For Quick Alerts
ALLOW NOTIFICATIONS  
For Daily Alerts

ಗೋಲ್ಡ್‌ ಇಟಿಫ್‌ ಹೂಡಿಕೆ ಅಧಿಕ: ಮುಂಬರುವ ತಿಂಗಳುಗಳಲ್ಲೂ ಏರಿಕೆ ಸಾಧ್ಯತೆ

|

ಚಿನ್ನದ ಹೂಡಿಕೆಯ ವಿಷಯದಲ್ಲಿ ಚಿನ್ನದ ಇಟಿಎಫ್ ಅನ್ನು ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಹೂಡಿಕೆದಾರರು ಇನ್ನೂ ಚಿನ್ನದ ಇಟಿಎಫ್‌ಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ 446 ಕೋಟಿ ರೂಪಾಯಿ ಗೋಲ್ಡ್‌ ಇಟಿಎಫ್‌ಗಳ ಮೇಲೆ ಹೂಡಿಕೆ ಮಾಡಲಾಗಿದ್ದು, ಈ ಹೂಡಿಕೆಯು ಬರುವ ತಿಂಗಳುಗಳಲ್ಲಿ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗ ಹಬ್ಬದ ಸೀಸನ್‌ನಲ್ಲಿ ಜನರು ಅಧಿಕವಾಗಿ ಗೋಲ್ಡ್‌ ಇಟಿಫ್‌ ಮೇಲೆ ಹೂಡಿಕೆಯನ್ನು ಮಾಡುತ್ತಿದ್ದಾರೆ.

ಕಳೆದ ತಿಂಗಳು 24 ಕೋಟಿಗಿಂತಲೂ ಅಧಿಕ ಒಳಹರಿವು ಇತ್ತು. ಜುಲೈನಲ್ಲಿ, 61.5 ಕೋಟಿ ರೂಪಾಯಿಗಳ ನೆಟ್‌ ವಿತ್‌ಡ್ರಾ ಕಂಡಿತ್ತು ಎಂದು ಭಾರತದ ಮ್ಯೂಚುಯಲ್ ಫಂಡ್‌ಗಳ ಅಸೋಸಿಯೇಶನ್‌ನ ಅಂಕಿಅಂಶಗಳು (ಆಮ್ಫಿ) ತೋರಿಸಿದೆ. ಈ ಮೂಲಕ ಈವರೆಗೆ ಗೋಲ್ಡ್‌ ಇಟಿಎಫ್‌ಗೆ ಒಟ್ಟು ಒಳಹರಿವು 3,515 ಕೋಟಿ ಆಗಿದೆ. ಕಳೆದ ತಿಂಗಳು ಗೋಲ್ಡ್‌ ಇಟಿಫ್‌ ಮೇಲೆ ಹೂಡಿಕೆಯು ಅಧಿಕವಾಗಿದೆ. 14 ರಿಂದ 24.6 ಲಕ್ಷಕ್ಕೆ ಏರಿಕೆ ಕಂಡಿದೆ. ಇನ್ನು ಈ ವರ್ಷ ಈವರೆಗೆ ಇಟಿಎಫ್‌ನಲ್ಲಿ ಶೇಕಡ 56 ರಷ್ಟು ಏರಿಕೆ ಕಂಡಿದೆ.

ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಹಳದಿ ಲೋಹದ ಬೆಲೆಯಲ್ಲಿನ ಬದಲಾವಣೆ ಹಾಗೂ ಹಬ್ಬದ ಸೀಸನ್‌ ಸೆಪ್ಟೆಂಬರ್‌ನಲ್ಲಿ ಇಟಿಎಫ್‌ ಮೇಲಿನ ಹೂಡಿಕೆ ಅಧಿಕವಾಗಲು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ. "ಗೋಲ್ಡ್‌ ಇಟಿಎಫ್‌ ಮೇಲೆ ಕಳೆದ ಕೆಲವು ತಿಂಗಳಿನಿಂದ ಅಧಿಕ ಒಳಹರಿವು ಬರುತ್ತಿದೆ. ಈ ಸಂದರ್ಭದಲ್ಲಿ ಗೋಲ್ಡ್‌ ಇಟಿಎಫ್‌ ಸುರಕ್ಷಿತ ಹೂಡಿಕೆ ಕ್ಷೇತ್ರ ಎಂಬ ನಿಟ್ಟಿನಲ್ಲಿ ಜನರು ಗೋಲ್ಡ್‌ ಇಟಿಎಫ್‌ ಮೇಲೆ ಹೂಡಿಕೆ ಮಾಡುತ್ತಿದ್ದಾರೆ," ಎಂದು ಕೂಡಾ ತಿಳಿಸಿದ್ದಾರೆ.

ಮುಂಬರುವ ತಿಂಗಳಲ್ಲಿ ಗೋಲ್ಡ್‌ ಇಟಿಫ್‌ ಹೂಡಿಕೆ ಇನ್ನೂ ಏರಿಕೆ ಸಾಧ್ಯತೆ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮಾರ್ಕೆಟ್‌ ಪಲ್ಸ್‌ನ ಮುಖ್ಯ ಅಧಿಕಾರಿ ಅರ್ಷದ್‌ ಫಹುಮಾ, "ನಾವು ಜುಲೈನಿಂದ ಸೆಪ್ಟೆಂಬರ್‌ನ ಮಧ್ಯದವರೆಗೆ ನೋಡುವಾಗ, ಭಾರತದಲ್ಲಿ ಷೇರುಗಳು ಉತ್ತಮ ಏರಿಕೆಯನ್ನು ಕಂಡಿದೆ. ಜುಲೈಗಿಂತ ಅಧಿಕವಾಗಿ ಧನಾತ್ಮಕವಾಗಿ ಆಗಸ್ಟ್‌ನಲ್ಲಿ ಒಳಹರಿವು ಕಂಡು ಬಂದಿದೆ. ಆದರೆ ಬಳಿಕ ಸೆಪ್ಟೆಂಬರ್‌ನಲ್ಲಿ ಬಹಳ ಅಧಿಕ ಹಾಗೂ ಉತ್ತಮವಾದ ಹೂಡಿಕೆ ಕಂಡು ಬಂದಿದೆ," ಎಂದು ಹೇಳಿದ್ದಾರೆ.

ಈ ನಡುವೆ ಯುಎಸ್‌, ಯಕೆ ಹಾಗೂ ಕೆನಡಾದಲ್ಲಿ ಸೆಪ್ಟೆಂಬರ್‌ನಲ್ಲಿ ಗೋಲ್ಡ್‌ ಇಟಿಎಫ್‌ನಲ್ಲಿ ಹೊರ ಹರಿವು ಕಾಣಿಸಿಕೊಂಡಿದೆ. ಆದರೆ ಈ ಸಂದರ್ಭದಲ್ಲಿ ಭಾರತ ದೇಶದಲ್ಲಿ ಗೋಲ್ಡ್‌ ಇಟಿಎಫ್‌ ಉತ್ತಮವಾಗಿ ಏರಿಕೆ ಕಂಡಿದೆ. ಮಾರ್ನಿಂಗ್ ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ವ್ಯವಸ್ಥಾಪಕ ಹಿಮಂಶು ಶ್ರೀವಾಸ್ತವ, "ಜೂನ್‌ ತಿಂಗಳಿನಿಂದ ಚಿನ್ನದ ದರವು ಕೆಳಮುಖದಲ್ಲಿದೆ. ಆರ್ಥಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಚಿನ್ನವನ್ನು ಸುರಕ್ಷಿತ ಸಾಧನವಾಗಿ ಬಳಸುತ್ತಾರೆ. ಹಾಗೆಯೇ ಷೇರು ಮಾರುಕಟ್ಟೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಚಿನ್ನವನ್ನು ಸುರಕ್ಷತೆ ಎಂದು ಪರಿಗಣಿಸಲಾಗುತ್ತದೆ," ಎಂದು ಹೇಳಿದೆ.

English summary

Gold ETFs attract Rs 446-cr in September; inflow may continue in coming months

Gold ETFs attract Rs 446-cr in September; inflow may continue in coming months. Read on.
Story first published: Sunday, October 17, 2021, 19:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X