2019-20 ಆರ್ಥಿಕ ವರ್ಷದ ಜಿಡಿಪಿ ಅಂದಾಜು 5% ಇರಲಿದೆ: ಕೇಂದ್ರ ಸರ್ಕಾರ

ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸಿದರೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಡಿಸೆಂಬರ್ ನಲ್ಲಿ ಅಂದಾಜು ಮಾಡಿದಂತೆ 2019-20 ಆರ್ಥಿಕ ವರ್ಷದ ಕೊನೆಯ ಹೊತ್ತಿಗೆ ಭಾರತದ ಬೆಳವಣಿಗೆ ದರವು 5% ಇರಲಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿಯು ಮಂಗಳವಾರ ತಿಳಿಸಿದೆ.

ಆರ್ಥಿಕ ವರ್ಷ 2019ರ ಪೂರ್ತಿ ಲೆಕ್ಕದಲ್ಲಿ 6.8% ಬೆಳವಣಿಗೆ ದರ ದಾಖಲಾಗಿತ್ತು. ಅದರೆ ಈ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ದರವನ್ನು ಕಳೆದ ಸಾಲಿಗೆ ಹೋಲಿಸಿದರೆ ಬಹಳ ಕಡಿಮೆ ಆಗುತ್ತದೆ. ಈಗಿನ ಹೊಸ ಅಂದಾಜಿನ ಪ್ರಕಾರ, ಆರ್ಥಿಕ ವರ್ಷದ ದ್ವಿತೀಯಾರ್ಧದ ಬೆಳವಣಿಗೆ ದರವು 5.25 ಪರ್ಸೆಂಟ್ ಎನ್ನಲಾಗುತ್ತಿದೆ.

ಅದಕ್ಕೂ ಮುನ್ನ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ 5 ಪರ್ಸೆಂಟ್ ಮತ್ತು ಜುಲೈ- ಸೆಪ್ಟೆಂಬರ್ ತ್ರೈಮಾಸಿಕಕ್ಕೆ 4.5 ಪರ್ಸೆಂಟ್ ಜಿಡಿಪಿ ದಾಖಲಾಗಿತ್ತು. ಇನ್ನೇನು ಕೇಂದ್ರ ಬಜೆಟ್ ಮಂಡನೆಗೆ ಕೆಲವು ದಿನಗಳು ಬಾಕಿ ಇರುವಾಗ ಈ ಅಂಕಿ- ಅಂಶ ಹೊರಗೆ ಬಂದಿದೆ.

2019-20 ಆರ್ಥಿಕ ವರ್ಷದ ಜಿಡಿಪಿ ಅಂದಾಜು 5% ಇರಲಿದೆ: ಕೇಂದ್ರ ಸರ್ಕಾರ

ಭಾರತದ ಮೂರನೇ ಅತಿ ದೊಡ್ಡ ಆರ್ಥಿಕತೆ ಭಾರತ. ಆರ್ಥಿಕ ವರ್ಷ 2016ರಲ್ಲಿ ಬೆಳವಣಿಗೆ ದರವು 8% ಇದ್ದದ್ದು ಆರ್ಥಿಕ ವರ್ಷ 2019ಕ್ಕೆ 6.8%ಗೆ ಕುಸಿದಿದೆ. ಇತ್ತೀಚಿನ ತಿಂಗಳಿನಲ್ಲಿ ಆರ್ಥಿಕತೆ ಚೇತರಿಕೆಗೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಅದರಿಂದ ದೊಡ್ಡ ಮಟ್ಟದ ಅನುಕೂಲ ಆಗಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+