For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಸ್ವಾಮ್ಯದ ಕನಿಷ್ಠ 8 ಕಂಪೆನಿಗಳಲ್ಲಿ ಷೇರು ಬೈಬ್ಯಾಕ್ ಸಾಧ್ಯತೆ

By ಅನಿಲ್ ಆಚಾರ್
|

ವಿತ್ತೀಯ ಕೊರತೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ ಪ್ರಸಕ್ತ ಹಣಕಾಸು ವರ್ಷದ 2021ರ ಮಾರ್ಚ್ ನೊಳಗೆ ಸರ್ಕಾರಿ ಸ್ವಾಮ್ಯದ ಕನಿಷ್ಠ 8 ಕಂಪೆನಿಗಳಲ್ಲಿ ಷೇರು ಬೈಬ್ಯಾಕ್ (ಮರು ಖರೀದಿ) ಮಾಡುವಂತೆ ಕೇಳಿದೆ ಎಂದು ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರಲ್ಲಿ ಕೋಲ್ ಇಂಡಿಯಾ, ಎನ್ ಟಿಪಿಸಿ, ಎನ್ ಎಂಡಿಸಿ, ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಎಂಟು ಕಂಪೆನಿಗಳಲ್ಲಿನ ಸರ್ಕಾರದ ಪಾಲಿನ ಷೇರನ್ನು ಬೈಬ್ಯಾಕ್ ವೇಳೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮಾಹಿತಿ ಮೂಲಗಳನ್ನು ಬಹಿರಂಗ ಮಾಡಿಲ್ಲ.

ಬೈಬ್ಯಾಕ್ ನಮ್ಮ ಸ್ಟ್ರಾಟೆಜಿಯಲ್ಲಿ ಅತಿ ಮುಖ್ಯವಾದದ್ದು ಮತ್ತು ಇದರಿಂದ ಮಾರುಕಟ್ಟೆ ಬೆಲೆ ಕಟ್ಟುವುದಕ್ಕೆ ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಸಿಯುತ್ತಿರುವ ಆದಾಯ: ಭಾರತದ ಗ್ರಾಮೀಣ ಆರ್ಥಿಕತೆ ಸಂಕಷ್ಟದಲ್ಲಿಕುಸಿಯುತ್ತಿರುವ ಆದಾಯ: ಭಾರತದ ಗ್ರಾಮೀಣ ಆರ್ಥಿಕತೆ ಸಂಕಷ್ಟದಲ್ಲಿ

ಕೊರೊನಾ ಬಿಕ್ಕಟ್ಟಿನ ಕಾರಣದಿಂದಾಗಿ 2020- 21ನೇ ಸಾಲಿನಲ್ಲಿ ಇರಿಸಿಕೊಂಡಿದ್ದ ಜಿಡಿಪಿಯ 3.5% ವಿತ್ತೀಯ ಕೊರತೆಗಿಂತ ಬಹಳ ದೊಡ್ಡ ಮೊಟ್ಟದ ವ್ಯತ್ಯಾಸ ಆಗಲಿದೆ. ಇನ್ನು ತೆರಿಗೆ ಸಂಗ್ರಹದಲ್ಲೂ ಇಳಿಕೆ ಆಗಿದೆ. ಬಿಪಿಸಿಎಲ್ ಹಾಗೂ ಏರ್ ಇಂಡಿಯಾ ಖಾಸಗೀಕರಣದಲ್ಲೂ ತಡವಾಗಿದೆ.

ಸರ್ಕಾರಿ ಸ್ವಾಮ್ಯದ ಕನಿಷ್ಠ 8 ಕಂಪೆನಿಗಳಲ್ಲಿ ಷೇರು ಬೈಬ್ಯಾಕ್ ಸಾಧ್ಯತೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಲವು ಕಂಪೆನಿಗಳ ಖಾಸಗೀಕರಣ ಮತ್ತು ಸ್ವಲ್ಪ ಪ್ರಮಾಣದ ಷೇರು ಮಾರಾಟ ಮಾಡುವ ಮೂಲಕ 2700 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸುವ ಗುರಿಯನ್ನು ಕಳೆದ ಫೆಬ್ರವರಿಯಲ್ಲಿ ಸರ್ಕಾರವು ಹಾಕಿಕೊಂಡಿತ್ತು. ಆದರೆ ಕೆಲವು ಕಂಪೆನಿಗಳು, ಅದರಲ್ಲೂ ತೈಲ ವಲಯದ ಕಂಪೆನಿಗಳದು ಸಾಧ್ಯವಾಗಲಿಲ್ಲ. ಏಕೆಂದರೆ ಮುಖ್ಯ ಷೇರುದಾರ ಎನಿಸಿಕೊಳ್ಳಲು ಎಷ್ಟು ಅಗತ್ಯವೋ ಅಷ್ಟು ಮಾತ್ರ ಸರ್ಕಾರದ ಬಳಿ ಇದೆ ಎಂದು ಎಚ್ಚರಿಸಲಾಗಿತ್ತು.

ಆದ್ದರಿಂದ ಯಾವ ಕಂಪೆನಿಯಲ್ಲಿ ಸಾಕಾಗುವಷ್ಟರ ಮಟ್ಟಿಗೆ ಹಣ ಹಾಗೂ ಬಂಡವಾಳ ವೆಚ್ಚವು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತ ಕಡಿಮೆ ಇರುತ್ತದೋ ಹಾಗೂ ಸರ್ಕಾರದ ಪಾಲು 51%ಗಿಂತ ಕಡಿಮೆ ಆಗುವುದಿಲ್ಲವೋ ಅಂಥ ಷೇರು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ.

ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಬಂಡವಾಳ ವೆಚ್ಚದ ಗುರಿಯನ್ನು ತಲುಪಬೇಕು ಅಥವಾ ಷೇರುದಾರರಿಗೆ ಡಿವಿಡೆಂಡ್ ಪಾವತಿಸಬೇಕು ಎಂದು ಸರ್ಕಾರವು ಹೇಳಿದೆ.

English summary

Government Asks At Least 8 PSU's To Consider Buyback Of Shares, According To Sources

Union government asks at least 8 PSU's to consider buyback of shares, according to sources.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X