For Quick Alerts
ALLOW NOTIFICATIONS  
For Daily Alerts

ಇಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ: ಇನ್ನೂ 3 ತಿಂಗಳು ಸರ್ಕಾರವೇ ತುಂಬುತ್ತದೆ ಪಿಎಫ್ ಹಣ

|

ಜೂನ್ ನಿಂದ ಆಗಸ್ಟ್ 2020ರ ತನಕ ಮೂರು ತಿಂಗಳ ಕಾಲ ಉದ್ಯೋಗಿಗಳು, ಉದ್ಯೋಗದಾತರ 12+12 ಸೇರಿ, 24 ಪರ್ಸೆಂಟ್ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಅನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡಲಿದೆ. ಆದರೆ ಇದು ಎಲ್ಲ ಸಂಸ್ಥೆ ಹಾಗೂ ಉದ್ಯೋಗಿಗಳಿಗೆ ಅನ್ವಯ ಆಗುವುದಿಲ್ಲ.

 

ಯಾವ ಸಂಸ್ಥೆಯಲ್ಲಿ ನೂರರೊಳಗೆ ಸಿಬ್ಬಂದಿ ಇದ್ದು, ಆ ಪೈಕಿ ಶೇಕಡಾ 90ರಷ್ಟು ಸಿಬ್ಬಂದಿಯ ವೇತನವು ತಿಂಗಳಿಗೆ 15 ಸಾವಿರ ರುಪಾಯಿಗಿಂತ ಕಡಿಮೆ ಇರುತ್ತದೋ ಅಂಥ ಸಿಬ್ಬಂದಿ ಹಾಗೂ ಸಂಸ್ಥೆ ಪರವಾಗಿ ಇಪಿಎಫ್ ಪಾವತಿಯನ್ನು ಸರ್ಕಾರವೇ ಮಾಡುತ್ತದೆ. ಜೂನ್- ಜುಲೈ ಹಾಗೂ ಆಗಸ್ಟ್ ತಿಂಗಳ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.

 

5 ವರ್ಷದೊಳಗೆ ಕೆಲಸ ಬಿಟ್ಟಲ್ಲಿ ಪಿಎಫ್ ವಿಥ್ ಡ್ರಾಗೆ ತೆರಿಗೆ; ಇದು ಯಾರಿಗೆ ಅನ್ವಯಿಸಲ್ಲ?5 ವರ್ಷದೊಳಗೆ ಕೆಲಸ ಬಿಟ್ಟಲ್ಲಿ ಪಿಎಫ್ ವಿಥ್ ಡ್ರಾಗೆ ತೆರಿಗೆ; ಇದು ಯಾರಿಗೆ ಅನ್ವಯಿಸಲ್ಲ?

ಈ ಹಿಂದೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ಇಪಿಎಫ್ (ಉದ್ಯೋಗದಾತರು ಹಾಗೂ ಉದ್ಯೋಗಿಗಳು) ಸರ್ಕಾರದಿಂದ ಪಾವತಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದೀಗ ಅವಧಿ ವಿಸ್ತರಣೆ ಮಾಡಿರುವುದರಿಂದ ಮಾರ್ಚ್ ನಿಂದ ಆಗಸ್ಟ್ ತನಕ ಒಟ್ಟು ಆರು ತಿಂಗಳ ಕಾಲ ಸರ್ಕಾರವೇ ಉದ್ಯೋಗದಾತರು- ಉದ್ಯೋಗಿಗಳ ಇಪಿಎಫ್ ಕೊಡುಗೆಯನ್ನು ನೀಡಿದಂತಾಗುತ್ತದೆ.

ಸಿಹಿ ಸುದ್ದಿ: ಇನ್ನೂ 3 ತಿಂಗಳು ಸರ್ಕಾರವೇ ತುಂಬುತ್ತದೆ ಪಿಎಫ್ ಹಣ

ಉದ್ಯೋಗಿಗಳ ಮೂಲವೇತನ (ಬೇಸಿಕ್ ಸ್ಯಾಲರಿ) 12 ಪರ್ಸೆಂಟ್ ನಂತೆ ಉದ್ಯೋಗಿ ಹಾಗೂ ಉದ್ಯೋಗದಾತರು ಹಣ ತುಂಬುತ್ತಾರೆ. ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಆ ಹಣ ಪ್ರತಿ ತಿಂಗಳೂ ಜಮೆ ಆಗುತ್ತಾ ಹೋಗುತ್ತದೆ. ಅದಕ್ಕೆ ಬಡ್ಡಿ ಕೂಡ ಸೇರುತ್ತದೆ. ಇನ್ನು ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಉದ್ಯೋಗದಾತರು 8.33% ಹಣ ತುಂಬುತ್ತಾರೆ.

ಕೊರೊನಾದಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಸಂಸ್ಥೆಗಳಿಗೆ ನೆರವು ನೀಡುವುದಕ್ಕೆ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾದಲ್ಲಿ ಸರ್ಕಾರ ಈ ಪರಿಹಾರ ಘೋಷಣೆ ಮಾಡಿದೆ. 3.67 ಲಕ್ಷ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ 72.22 ಲಕ್ಷ ಕಾರ್ಮಿಕರಿಗೆ ಈ ಘೋಷಣೆಯಿಂದ ಅನುಕೂಲ ಆಗಲಿದೆ.

English summary

Government Extends EPF Contribution To 3 More Months

Union government approved to extend EPF contribution 3 more months, announced on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X