For Quick Alerts
ALLOW NOTIFICATIONS  
For Daily Alerts

ಗುತ್ತಿಗೆ ನೌಕರರಿಗೂ ಗ್ರಾಚುಟಿ; ಸರ್ಕಾರದ ಮುಂದಿದೆ ಪ್ರಸ್ತಾವ

|

ನವದೆಹಲಿ, ಅ 18: ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಹೊಸ ಕಾರ್ಮಿಕ ಕಾನೂನುಗಳನ್ನು ರೂಪಿಸಿದೆ. ಪಿಎಫ್, ಕೆಲಸದ ಅವಧಿ ಸೇರಿ ಅನೇಕ ಗಮನಾರ್ಹ ಬದಲಾವಣೆಗಳನ್ನು ತರಲಾಗುತ್ತಿದೆ. ಇದೀಗ ಕೇಂದ್ರ ಸರಕಾರ ಗ್ರಾಚುಟಿ ಸೌಲಭ್ಯದಲ್ಲೂ ಬದಲಾವಣೆ ಮಾಡುವ ಪ್ರಸ್ತಾಪ ಹೊಂದಿದೆ.

 

ಕಾಂಟ್ರಾಕ್ಟ್ ವರ್ಕರ್‌ಗಳಿಗೂ ಗ್ರಾಚುಟಿ ಸೌಲಭ್ಯ ಒದಗಿಸುವ ಕಾನೂನನ್ನು ಸರಕಾರ ತರಬೇಕೆಂದಿದೆ. ಸದ್ಯ ಇರುವ ನಿಯಮದ ಪ್ರಕಾರ, ರೆಗ್ಯುಲರ್ ನೇಮಕಾತಿಯ ಉದ್ಯೋಗಿಗಳಿಗೆ ಗ್ರಾಚುಟಿ ನೀಡಬೇಕು. ಅಂದರೆ ಖಾಯಂ ಉದ್ಯೋಗಿಗಳಿಗೆ ಈ ಸೌಲಭ್ಯ ಇದೆ. ಅದೂ ಐದು ವರ್ಷ ನಿರಂತರವಾಗಿ ಸೇವೆಯಲ್ಲಿ ಮುಂದುವರಿದರೆ ಮಾತ್ರ ಗ್ರಾಚುಟಿ ಸಿಗುತ್ತದೆ. ಗುತ್ತಿಗೆ ಆಧಾರದಲ್ಲಿ ನೇಮಕವಾದವರಿಗೆ ಇದೂ ಇಲ್ಲ.

 

ಹಣದುಬ್ಬರ ಮಿತಿ ಗುರಿ ಶೇ. 2-4: ಆರ್‌ಬಿಐ ನಿರ್ಧಾರ ಸಾಧ್ಯತೆಹಣದುಬ್ಬರ ಮಿತಿ ಗುರಿ ಶೇ. 2-4: ಆರ್‌ಬಿಐ ನಿರ್ಧಾರ ಸಾಧ್ಯತೆ

ಕೇಂದ್ರ ಸರಕಾರ ಈ ವಿಚಾರದಲ್ಲಿ ಸುಧಾರಣೆ ತರಲು ಹೊರಟಿದೆ. ಗುತ್ತಿಗೆ ಆಧಾರದಲ್ಲಿ ನೇಮಕವಾದ ಉದ್ಯೋಗಿಗಳು ಒಂದು ವರ್ಷ ಸೇವೆ ನಡೆಸಿದರೂ ಸಾಕು ಗ್ರಾಚುಟಿ ನೀಡಬೇಕಾಗುತ್ತದೆ. ಇದೇನಾದರೂ ಅನುಷ್ಠಾನಕ್ಕೆ ಬಂದರೆ ಕೋಟ್ಯಂತರ ಉದ್ಯೋಗಿಗಳು, ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಹಲವಾರು ಕಂಪನಿಗಳಲ್ಲಿ ಖಾಯಂ ಉದ್ಯೋಗಿಗಳಿಗಿಂತ ಕಾಂಟ್ರಾಕ್ಟ್ ಆಧಾರಿತ ನೇಮಕಾತಿಯೇ ಹೆಚ್ಚು. ಅದರಲ್ಲೂ ಕಾರ್ಮಿಕರು ಮತ್ತು ಕೆಳಸ್ತರದ ಉದ್ಯೋಗಿಗಳು ಹೆಚ್ಚಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದವರೆ.

ಗುತ್ತಿಗೆ ನೌಕರರಿಗೂ ಗ್ರಾಚುಟಿ; ಸರ್ಕಾರದ ಮುಂದಿದೆ ಪ್ರಸ್ತಾವ

ಗ್ರಾಚುಟಿ ಎಂದರೇನು?

ಗ್ರಾಚುಟಿ ಎಂಬುದು ಇಂಗ್ಲೀಷ್‌ನ ಗ್ರ್ಯಾಟಿಟ್ಯೂಟ್ ಪದದಿಂದ ಬಂದದ್ದು. ಕೃತಜ್ಞತಾಪೂರ್ವಕವಾಗಿ ನೀಡಲಾಗುವ ಹಣ ಇದು. ಕಂಪನಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನೌಕರರಿಗೆ ಸಂಸ್ಥೆಯಿಂದ ನೀಡುವ ವಿಶೇಷ ಹಣ ಇದು. ಇದೊಂದು ರೀತಿಯಲ್ಲಿ ಹೋಟೆಲ್‌ನಲ್ಲಿ ಸೇವೆ ನೀಡಿದ ಸಪ್ಲಯರ್‌ಗೆ ನಾವು ಕೊಡುವ ಟಿಪ್ಸ್ ರೀತಿಯದ್ದು ಎಂದೂ ಅನ್ನಬಹುದು.

1972ರ ಪೇಮೆಂಟ್ ಆಫ್ ಗ್ರಾಚುಟಿ ಕಾಯ್ದೆಯ ಪ್ರಕಾರ 10ಕ್ಕೂ ಹೆಚ್ಚು ನೌಕರರು ಇರುವ ಕಂಪನಿಯಲ್ಲಿ ಕನಿಷ್ಠ ಐದು ವರ್ಷ ನಿರಂತರ ಸೇವೆ ಸಲ್ಲಿಸಿದವರಿಗೆ ಗ್ರಾಚುಟಿ ಕೊಡಲಾಗುತ್ತದೆ. ಸಂಬಳದ ಮೂಲ ವೇತನ, ತುಟ್ಟಿಭತ್ಯೆಯ ಆಧಾರದ ಮೇಲೆ ಗ್ರಾಚುಟಿ ಎಷ್ಟೆಂಬುದು ನಿಗದಿಯಾಗುತ್ತದೆ. ಸೇವಾವಧಿಯ ಕೊನೆಯಲ್ಲಿ ಉದ್ಯೋಗಿ ತಾನು ಪಡೆಯುವ ಸಂಬಳದ ಬೇಸಿಕ್ ಸ್ಯಾಲರಿ ಮತ್ತು ಡಿಎ ಅನ್ನು ಪರಿಗಣಿಸಲಾಗುತ್ತದೆ. 15 ದಿನಗಳ ಬೇಸಿಕ್ ಪೇ ಮತ್ತು ಡಿಎ ಅನ್ನು ಒಂದು ವರ್ಷದ ಗ್ರಾಚುಟಿಯಾಗಿ ಸೇರಿಸಲಾಗುತ್ತದೆ. ಒಬ್ಬ ಉದ್ಯೋಗಿಗೆ ಗರಿಷ್ಠ 20 ಲಕ್ಷ ರೂವರೆಗೂ ಗ್ರಾಚುಟಿ ನೀಡಲು ಸಾಧ್ಯವಿದೆ.

LIC Dhan Varsha Plan; ಹೊಸ ಎಲ್‌ಐಸಿ ಪಾಲಿಸಿಯಿಂದ ಎರಡು ಪಟ್ಟಿಗಿಂತ ಹೆಚ್ಚು ಹಣದ ಲಾಭLIC Dhan Varsha Plan; ಹೊಸ ಎಲ್‌ಐಸಿ ಪಾಲಿಸಿಯಿಂದ ಎರಡು ಪಟ್ಟಿಗಿಂತ ಹೆಚ್ಚು ಹಣದ ಲಾಭ

ಈಗ ನಿಶ್ಚಿತ ಅವಧಿಯ ಉದ್ಯೋಗಿಗಳಿಗೂ ಈ ಸೌಲಭ್ಯ ಸಿಗುವ ರೀತಿಯಲ್ಲಿ ಕಾಯ್ದೆಗೆ ಸರಕಾರ ತಿದ್ದುಪಡಿ ಮಾಡಿದೆ. ನಿಶ್ಚಿತ ಅವಧಿಯ ಉದ್ಯೋಗಿ ಎಂದರೆ ಕಾಂಟ್ರಾಕ್ಟ್ ಅವಧಿಯವರೆಗೆ ಮಾತ್ರ ಕೆಲಸ ಹೊಂದಿರುವ ಉದ್ಯೋಗಿಗಳು. ಇಂಥ ಅಸಂಖ್ಯಾತ ಜನರು ದೇಶದೆಲ್ಲೆಡೆ ಇದ್ದಾರೆ. ಇವರಿಗೆಲ್ಲರಿಗೂ ಸಂಬಳ ಬಿಟ್ಟರೆ ಬೇರಾವ ಉಳಿತಾಯ ಸವಲತ್ತೂ ಇರುವುದಿಲ್ಲ.

ಗುತ್ತಿಗೆ ನೌಕರರಿಗೂ ಗ್ರಾಚುಟಿ; ಸರ್ಕಾರದ ಮುಂದಿದೆ ಪ್ರಸ್ತಾವ

ಶೇ. 50ರಷ್ಟು ಬೇಸಿಕ್ ಪೇ

ನೌಕರರಿಗೆ ಗ್ರಾಚುಟಿ ಮೊತ್ತ ಹೆಚ್ಚಾಗುವ ರೀತಿಯಲ್ಲಿ ಸರ್ಕಾರ ಕೆಲ ನಿಯಮಗಳನ್ನು ಬದಲಿಸಿದೆ. ಉದ್ಯೋಗಿಗಳಿಗೆ ನೀಡಲಾಗುವ ಒಟ್ಟಾರೆ ಸಂಬಳದಲ್ಲಿ ಶೇ. 50ರಷ್ಟು ಭಾಗವನ್ನು ಮೂಲ ವೇತನವಾಗಿ ನೀಡಬೇಕೆಂದು ಕಡ್ಡಾಯಪಡಿಸಿದೆ. ಇದರಿಂದ ಉದ್ಯೋಗಿಯ ಪಿಎಫ್, ಗ್ರಾಚುಟಿ ಇವೆಲ್ಲವೂ ಹೆಚ್ಚಾಗುತ್ತದೆ.

ಈಗ ಬಹುತೇಕ ಕಂಪನಿಗಳಲ್ಲಿ ಬೇಸಿಕ್ ಪೇ ಬಹಳ ಕಡಿಮೆ ಇರುತ್ತದೆ. ಬೇರೆ ರೀತಿಯ ಅಲೋಯನ್ಸ್‌ಗಳನ್ನು ಸೇರಿಸಿ ಸಂಬಳ ಫಿಕ್ಸ್ ಮಾಡಲಾಗುತ್ತದೆ. ಹೀಗಾಗಿ ಪಿಎಫ್, ಗ್ರಾಚುಟಿ ಇತ್ಯಾದಿ ಎಲ್ಲವೂ ಕಡಿಮೆಯೇ ಇರುತ್ತದೆ.

ಪ್ರಾವಿಡೆಂಟ್ ಫಂಡ್, ಗ್ರಾಚುಟಿ ಇತ್ಯಾದಿಗಳು ಒಬ್ಬ ಉದ್ಯೋಗಿಯ ಹಣಕಾಸು ಭದ್ರತೆಗೆ ಇರುವ ಉಳಿತಾಯ ಯೋಜನೆಗಳಾಗಿವೆ. ಉದ್ಯೋಗಿ ನಿವೃತ್ತರಾದ ಬಳಿಕ ಅವರಿಗೆ ಭದ್ರತೆಯಾಗಿರಲಿ ಎಂಬ ಉದ್ದೇಶದಿಂದ ಇವುಗಳ ಅಳವಡಿಕೆಯನ್ನು ಸರಕಾರ ಕಡ್ಡಾಯ ಮಾಡಿದೆ. ಆದರೆ, ಇತ್ತೀಚಿನ ಕೆಲ ದಶಕಗಳಿಂದ ಅನೇಕ ಖಾಸಗಿ ಕಂಪನಿಗಳು ಕಾಂಟ್ರಾಕ್ಟ್ ಆಧಾರಿತವಾಗಿ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳುವುದು ಹೆಚ್ಚಾಗಿದೆ. ಸರಕಾರ ಕೂಡ ಕಾಂಟ್ರಾಕ್ಟ್ ಉದ್ಯೋಗಿಗಳನ್ನು ಅನೇಕ ಕೆಲಸಗಳಿಗೆ ನಿಯೋಜಿಸಿದೆ.

English summary

Gratuity For Contract Workers After 1 Year of Service, Know More Details

Central government is about bring new changes in labour codes, that include extending gratuity to contracted workers serving minimum 1 year. So far regular employees is getting this facility.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X