For Quick Alerts
ALLOW NOTIFICATIONS  
For Daily Alerts

2020- 21ನೇ ಸಾಲಿನ ಹಣಕಾಸು ವರ್ಷದ ಮೊದಲ ಜಿಡಿಪಿ ಅಂದಾಜಿನ ಪ್ರಮುಖಾಂಶ

By ಅನಿಲ್ ಆಚಾರ್
|

2020- 21 ಹಣಕಾಸು ವರ್ಷದ ಮೊದಲ ಮುಂಗಡ ಅಂದಾಜನ್ನು (FAE) ಗುರುವಾರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡಿದೆ. ಇದನ್ನು ಸಾಮಾನ್ಯವಾಗಿ ಪ್ರತಿ ವರ್ಷದ ಜನವರಿಯ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದರ ಆಧಾರವಾಗಿ ಮುಂದಿನ ಹಣಕಾಸು ವರ್ಷದ ಬಜೆಟ್ ನಲ್ಲಿ ಹಣದ ಹಂಚಿಕೆ ಆಗುತ್ತದೆ.

ಕೇಂದ್ರ ಬಜೆಟ್ 2021- 22 ಹೇಗೆ ರೂಪಿಸಬೇಕು ಎಂದು ತೀರ್ಮಾನ ಕೈಗೊಳ್ಳುವುದಕ್ಕೆ ಹಣಕಾಸು ಸಚಿವಾಲಯ ಮತ್ತು ಇತರ ಇಲಾಖೆಯ ಅಧಿಕಾರಿಗಳಿಗೆ ಈ FAEಯಿಂದ ಸಹಾಯ ಆಗುತ್ತದೆ. ಜಿಡಿಪಿಯ ಎರಡನೇ ಮುಂಗಡ ಅಂದಾಜನ್ನು ಫೆಬ್ರವರಿ 26ನೇ ತಾರೀಕು ಬಿಡುಗಡೆ ಮಾಡಲಾಗುತ್ತದೆ.

2020- 21ರ ಮೊದಲ ಮುಂಗಡ ಅಂದಾಜಿನ ಪ್ರಮುಖಾಂಶಗಳ ವಿವರ ಹೀಗಿವೆ:
* 2019- 20ರಲ್ಲಿ ಜಿಡಿಪಿಯ ಅಂದಾಜು 145.66 ಲಕ್ಷ ಕೋಟಿ ಮಾಡಲಾಗಿತ್ತು. ಆದರೆ ಗುರುವಾರದ ವರದಿ ಪ್ರಕಾರ, ಅದು 134.40 ಲಕ್ಷ ಕೋಟಿ ಆಗಬಹುದು. ರಿಯಲ್ ಜಿಡಿಪಿಯ ಬೆಳವಣಿಗೆ -7.7% ಎನ್ನಲಾಗಿದೆ. 2019- 20ರಲ್ಲಿ ಬೆಳವಣಿಗೆ 4.2% ಆಗುತ್ತದೆ ಎಂದುಕೊಳ್ಳಲಾಗಿತ್ತು. ಮೂಲ ದರಕ್ಕೆ ರಿಯಲ್ ಜಿವಿಎ (ಗ್ರಾಸ್ ವ್ಯಾಲ್ಕೂ ಆಡೆಡ್) ಅಂದಾಜು 2020- 21ಕ್ಕೆ 123.39 ಲಕ್ಷ ಕೋಟಿ ರುಪಾಯಿ ಎನ್ನಲಾಗಿದ್ದು, 2019- 20ರಲ್ಲಿ ಅಂದಾಜು 133.01 ಲಕ್ಷ ಕೋಟಿ ರುಪಾಯಿ ಇದ್ದು, 7.2% ಕುಗ್ಗುವ ಅಂದಾಜಿದೆ.

ಕೇಂದ್ರ ಬಜೆಟ್ 2021- 22 ಫೆಬ್ರವರಿ 1ಕ್ಕೆ ಮಂಡನೆಕೇಂದ್ರ ಬಜೆಟ್ 2021- 22 ಫೆಬ್ರವರಿ 1ಕ್ಕೆ ಮಂಡನೆ

* ಎನ್ ಎಸ್ ಒ ತ್ರೈಮಾಸಿಕ ಅಂದಾಜು ಪ್ರಕಾರ, 2020- 21ರ ಪ್ರಥಮಾರ್ಧದಲ್ಲಿ ಜಿಡಿಪಿ 15.7% ಕುಗ್ಗಿರಬಹುದು. ಇನ್ನು ಏಪ್ರಿಲ್- ಜೂನ್ ಗೆ ಹೋಲಿಸಿದಲ್ಲಿ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ರಿಯಲ್ ಜಿಡಿಪಿ 21% ಬೆಳವಣಿಗೆ ಕಂಡಿದೆ.

2020- 21ನೇ ಸಾಲಿನ ಹಣಕಾಸು ವರ್ಷದ ಮೊದಲ ಜಿಡಿಪಿ ಅಂದಾಜಿನ ಪ್ರಮುಖಾಂಶ

* ಇನ್ನು ಬೇಡಿಕೆ ವಿಚಾರಕ್ಕೆ ಬಂದಲ್ಲಿ 2020-21ಕ್ಕೆ ರಿಯಲ್ ಜಿಡಿಪಿಗೆ ಸರ್ಕಾರದ ಬಳಕೆ ವೆಚ್ಚ 5.8% ಹೆಚ್ಚು ಮಾಡಿರುವುದರ ಬಲ ಸಿಕ್ಕಿದೆ. ಖಾಸಗಿ ಬಳಕೆ, ನಿಶ್ಚಿತ ಹೂಡಿಕೆ, ರಫ್ತು ಮತ್ತು ಆಮದು ಇವೆಲ್ಲವೂ ಕ್ರಮವಾಗಿ 9.5%, 14.5%, 8.3% ಮತ್ತು 20.5% ಇಳಿಕೆ ಕಂಡಿವೆ. ಪೂರೈಕೆ ವಿಚಾರಕ್ಕೆ ಬಂದಲ್ಲಿ ಕೃಷಿಯು ಸಕಾರಾತ್ಮಕ ಬೆಳವಣಿಗೆ 3.4% ದಾಖಲಿಸಿದೆ. 2019- 20 ಅಂದಾಜು 4% ಇತ್ತು. ಉತ್ಪಾದನಾ ವಲಯಗಳ ಪೈಕಿ ವಿದ್ಯುತ್ ವಲಯವು ಸಕಾರಾತ್ಮಕ ಬೆಳವಣಿಗೆ 2.7% ಇದೆ.

* ಈ ಮುಂಗಡ ಅಂದಾಜನ್ನು ಬೆಂಚ್ ಮಾರ್ಕ್ ಇಂಡಿಕೇಟರ್ ಪದ್ಧತಿಯಲ್ಲಿ ಸಂಗ್ರಹ ಮಾಡಲಾಗಿದೆ. ಯಾವ ವಲಯದ ಮಾಹಿತಿಯನ್ನು ಇದಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂಬ ವಿವರ ಇಂತಿದೆ:

-ಹಣಕಾಸು ವರ್ಷದಲ್ಲಿ ಮೊದಲ ಏಳು ತಿಂಗಳ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ)

- ಸೆಪ್ಟೆಂಬರ್ 2020ಕ್ಕೆ ಕೊನೆಯಾದಂತೆ ಲಭ್ಯ ಇರುವ ಲಿಸ್ಟೆಡ್ ಕಂಪೆನಿಗಳ ಆರ್ಥಿಕ ಪ್ರದರ್ಶನ

- ಬೆಳೆ ಉತ್ಪಾದನೆಯ ಮೊದಲ ಮುಂಗಡ ಅಂದಾಜು

- ಕೇಂದ್ರ ಮತ್ತು ರಾಜ್ಯ ಸರ್ಕಾರದ ಲೆಕ್ಕ

- ಠೇವಣಿ ಮತ್ತು ಸಾಲ, ಪ್ರಯಾಣಿಕರು ಮತ್ತು ಸರಕು ಸಾಗಣೆ, ರೈಲ್ವೆ ಆದಾಯ, ವಿಮಾನಯಾನದಿಂದ ಪ್ರಯಾಣಿಕರು ಮತ್ತು ಸರಕು ನಿರ್ವಹಣೆ, ಪ್ರಮುಖ ಸಮುದ್ರ ಬಂದರುಗಳಲ್ಲಿ ಸರಕು ನಿರ್ವಹಣೆ, ವಾಣಿಜ್ಯ ವಾಹನಗಳ ಮಾರಾಟ ಮುಂತಾದವು ಹಣಕಾಸು ವರ್ಷದ ಮೊದಲ ಎಂಟು ತಿಂಗಳ ಮಾಹಿತಿ.

English summary

Government 2020- 21 First GDP Advance Estimates Highlights

Highlights of 2020- 21 first GDP advance estimate released by central government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X