಎಂದು ಸರ್ಕಾರ ಘೋಷಿಸಿತು. 5 ಲಕ್ಷ ರೂ. ಆರೋಗ್ಯ ವಿಮೆಯ ಜೊತೆಗೆ ಮಕ್ಕಳಿಗೆ 18 ವರ್ಷ ವಯಸ್ಸಿನವರೆಗೆ ಪ್ರೀಮಿಯಂ ಮೊತ್ತವನ್ನು PM CARES ಪಾವತಿಸುತ್ತದೆ. ಅಲ್ಲದೆ, ಉನ್ನತ ಶಿಕ್ಷಣದವರೆಗೂ ಈ ನಿಧಿಯು ಅವರ ಅಧ್ಯಯನಕ್ಕೆ ಬಳಕೆಯಾಗುತ್ತದೆ.

ಇಷ್ಟಲ್ಲದೆ ಮಗುವಿನ ಹೆಸರಿನಲ್ಲಿ ಸರ್ಕಾರ ನಿಶ್ಚಿತ ಠೇವಣಿಯನ್ನು ಸಹ ಪ್ರಾರಂಭಿಸಿದ್ದು. ಪ್ರತಿ ಮಗುವಿಗೆ ಅವನು ಅಥವಾ ಅವಳು 18 ವರ್ಷ ದಾಟಿದಾಗ 10 ಲಕ್ಷದ ರೂಪಾಯಿ ಎಫ್‌ಡಿ ಪಡೆಯುವ ಸೌಲಭ್ಯ ಹೊಂದಿದೆ.

English summary

Free Education And Rs 10 Lakh FD For Childern Who Lost Their Parents to Covid-19

Centre on Saturday announced Rs 10 lakh fixed deposit, free health insurance and education for children who have lost both parents due to covid-19
Story first published: Saturday, May 29, 2021, 21:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X