For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಅಲುಗಾಟದ ಮಧ್ಯೆ ಮೇದಾಂತ, ಬಿಕಾಜಿ ಭರ್ಜರಿ ಓಪನಿಂಗ್

|

ಮುಂಬೈ, ನ. 16: ನಿನ್ನೆ ಉತ್ತಮ ವಹಿವಾಟು ಕಂಡಿದ್ದ ಷೇರುಪೇಟೆ ಇಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ನಿರಾಸೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ನೂರಾರು ಅಂಕಗಳನ್ನು ಕಳೆದುಕೊಂಡಿವೆ. ಇದರ ಮಧ್ಯೆ ಗ್ಲೋಬಲ್ ಹೆಲ್ತ್ ಮತ್ತು ಬಿಜಾಜಿ ಫುಡ್ಸ್ ಇಂಟರ್ನ್ಯಾಷನಲ್ ಈ ಎರಡು ಕಂಪನಿಗಳು ಷೇರುಪೇಟೆಗೆ ಭರ್ಜರಿ ಪದಾರ್ಪಣೆ ಮಾಡಿ ಗಮನ ಸೆಳೆದಿವೆ.

 

ಗ್ಲೋಬಲ್ ಹೆಲ್ತ್ ಮತ್ತು ಬಿಕಾಜಿ ಫುಡ್ಸ್ ಇತ್ತೀಚೆಗಷ್ಟೇ ಐಪಿಒಗೆ ತೆರೆದುಕೊಂಡಿದ್ದವು. ಇದೀಗ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಮಾರುಕಟ್ಟೆಗಳಲ್ಲಿ ಇವೆರಡೂ ಇಂದು ಲಿಸ್ಟ್ ಆಗಿವೆ. ಐಪಿಒದಲ್ಲಿ ನೀಡಲಾಗಿದ್ದ ಪ್ರೀಮಿಯಂ ದರಕ್ಕಿಂತ ಹೆಚ್ಚಿನ ಬೆಲೆಗೆ ಇವೆರಡು ಕಂಪನಿಗಳ ಷೇರುಗಳು ಬಿಕರಿ ಆಗುತ್ತಿವೆ.

ಕಾರು, ಟಿವಿಯಂಥ ದೊಡ್ಡ ವಸ್ತು ಖರೀದಿಸಬೇಡಿ: ವಿಶ್ವ ಶ್ರೀಮಂತನ ಸಲಹೆ ಕೇಳಿಕಾರು, ಟಿವಿಯಂಥ ದೊಡ್ಡ ವಸ್ತು ಖರೀದಿಸಬೇಡಿ: ವಿಶ್ವ ಶ್ರೀಮಂತನ ಸಲಹೆ ಕೇಳಿ

ಗ್ಲೋಬಲ್ ಹೆಲ್ತ್

ಗ್ಲೋಬಲ್ ಹೆಲ್ತ್

ಮೇದಾಂತ ಬ್ರ್ಯಾಂಡ್‌ನ ಅಡಿಯಲ್ಲಿ ದೇಶಾದ್ಯಂತ ಕೆಲ ಆಸ್ಪತ್ರೆಗಳನ್ನು ನಿರ್ವಹಿಸುವ ಗ್ಲೋಬಲ್ ಹೆಲ್ತ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ 336 ರೂಪಾಯಿಗೆ ಷೇರು ವಿತರಿಸಿತ್ತು. ಈಗ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಅದರ ಷೇರು 398.15 ರೂಪಾಯಿ ಬೆಲೆಗೆ ಲಿಸ್ಟ್ ಆಗಿದೆ. ಇದು ಪ್ರೀಮಿಯಂ ರೇಟ್‌ಗಿಂತ ಶೇ. 18.5ರಷ್ಟು ಹೆಚ್ಚು.

ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿಯಲ್ಲಿ ಗ್ಲೋಬಲ್ ಹೆಲ್ತ್ ಶೇ. 19.3ರಷ್ಟು ಹೆಚ್ಚಿನ ದರದೊಂದಿಗೆ ಪದಾರ್ಪಣೆ ಮಾಡಿದೆ. ನಿಫ್ಟಿಯಲ್ಲಿ ಗ್ಲೋಬಲ್ ಹೆಲ್ತ್ ಷೇರು 401 ರೂಪಾಯಿಗೆ ಲಿಸ್ಟ್ ಆಗಿದೆ. ಒಂದು ಹಂತದಲ್ಲಿ 403 ರೂಪಾಯಿ ದರದವರೆಗೂ ಅದರ ಷೇರು ಬಿಕರಿಯಾಗಿದ್ದುಂಟು.

 

ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್

ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್

ಸಿಹಿ ತಿನಿಸುಗಳ ತಯಾರಕ ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕೂಡ ಷೇರುಪೇಟೆಗೆ ಶುಕ್ರವಾರ ಭರ್ಜರಿ ಎಂಟ್ರಿ ಕೊಟ್ಟಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೆನ್ಸೆಕ್ಸ್‌ನಲ್ಲಿ ಬಿಕಾಜಿ ಫುಡ್ಸ್ ಷೇರು ಲಿಸ್ಟ್ ಆಗಿದ್ದು, ತನ್ನ ಪ್ರೀಮಿಯಂಗಿಂತ ಶೇ. 7ರಷ್ಟು ಹೆಚ್ಚಳ ಕಂಡು 321.15 ರೂ ಬೆಲೆ ಪಡೆದಿದೆ. ಐಪಿಒನಲ್ಲಿ ಇದರ ಷೇರನ್ನು 300 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಇನ್ನು, ಎನ್‌ಎಸ್‌ಇ ನಿಫ್ಟಿಯಲ್ಲಿ ಬಿಕಾಜಿ ಫುಡ್ಸ್ 322.80 ರೂ ಬೆಲೆ ಪಡೆದುಕೊಂಡಿದೆ.

ಮೇದಾಂತ ಐಪಿಒ ವಿವರ
 

ಮೇದಾಂತ ಐಪಿಒ ವಿವರ

ಗ್ಲೋಬಲ್ ಹೆಲ್ತ್ ಮತ್ತು ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪನಿಗಳ ಷೇರುಗಳು ಉತ್ತಮ ಆರಂಭ ಪಡೆದಿರುವುದರಲ್ಲಿ ಅಚ್ಚರಿ ಇಲ್ಲ. ಯಾಕೆಂದರೆ ಐಪಿಒನಲ್ಲೇ ಇವೆರಡು ಒಳ್ಳೆಯ ಬೇಡಿಕೆ ಗಿಟ್ಟಿಸಿದ್ದವು. ಗ್ಲೋಬಲ್ ಹೆಲ್ತ್ ಕಂಪನಿಯ ಷೇರುಗಳಿಗೆ 10 ಪಟ್ಟು ಬೇಡಿಕೆ ಬಂದಿದ್ದರೆ, ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ 27 ಪಟ್ಟು ಹೆಚ್ಚು ಸಬ್‌ಸ್ಕ್ರಿಪ್ಷನ್ ಅರ್ಜಿ ಪಡೆದಿತ್ತು. ಎರಡಕ್ಕೂ ಕೂಡ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆ ಇತ್ತು.

ಗ್ಲೋಬಲ್ ಹೆಲ್ತ್ ಸಂಸ್ಥೆ ನವೆಂಬರ್ 3-7ರವರೆಗೆ ನಡೆದ ಐಪಿಒ ಮೂಲಕ 2,200 ಕೋಟಿ ರೂ ಬಂಡವಾಳ ಸಂಗ್ರಹಿಸಿದೆ. ಒಂದು ಲಾಟ್‌ನಲ್ಲಿ 44 ಷೇರುಗಳಂತೆ 319-336 ರೂ ಬೆಲೆ ಪಟ್ಟಿಯಲ್ಲಿ ಅದರ ಷೇರುಗಳ ವಿತರಣೆ ಆಗಿತ್ತು. ಆಸ್ಪತ್ರೆ ವಲಯದಲ್ಲಿ ಭಾರತೀಯ ಕಂಪನಿಯೊಂದು ಐಪಿಒ ಮೂಲಕ ಪಡೆದ ಅತಿ ಹೆಚ್ಚು ಬಂಡವಾಳ ಇದಾಗಿದೆ.

 

ಬಿಕಾಜಿ ಐಪಿಒ ವಿವರ

ಬಿಕಾಜಿ ಐಪಿಒ ವಿವರ

ಇನ್ನು, ಬಿಕಾಜಿ ಫುಡ್ಸ್ ಇಂಟರ್ನ್ಯಾಷನಲ್ ಕಂಪನಿಯು ಐಪಿಒನಲ್ಲಿ ಒಳ್ಳೆಯ ಬೇಡಿಕೆ ಗಿಟ್ಟಿಸಿತ್ತು. ಇದೂ ಕೂಡ ನವೆಂಬರ್ 3-7ರವರೆಗೆ ಐಪಿಒಗೆ ತೆರೆದುಕೊಂಡಿತ್ತು. ಪ್ರತೀ ಷೇರನ್ನು 285ರಿಂದ 300 ರೂ ಬೆಲೆಗೆ ಹಂಚಲಾಯಿತು. ಒಟ್ಟು ಸುಮಾರು 2 ಕೋಟಿ ಷೇರುಗಳು ಐಪಿಒದಲ್ಲಿ ಕೊಡಲಾಗಿತ್ತು. ಆದರೆ, ಅದಕ್ಕೆ ಬಂದ ಬಿಡ್ಡಿಂಗ್ ಬರೋಬ್ಬರಿ 55 ಕೋಟಿ ಎನ್ನಲಾಗಿದೆ.

English summary

Global Health and Bikaji Foods Gain Big in Their Stock Market Debut

Medanta hospital operator Global Health and Bikaji Foods International company today debuted in Sensex and Nifty on November 16th. Both were recently got good response in IPO. Both got higher price that the premium at stock market.
Story first published: Wednesday, November 16, 2022, 14:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X