For Quick Alerts
ALLOW NOTIFICATIONS  
For Daily Alerts

ಗಮನಿಸಿ: ಸದ್ಯಕ್ಕಿಲ್ಲ ಆನ್‌ಲೈನ್ ಗೇಮಿಂಗ್ ಜಿಎಸ್‌ಟಿ ಏರಿಕೆ

|

ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಆನ್‌ಲೈನ್ ಗೇಮಿಂಗ್ ಜಿಎಸ್‌ಟಿ ಏರಿಕೆಯ ಬಗ್ಗೆ ಘೋಷಣೆ ಮಾಡುವ ಬಗ್ಗೆ ಸುದ್ದಿಗಳು ಆಗಿದ್ದವು. ಆದರೆ ಆನ್‌ಲೈನ್ ಗೇಮಿಂಗ್ ಮೇಲಿನ ಜಿಎಸ್‌ಟಿಯನ್ನು ಸದ್ಯಕ್ಕೆ ಶೇಕಡ 18ರಿಂದ ಶೇಕಡ 28ಕ್ಕೆ ಏರಿಕೆ ಮಾಡಲಾಗುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

"ಆನ್‌ಲೈನ್ ಗೇಮಿಂಗ್ ಮೇಲಿನ ಜಿಎಸ್‌ಟಿ ಹೆಚ್ಚಳ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗಿದೆ. ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಈ ಬಗ್ಗೆ ಸರಿಯಾದ ನಿರ್ಧಾರಕ್ಕೆ ಬರಲು ಇನ್ನೂ ಕೂಡಾ ಹದಿನೈದು ದಿನಗಳು ಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.

ಜಿಎಸ್‌ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿಜಿಎಸ್‌ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ

ಪ್ರಸ್ತುತ ದೇಶದಲ್ಲಿ ಆನ್‌ಲೈನ್‌ ಗೇಮಿಂಗ್ ಶೀಘ್ರವಾಗಿ ಬೆಳೆಯುತ್ತಿದೆ. ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಆನ್‌ಲೈನ್ ಗೇಮಿಂಗ್ ಹೊಂದಿದೆ. ಈ ನಡುವೆ ಹಲವಾರು ರಾಜ್ಯಗಳು ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸ್ ಮೇಲಿನ ಜಿಎಸ್‌ಟಿಯನ್ನು ಹೆಚ್ಚಳ ಮಾಡಬೇಕು ಎಂದು ಹಲವಾರು ರಾಜ್ಯಗಳು ಸಲಹೆ ನೀಡಿದ್ದವು.

 ಗಮನಿಸಿ: ಸದ್ಯಕ್ಕಿಲ್ಲ ಆನ್‌ಲೈನ್ ಗೇಮಿಂಗ್ ಜಿಎಸ್‌ಟಿ ಏರಿಕೆ

ಆನ್‌ಲೈನ್ ಗೇಮಿಂಗ್ ಮೇಲಿನ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 28ಕ್ಕೆ ಏರಿಕೆ ಮಾಡಬೇಕು ಎಂದು ಹಲವಾರು ಸಚಿವರುಗಳು ಆಗ್ರಹ ಮಾಡಿದ್ದರು. ಹಾಗೆಯೇ ಆನ್‌ಲೈನ್ ಗೇಮಿಂಗ್ ಜೊತೆಗೆ ಕ್ಯಾಸಿನೋ, ಕುದುರೆ ರೇಸ್ ಮೇಲಿನ ಜಿಎಸ್‌ಟಿ ಹೇರಿಕೆಯ ಆಗ್ರಹವೂ ಕೇಳಿ ಬಂದಿತ್ತು.

ಜಿಎಸ್‌ಟಿ ಹೆಚ್ಚಳಕ್ಕೆ ವಿರೋಧ

ಕ್ಯಾಸಿನೋದಲ್ಲಿ ಆಟಗಾರರು ಖರೀದಿ ಮಾಡುವ ಕಾಯಿನ್ ಅಥವಾ ಚಿಪ್ಸ್‌ಗಳ ಮೇಲೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಇ ಗೇಮಿಂಗ್ ಫೆಡರೇಶನ್‌ನ ಸಿಇಒ ಸಮೀರ್ ಬರಾಡೆ, "ಈ ರೀತಿ ಜಿಎಸ್‌ಟಿ ಹೆಚ್ಚಳ ಮಾಡುವುದು ಸರಿಯಲ್ಲ. ಆನ್‌ಲೈನ್ ಗೇಮಿಂಗ್ ಮೂಲಕ ಜನರು ಒಂದಾಗುತ್ತಿದ್ದಾರೆ. ಸದ್ಯ ಆನ್‌ಲೈನ್ ಗೇಮಿಂಗ್ ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಹಲವಾರು ಮಂದಿ ಆನ್‌ಲೈನ್ ಗೇಮಿಂಗ್ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

"ಈ ಪ್ಲಾಟ್‌ಫಾರ್ಮ್‌ನಲ್ಲಿ ಆಟಗಾರರಿಂದ ಶುಲ್ಕ ಪಡೆಯಲಾಗುತ್ತದೆ. ಇದರಿಂದ ತೆರಿಗೆ ಕಟ್ಟಲಾಗುತ್ತದೆ. ಈ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಮಾಡುವುದಾದರೆ ಇದು ಬರೀ ತಪ್ಪಾದ ಕ್ರಮವಲ್ಲ, ಬದಲಾಗಿ ಇದು ಬೆಳೆಯುತ್ತಿರುವ ಕ್ಷೇತ್ರಕ್ಕೆ ಅಡ್ಡಗಾಲು ಹಾಕುವುದು," ಎಂದು ತಿಳಿಸಿದ್ದಾರೆ.

English summary

Gst Council Defers Decision to Hike Tax Rate on Online Gaming From 18 % To 28%

GST Council Meet : The Goods and Service Tax (GST) Council deferred a decision on the proposal to raise the GST on online gaming from 18% to 28%. Know more.
Story first published: Wednesday, June 29, 2022, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X