For Quick Alerts
ALLOW NOTIFICATIONS  
For Daily Alerts

ಕಡಿಮೆಯಾಯ್ತು ಭಾರತದ ಚಿನ್ನದ ಆಮದು; ಆರ್ಥಿಕತೆ ಮೇಲೆ ಏನು ಪರಿಣಾಮ?

|

ನವದೆಹಲಿ, ನ. 27: ಭಾರತದ ಚಿನ್ನದ ಆಮದು ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಇಳಿಮುಖವಾಗಿದೆ ಎಂದು ವಾಣಿಜ್ಯ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಹಬ್ಬದ ಸೀಸನ್‌ನಲ್ಲಿ ಚಿನ್ನಕ್ಕೆ ಬೇಡಿಕೆ ಇದ್ದು ಒಳ್ಳೆಯ ವಹಿವಾಟು ನಡೆದಿತ್ತಾದರೂ ಅಕ್ಟೋಬರ್ ತಿಂಗಳಲ್ಲಿ ಚಿನ್ನದ ಆಮದು 3.7 ಬಿಲಿಯನ್ ಡಾಲರ್‌ಗೆ (ಸುಮಾರು 30 ಸಾವಿರ ಕೋಟಿ ರೂ) ಇಳಿದಿದೆ. ಇದು ಹಿಂದಿನ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಶೇ. 27.47ರಷ್ಟು ಇಳಿಕೆಯಾಗಿದೆ.

ಬೆಳ್ಳಿಯ ಆಮದು ಕೂಡ ಅಕ್ಟೋಬರ್ ತಿಂಗಳಲ್ಲಿ ಶೇ. 34.80ರಷ್ಟು ಇಳಿಕೆಯಾಗಿ 585 ಮಿಲಿಯನ್ ಡಾಲರ್‌ಗೆ (ಸುಮಾರು 4,777 ಕೋಟಿ ರೂಪಾಯಿ) ಬಂದು ತಲುಪಿದೆ. ಆದರೆ, ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ 8 ತಿಂಗಳ ಅವಧಿಯಲ್ಲಿ ಬೆಳ್ಳಿ ಆಮದು ಮೂರು ಪಟ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬೆಳ್ಳಿ ಆಮದು 1.52 ಬಿಲಿಯನ್ ಡಾಲರ್ ಇತ್ತು. ಈ ಬಾರಿ ಅದು 4.8 ಬಿಲಿಯನ್ ಡಾಲರ್‌ಗೆ ಏರಿದೆ.

ಗೂಗಲ್ ಉದ್ಯೋಗಿಗಳಿಗೇ ನೋ ನೋ; ಬೆಂಗಳೂರಿನ ಮನೆಮಾಲೀಕರದ್ದು ದೊಡ್ಡ ಡಿಮ್ಯಾಂಡಾ?ಗೂಗಲ್ ಉದ್ಯೋಗಿಗಳಿಗೇ ನೋ ನೋ; ಬೆಂಗಳೂರಿನ ಮನೆಮಾಲೀಕರದ್ದು ದೊಡ್ಡ ಡಿಮ್ಯಾಂಡಾ?

ಆದರೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಚಿನ್ನದ ಆಮದು 24 ಬಿಲಿಯನ್ ಡಾಲರ್‌ಗೆ (1.96 ಲಕ್ಷ ಕೋಟಿ ರೂಪಾಯಿ) ಕುಸಿದಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಚಿನ್ನದ ಆಮದು ಶೇ. 17.38ರಷ್ಟು ಇಳಿಕೆ ಕಂಡಿದೆ. ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣವೆನ್ನಲಾಗಿದೆ.

ಕಡಿಮೆಯಾಯ್ತು ಭಾರತದ ಚಿನ್ನದ ಆಮದು; ಆರ್ಥಿಕತೆ ಮೇಲೆ ಏನು ಪರಿಣಾಮ?

ಇದೇ ವೇಳೆ, ಭಾರತದಿಂದ ಹವಳ ಮತ್ತು ಆಭರಣಗಳ ರಫ್ತು ಎಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ 1.81ರಷ್ಟು ಏರಿಕೆಯಾಗಿ 24 ಬಿಲಿಯನ್ ಡಾಲರ್ ತಲುಪಿದೆ.

ಚಿನ್ನದ ಆಮದು ಕಡಿಮೆ ಆದರೆ ಒಳಿತೇನು?

ಯಾವುದೇ ಆರ್ಥಿಕತೆಯ ಕರೆಂಟ್ ಅಕೌಂಟ್ ಅಂತರ ಹೆಚ್ಚಾಗಲು ದೊಡ್ಡ ಪ್ರಮಾಣದ ಆಮದು ಕಾರಣ. ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುವ ವಸ್ತುಗಳಲ್ಲಿ ಕಚ್ಛಾ ತೈಲ ಮತ್ತು ಚಿನ್ನ ಪ್ರಮುಖವಾದುದು. ಚಿನ್ನದ ಆಮದು ಕಡಿಮೆ ಕಡಿಮೆ ಆಗುವುದರಿಂದ ಭಾರತದ ವ್ಯಾಪಾರ ಅಂತರ (ಟ್ರೇಡ್ ಡೆಫಿಸಿಟ್) ಕಡಿಮೆಗೊಳ್ಳುತ್ತದೆ. ತತ್‌ಪರಿಣಾಮವಾಗಿ ರೂಪಾಯಿಗೆ ಬಲಸಿಗುತ್ತದೆ.

ಡಿಸೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ಭಾರತದ ಚಿನ್ನದ ಆಮದು ಇನ್ನಷ್ಟು ಕಡಿಮೆಗೊಳ್ಳುವ ನಿರೀಕ್ಷೆ ಇದೆ. 2021ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 343.9 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಚಿನ್ನದ ಆಮದು 250 ಟನ್‌ಗೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. 2022ರಲ್ಲಿ ಭಾರತದಲ್ಲಿ ಒಟ್ಟು ಚಿನ್ನದ ಅನುಭೋಗ 797.3 ಟನ್‌ನಿಂದ 750 ಟನ್‌ಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.

ಕಡಿಮೆಯಾಯ್ತು ಭಾರತದ ಚಿನ್ನದ ಆಮದು; ಆರ್ಥಿಕತೆ ಮೇಲೆ ಏನು ಪರಿಣಾಮ?

ಚಿನ್ನದ ಮೇಲೆ ಹೂಡಿಕೆಗೆ ಸಕಾಲವಾ?

ಇದೇ ವೇಳೆ, ಜನವರಿ ತಿಂಗಳಿಂದ ಚಿನ್ನಕ್ಕೆ ಮತ್ತೆ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಚಿನ್ನದ ಬೆಲೆ ಏರಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಬಯಸುವವರು ಡಿಸೆಂಬರ್‌ವೊಳಗೆ ಚಿನ್ನ ಖರೀದಿ ಮಾಡಿದರೆ ಮುಂದೆ ಲಾಭ ಮಾಡಿಕೊಳ್ಳಬಹುದು. ಸದ್ಯ 24 ಕ್ಯಾರೆಟ್ ಅಪರಂಜಿ ಚಿನ್ನ 10 ಗ್ರಾಂಗೆ 53,030 ರೂ ಇದೆ. ಇನ್ನು 22 ಕ್ಯಾರೆಟ್ ಆಭರಣ ಚಿನ್ನ 10 ಗ್ರಾಂಗೆ 48,610 ರೂಪಾಯಿ ಬೆಲೆ ಇದೆ.

English summary

Gold Imports By India Decline In October, Price May Go Higher From January

India witnessed a decline in both gold and silver imports in October, according to the latest by the Commerce ministry.
Story first published: Sunday, November 27, 2022, 16:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X