For Quick Alerts
ALLOW NOTIFICATIONS  
For Daily Alerts

ಜಾಗತಿಕ ಚೇತರಿಕೆ ಆಶಾವಾದ: ಕಚ್ಚಾ ತೈಲ ಬೆಲೆ, ಬ್ಯಾರೆಲ್‌ಗೆ $67 ಏರಿಕೆ

|

ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಳ ಹಾಗೂ ನಿರ್ಬಂಧಗಳಿಂದಾಗಿ ಬೇಡಿಕೆಯು ಕುಸಿದರೂ, ಜಾಗತಿಕ ಆರ್ಥಿಕ ಚೇತರಿಕೆಯ ಬಗೆಗಿನ ಆಶಾವಾದವು ಸರಿದೂಗಿದ್ದರ ಪರಿಣಾಮ ಕಚ್ಚಾ ತೈಲ ದರವು ಬ್ಯಾರೆಲ್‌ಗೆ 67 ಅಮೆರಿಕನ್ ಡಾಲರ್‌ಗೆ ತಲುಪಿದೆ.

 

ಕೊರೊನಾ ಎಫೆಕ್ಟ್‌: ಈ ವರ್ಷ ಮೊದಲ ಬಾರಿಗೆ ರಿಯಾಯಿತಿ ಬೆಲೆಯಲ್ಲಿ ಚಿನ್ನ ಮಾರಾಟ!

ಕಳೆದ ತಿಂಗಳಿನಲ್ಲಿ ಕಚ್ಚಾ ತೈಲ ಬೆಲೆಗಳು ಸತತವಾಗಿ ಏರಿಕೆಗೊಂಡ ಪರಿಣಾಂ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇಕಡಾ 6ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಕಳೆದ ವರ್ಷ ಆಗಸ್ಟ್‌ನಿಂದ ಗ್ಯಾಸೋಲಿನ್ ಮಾರಾಟವು ಅತ್ಯಂ ತ ಕಡಿಮೆ ಮಟ್ಟಕ್ಕೆ ಇಳಿದಿದ್ದು, ಡೀಸೆಲ್ ಮಾರಾಟವು ಅಕ್ಟೋಬರ್ ತಿಂಗಳಿನಿಂದ ಕಡಿಮೆ ಆಗಿದೆ.

ಜಾಗತಿಕ ಚೇತರಿಕೆ ಆಶಾವಾದ: ಕಚ್ಚಾ ತೈಲ ಬೆಲೆ, ಬ್ಯಾರೆಲ್‌ಗೆ $67 ಏರಿಕೆ

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆಗಳು ಹೆಚ್ಚುತ್ತಿರುವ ಪರಿಣಾಮ ಹೆಚ್ಚಿನ ದೇಶದ ಆರ್ಥಿಕ ಚಟುವಟಿಕೆಯು ಚೇತರಿಸಿಕೊಳ್ಳುತ್ತಿದೆ. ಹೀಗಾಗಿ 2021 ರಲ್ಲಿ ತೈಲ ಬೇಡಿಕೆಯು ಮರುಕಳಿಸುವ ಸಾಧ್ಯತೆಯ ಮೇಲೆ ಕಚ್ಚಾ ತೈಲ ಬೆಲೆ ಏರಿಕೆಗೊಂಡಿದೆ.

ಇದರ ಜೊತೆಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಅದರ ಮಿತ್ರ ರಾಷ್ಟ್ರಗಳು ಕಳೆದ ವರ್ಷ ವಿಧಿಸಿದ್ದ ಪೂರೈಕೆ ನಿರ್ಬಂಧಗಳನ್ನು ಸರಾಗಗೊಳಿಸಿದರ ಪರಿಣಾಮವು ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ.

English summary

Global Recovery Optimism: Crude Oil Near $67 A Barrel

Oil rose toward $67 a barrel as weaker demand from virus-ravaged India partially offset optimism over the global economic recovery.
Story first published: Monday, May 3, 2021, 9:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X