For Quick Alerts
ALLOW NOTIFICATIONS  
For Daily Alerts

ಫೆಬ್ರವರಿಯ ನಂತರ ಅಕ್ಟೋಬರ್ ನಲ್ಲಿ 1 ಲಕ್ಷ ಕೋಟಿ ದಾಟಿದ ಜಿಎಸ್ ಟಿ ಸಂಗ್ರಹ

|

2020ರ ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 1,05,155 ಕೋಟಿ ರುಪಾಯಿ ಆಗಿದೆ. ಅದರಲ್ಲಿ CGST 19,193 ಕೋಟಿಯಾದರೆ, SGST 25,411 ಕೋಟಿ ಮತ್ತು IGST 52,540 ಕೋಟಿ (ಆಮದು ಹಾಗೂ ರಫ್ತಿನ ಮೇಲೆ 23,375 ಕೋಟಿ ರುಪಾಯಿ ಸಂಗ್ರಹ ಒಳಗೊಂಡಿದೆ) ಹಾಗೂ ಸೆಸ್ 8011 ಕೋಟಿ (ಸರಕು ಆಮದಿನ ಮೇಲೆ 932 ಕೋಟಿ ಒಳಗೊಂಡಿದೆ).

 

ಒಟ್ಟಾರೆ GST- 3B ರಿಟರ್ನ್ಸ್ ಅಕ್ಟೋಬರ್ 31, 2020ರ ತನಕ ಆಗಿರುವುದು 80 ಲಕ್ಷ. ಸರ್ಕಾರದಿಂದ CGST ಎಂದು 25091 ಕೋಟಿ ತೀರುವಳಿ ಮಾಡಲಾಗಿದೆ. ಹಾಗೂ SGST ಮೊತ್ತ ಎಂದು IGSTಯಿಂದ 19427 ಕೋಟಿ ಸಾಮಾನ್ಯ ತೀರುವಳಿ ಆಗಿದೆ. ಅಕ್ಟೋಬರ್ 2020ರಲ್ಲಿ ಎಲ್ಲ ತೀರುವಳಿಯ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಂಗ್ರಹ ಮಾಡಿರುವುದು 44285 ಕೋಟಿ ರು. CGST ಹಾಗೂ 44839 ಕೋಟಿ ರುಪಾಯಿ SGST.

 

3ನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 48ರಷ್ಟು ಕುಸಿತ3ನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 48ರಷ್ಟು ಕುಸಿತ

ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾದ ಆದಾಯಕ್ಕಿಂತ ಈ ಬಾರಿಯ ಅಕ್ಟೋಬರ್ ನಲ್ಲಿ 10% ಹೆಚ್ಚು ಬಂದಿದೆ. ಈ ತಿಂಗಳಲ್ಲಿ ಆಮದು ಮೂಲಕ ಬಂದ ಆದಾಯ 9% ಹೆಚ್ಚಿದೆ ಮತ್ತು ದೇಶೀಯ ವ್ಯವಹಾರದಲ್ಲಿ (ಆಮದು ಸೇವೆಯನ್ನೂ ಒಳಗೊಂಡಂತೆ) ಕಳೆದ ವರ್ಷಕ್ಕಿಂತ ಈ ಬಾರಿ 11% ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ ನಂತರ ಅಕ್ಟೋಬರ್ ನಲ್ಲಿ 1 ಲಕ್ಷ ಕೋಟಿ ದಾಟಿದ GST ಸಂಗ್ರಹ

2020ರ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಬೆಳವಣಿಗೆಯು ಕ್ರಮವಾಗಿ -14%, -8% ಹಾಗೂ 5% ಇತ್ತು. ಆದ್ದರಿಂದ ಆರ್ಥಿಕತೆಯಲ್ಲಿ ಸ್ಪಷ್ಟ ಚೇತರಿಕೆ ಕಾಣಿಸುತ್ತಿದೆ.

English summary

GST Collection For October Crossed 1 Lakh Crore After February

GST collection for October month 2020 crossed 1 lakh crore, after February. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X