For Quick Alerts
ALLOW NOTIFICATIONS  
For Daily Alerts

ದಾಖಲೆ ಇರದ ಚಿನ್ನಕ್ಕೆ ತೆರಿಗೆ, ಕಪ್ಪುಹಣ ನಿಯಂತ್ರಣಕ್ಕೆ ಮೋದಿ ಸರ್ಕಾರದ ಅಮ್ನೆಸ್ಟಿ ಸ್ಕೀಂ!

ಕೇಂದ್ರ ಸರ್ಕಾರವು ಕಪ್ಪುಹಣ ತಡೆಗಾಗಿ ನೋಟು ರದ್ದತಿ ಮಾಡಿದ ನಂತರ ಇದೀಗ ಚಿನ್ನದ ರೂಪದಲ್ಲಿರುವ ಕಪ್ಪುಹಣವನ್ನು ತಡೆಗಟ್ಟಲು ಹೊಸ ಯೋಜನೆ ಆರಂಭಿಸಿದೆ.

|

ಕೇಂದ್ರ ಸರ್ಕಾರವು ಕಪ್ಪುಹಣ ತಡೆಗಾಗಿ ನೋಟು ರದ್ದತಿ ಮಾಡಿದ ನಂತರ ಇದೀಗ ಚಿನ್ನದ ರೂಪದಲ್ಲಿರುವ ಕಪ್ಪುಹಣವನ್ನು ತಡೆಗಟ್ಟಲು ಹೊಸ ಯೋಜನೆ ಆರಂಭಿಸಿದೆ.
ಆದಾಯ ತೆರಿಗೆ ಇಲಾಖೆಯು ಅಮ್ನೆಸ್ಟಿ ಯೋಜನೆ ಮಾದರಿಯಲ್ಲಿ ಕೇಂದ್ರವು ಅಮ್ನೆಸ್ಟಿ ಸ್ಕೀಂ ಜಾರಿಗೆ ತರಲಿದೆ. ಅಮ್ನೆಸ್ಟಿ ಸ್ಕೀಂ ಪ್ರಕಾರ, ದಾಖಲೆ ಇಲ್ಲದ ಚಿನ್ನ ಅಕ್ರಮವಾಗಿದ್ದು ಇಂತಹ ಚಿನ್ನವನ್ನು ಚಿನ್ನದ ಪ್ರಮಾಣಕ್ಕೆ ಅನುಗುಣವಾಗಿ ಬೆಲೆ ಕಟ್ಟಿ ಸಕ್ರಮ ಮಾಡಿಕೊಳ್ಳುವ ಅವಕಾಶ ಒದಗಿಸಲಾಗುತ್ತದೆ. ನಿಮ್ಮ ಬಳಿ ದಾಖಲೆ ಇರದ ಚಿನ್ನವಿದ್ದರೆ ಸರ್ಕಾರಕ್ಕೆ ತೋರಿಸಿ ಸರ್ಕಾರ ನಿಗದಿಪಡಿಸಿದ ದರವನ್ನು ಭರಿಸಿ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕು.

 

ದಾಖಲೆ ಇರದ ಚಿನ್ನಕ್ಕೆ ತೆರಿಗೆ

ಕಪ್ಪುಹಣ ಬಳಸಿಕೊಂಡು ಚಿನ್ನದಲ್ಲಿ ಹೂಡಿಕೆ ಮಾಡಿರುವವರು ಈ ಯೋಜನೆ ಮೂಲಕ ಸ್ವಯಂ ಆಗಿ ಘೋಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಚಿನ್ನದ ಮೇಲಿನ ತೆರಿಗೆ ತುಉ ಹೆಚ್ಚಾಗಿರಲಿದ್ದು, ಸೂಕ್ತ ತೆರಿಗೆ ಭರಿಸಿ ಅಕ್ರಮ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕು.

ಅಮ್ನೆಸ್ಟಿ ಸ್ಕೀಂ ಅನ್ನು ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜೊತೆಗೂಡಿ ಕಾರ್ಯರೂಪಕ್ಕೆ ತಂದಿದ್ದು, ಸರ್ಕಾರವು ಚಿನ್ನ ಸಂಗ್ರಹಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸುತ್ತದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಚಿನ್ನವನ್ನು ಇದ್ದರೆ ಅದರ ವಿವರ ತೋರಿಸಬೇಕಿಲ್ಲ. ನಿಗದಿತ ಮಿತಿ ಮೀರಿದ ಚಿನ್ನ ಸಂಗ್ರಹ ಇದ್ದರೆ ಮೂಲ ವಿವರ ಒದಗಿಸಬೇಕಾಗುತ್ತದೆ. ಆಭರಣ ಖರೀದಿಸಿದ ರಸೀದಿ ಒದಗಿಸಬೇಕು. ಇಲ್ಲವೇ ಸರ್ಕಾರ ನಿಗದಿಪಡಿಸಿದ ಶುಲ್ಕ ಭರಿಸಿ ಚಿನ್ನ ಸಕ್ರಮ ಮಾಡಬೇಕಾಗುತ್ತದೆ.

 

ಅಮ್ನೆಸ್ಟಿ ಸ್ಕೀಂ ಯಾಕೆ?
ಕಪ್ಪುಹಣ ತಡೆಗಾಗಿ ನೋಟು ರದ್ದತಿ ಮಾಡಿದ ನಂತರ ಕಾಳಧನಿಕರು ಅಕ್ರಮವಾಗಿ ಹಣವನ್ನು ಚಿನ್ನದಲ್ಲಿ ಹೂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡಿದ ಹಣ ಅಮ್ನೆಸ್ಟಿ ಸ್ಕೀಂ ಮೂಲಕ ಸರ್ಕಾರದ ಲೆಕ್ಕಕ್ಕೆ ಸಿಗುತ್ತದೆ. ತೆರಿಗೆ ಆದಾಯ ಕೂಡ ಲಭಿಸುತ್ತದೆ. ಈ ನಿಟ್ಟಿನ ಪ್ರಯತ್ನಕ್ಕಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಆರಂಭಿಸಲಾಗಿತ್ತು. ಆದರೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೇ ಮಾದರಿಯಲ್ಲಿ ಚಿನ್ನ ಅಕ್ರಮ ಸಕ್ರಮ ಯೋಜನೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

Read more about: gold money finance news
English summary

Govt To Announce Amnesty Scheme For Unaccounted Gold

After demonetization that resulted in the scrapping of high-value notes of Rs. 500 and Rs. 1000.
Story first published: Thursday, October 31, 2019, 10:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X