For Quick Alerts
ALLOW NOTIFICATIONS  
For Daily Alerts

ಸರ್ಕಾರ ಆರ್ಥಿಕತೆಗಿಂತ ಹೆಚ್ಚಾಗಿ ರಾಜಕೀಯದತ್ತ ಗಮನ ಕೊಡುತ್ತಿದೆ: ರಘುರಾಮ್ ರಾಜನ್

|

ಕೇಂದ್ರ ಸರ್ಕಾರವು ಆರ್ಥಿಕತೆಯತ್ತ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ತನ್ನ ರಾಜಕೀಯ ಸಾಮಾಜಿಕ ಅಜೆಂಡಾವನ್ನು ಪೂರೈಸುವಲ್ಲಿ ಹೆಚ್ಚು ಗಮನಹರಿಸುತ್ತಿದೆ. ಇದರಿಂದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

"ಇದು ವಿಷಾದಕರ ಸಂಗತಿ, ತೀರಾ ಇತ್ತೀಚೆಗೆ ಇದು ರಾಜಕೀಯ ಎಂದು ನಾನು ಭಾವಿಸುತ್ತೇನೆ" ಎಂದು ಶ್ರೀ ರಾಜನ್ ಅವರು ಭಾರತದ ಬೆಳವಣಿಗೆಯನ್ನು ತಡೆಗೆ ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು. ಪ್ರಮುಖ ವಿಷಯಗಳತ್ತ ಗಮನ ಹರಿಸುವ ಮೂಲಕ ಭಾರತ ತನ್ನ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಹಿಮ್ಮೆಟ್ಟಿಸಬಹುದು ಎಂದು ಅವರು ಹೇಳಿದರು.

ಸರ್ಕಾರ ಆರ್ಥಿಕತೆಗಿಂತ ಹೆಚ್ಚಾಗಿ ರಾಜಕೀಯದತ್ತ ಗಮನ ಕೊಡುತ್ತಿದೆ!

ದುರದೃಷ್ಟವಶಾತ್ ಬೃಹತ್ ಚುನಾವಣಾ ಗೆಲುವಿನ ನಂತರ ಪ್ರಸ್ತುತ ಸರ್ಕಾರವು "ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ತನ್ನ ರಾಜಕೀಯ ಮತ್ತು ಸಾಮಾಜಿಕ ಅಜೆಂಡಾವನ್ನು ಪೂರೈಸುವಲ್ಲಿ ಹೆಚ್ಚು ಗಮನಹರಿಸಿದೆ" ಎಂದು ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರಘುರಾಮ್ ರಾಜನ್ ಹೇಳಿದ್ದಾರೆ.

ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆಯು ಡಿಸೆಂಬರ್ ತ್ರೈಮಾಸಿಕದಲ್ಲಿ ಸುಮಾರು 7 ವರ್ಷಗಳ ಕನಿಷ್ಠ 4.7 ಪರ್ಸೆಂಟ್‌ಗೆ ತಲುಪಿದೆ. ಹಿಂದಿನ ತ್ರೈಮಾಸಿಕ ದರಕ್ಕೆ ಹೋಲಿಸಿದರೆ ಚೇತರಿಕೆ ಕಂಡಿದೆ.

English summary

Government More Focus On Political Agenda Rather Than Economy

Former RBI governor Raghuram Rajan has said slowdown in growth is due to the current government focussing more on meeting its political and social agenda
Story first published: Saturday, February 29, 2020, 12:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X