For Quick Alerts
ALLOW NOTIFICATIONS  
For Daily Alerts

ಆಗಸ್ಟ್‌ 1ರಿಂದ ಭಾನುವಾರ, ಸರ್ಕಾರಿ ರಜೆ ದಿನಗಳಲ್ಲೂ ಸ್ಯಾಲರಿ ಕ್ರೆಡಿಟ್ ಆಗಲಿದೆ!

|

ವೇತನದಾರರಿಗೆ, ಪಿಂಚಣಿದಾರರಿಗೆ ಇಲ್ಲಿದೆ ಗುಡ್‌ನ್ಯೂಸ್. ನಿಮ್ಮ ವೇತನ ಜಮೆ ಆಗುವ ದಿನಾಂಕವು ಭಾನುವಾರ ಅಥವಾ ಯಾವುದೇ ಬ್ಯಾಂಕ್ ರಜಾ ದಿನಗಳಲ್ಲಿ ಬಂದರೂ ವೇತನ ಅಕೌಂಟ್‌ಗೆ ಕ್ರೆಡಿಟ್ ಆಗಲಿದೆ.

 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಘೋಷಣೆ ಮಾಡಿರುವ ಪ್ರಕಾರ ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH) ಪಾವತಿ ವ್ಯವಸ್ಥೆ ವರ್ಷದ ಎಲ್ಲ ದಿನವೂ ದೊರೆಯಲಿದೆ. ಇಲ್ಲಿಯವರೆಗೆ ಎನ್‌ಎಸಿಎಚ್‌ ವ್ಯವಸ್ಥೆಯು ಬ್ಯಾಂಕ್ ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಲಭ್ಯವಿತ್ತು.

ಆಗಸ್ಟ್‌ 1ರಿಂದ ಭಾನುವಾರವೂ ಸ್ಯಾಲರಿ ಕ್ರೆಡಿಟ್ ಆಗಲಿದೆ!

ಆದರೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಹೇಳಿಕೆಯ ಪ್ರಕಾರ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಾಗಲಿದೆ.

"ಗ್ರಾಹಕರ ಹಿತಾಸಕ್ತಿಯ ಅನುಕೂಲದಿಂದ ಮತ್ತು ವರ್ಷದ ಎಲ್ಲ ದಿನವೂ ಆರ್​ಟಿಜಿಎಸ್ ಲಭ್ಯ ಇರುವುದರ ಲಾಭವನ್ನು ಪಡೆಯುವ ಉದ್ದೇಶದಿಂದ, ವರ್ಷದ ಎಲ್ಲ ದಿನವೂ ಎನ್‌ಎಸಿಎಚ್‌ ದೊರೆಯುವ ಪ್ರಸ್ತಾವ ಮಾಡಲಾಗಿದೆ," ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಎನ್‌ಎಸಿಎಚ್‌ ಎಂಬುದು ಬಲ್ಕ್‌ ಪೇಮೆಂಟ್ ಸಿಸ್ಟಮ್ ಆಗಿದ್ದು, ಒಂದೇ ಬಾರಿಗೆ ಒಬ್ಬರಿಂದ ಹಲವಾರು ಮಂದಿಗೆ ಹಣ ಕ್ರೆಡಿಟ್‌ ಆಗುವ ಅನುಕೂಲ ಮಾಡಿಕೊಡುತ್ತದೆ. ವೇತನ ಅಷ್ಟೇ ಅ ಅಲ್ಲದೆ ಬಡ್ಡಿ, ಪೆನ್ಷನ್, ಕಂಪನಿಗಳ ಡಿವಿಡೆಂಡ್ ಪಾವತಿಗೂ ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಕೇವಲ ಹಣ ವರ್ಗಾವಣೆ ಅಷ್ಟೇ ಅಲ್ಲದೆ ವಿದ್ಯುಚ್ಛಕ್ತಿ ಬಿಲ್, ಅನಿಲ, ಟೆಲಿಫೋನ್, ನೀರು, ಸಾಲದ ಕಂತು, ಮ್ಯೂಚವಲ್ ಫಂಡ್​ಗಳು, ಇನ್ಷೂರೆನ್ಸ್ ಪ್ರೀಮಿಯಂ ಸಂಗ್ರಹ ಮುಂತಾದವುಗಳಲ್ಲಿ ಎನ್‌ಎಸಿಎಚ್‌ ಪಾವತಿ ವ್ಯವಸ್ಥೆ ಬಳಸಲಾಗುತ್ತದೆ.
ಸದ್ಯಕ್ಕೆ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಎನ್‌ಎಸಿಎಚ್‌ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಆಗಸ್ಟ್ 1, 2021ರಿಂದ ವಾರದ ಎಲ್ಲ ದಿನ, ವರ್ಷದ 365 ದಿನಗಳು ಕಾರ್ಯ ನಿರ್ವಹಿಸುತ್ತದೆ ಎಂದು ಆರ್​ಬಿಐ ತಿಳಿಸಿದೆ.

English summary

From August 1, your salary can get credited on weekends too; RBI

RBI Friday said National Automated Clearing House (NACH) will be available on all days of the week, effective August 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X