For Quick Alerts
ALLOW NOTIFICATIONS  
For Daily Alerts

ಕೋವಿಡ್‌ ಹೆಚ್ಚಳ: ವೈಬ್ರೆಂಟ್ ಗುಜರಾತ್ ಶೃಂಗಸಭೆ ರದ್ದು

|

ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಭಾರಿ ಏರಿಕೆ ಆಗುತ್ತಿರುವ ಹಿನ್ನೆಲೆಯಿಂದಾಗಿ ಜನವರಿ 10 ರಿಂದ 12 ರವರೆಗೆ ಗುಜರಾತ್‌ನ ಗಾಂಧಿನಗರದಲ್ಲಿ ನಡೆಯಬೇಕಿದ್ದ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ (ವಿಜಿಜಿಎಸ್) ದ್ವೈವಾರ್ಷಿಕ ಹೂಡಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಲು ಗುಜರಾತ್ ಸರ್ಕಾರ ಗುರುವಾರ ನಿರ್ಧರಿಸಿದೆ.

ಜನವರಿ 10 ರಿಂದ ಗಾಂಧಿನಗರದಲ್ಲಿ ನಡೆಯಲಿರುವ ವಿಜಿಜಿಎಸ್ ದ್ವೈವಾರ್ಷಿಕ ಕಾರ್ಯಕ್ರಮದ 10 ನೇ ಆವೃತ್ತಿಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗುರುವಾರ ಘೋಷಣೆ ಮಾಡಿದ್ದಾರೆ. ಈ ಶೃಂಗಸಭೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದರು.

ಚಿನ್ನದ ಬೆಲೆ ಇಳಿಕೆ: ಜನವರಿ 06ರ ದರ ತಿಳಿದುಕೊಳ್ಳಿಚಿನ್ನದ ಬೆಲೆ ಇಳಿಕೆ: ಜನವರಿ 06ರ ದರ ತಿಳಿದುಕೊಳ್ಳಿ

ಗುಜರಾತ್ ಸಿಎಂ ಬುಧವಾರ ಉನ್ನತ ಅಧಿಕಾರಿಗಳೊಂದಿಗೆ ಕೋವಿಡ್ -19 ರ ಪ್ರಸ್ತುತ ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆ ನಡೆಸಿದರು. ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ವಿಜಿಜಿಎಸ್ ಅನ್ನು ಸದ್ಯಕ್ಕೆ ರದ್ದುಪಡಿಸಲು ಸಭೆ ನಿರ್ಧಾರ ಮಾಡಿದೆ.

ಕೋವಿಡ್‌ ಹೆಚ್ಚಳ: ವೈಬ್ರೆಂಟ್ ಗುಜರಾತ್ ಶೃಂಗಸಭೆ ರದ್ದು

ಪಟೇಲ್ ಅವರು 2003 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭಿಸಿದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಮಾರ್ಗದರ್ಶಕರಾಗಿದ್ದು, ಈ ಹಿನ್ನೆಲೆಯಿಂದಾಗಿ ಪ್ರಧಾನಿ ಮೋದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಧನ್ಯವಾದ ಅರ್ಪಿಸಿದರು. ಹಾಗೆಯೇ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಾ ಬಂದಿರುವ ಎಲ್ಲರಿಗೂ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಧನ್ಯವಾದ ಹೇಳಿದ್ದಾರೆ. ಇನ್ನು ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಜನವರಿ 2021 ರಲ್ಲಿ ನಿಗದಿಯಾಗಿದ್ದ ಈ ಹಿಂದಿನ ಶೃಂಗಸಭೆಯನ್ನು ಕೂಡಾ ರದ್ದು ಮಾಡಲಾಗಿತ್ತು.

ಕೇವಲ ಹತ್ತು ದಿನಗಳ ಅವಧಿಯಲ್ಲಿ, ಗುಜರಾತ್‌ನಲ್ಲಿ ಕೋವಿಡ್‌ ಪ್ರಕರಣಗಳು ನಿರಂತರವಾಗಿ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ ಈ ಹಿಂದೆ ನೂರು ಕೋವಿಡ್‌ ಪ್ರಕರಣಗಳು ದಾಖಲು ಆಗುತ್ತಿದ್ದವು, ಆದರೆ ಈಗ ಮೂರು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲು ಆಗುತ್ತಿದೆ. ಬುಧವಾರ, ಗುಜರಾತ್‌ನಲ್ಲಿ ಕೊರೊನಾ ಸೋಂಕಿನ 3,350 ಪ್ರಕರಣಗಳು ದಾಖಲು ಆಗಿದ್ದು, ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆಯು 8,40,643 ಕ್ಕೆ ತಲುಪಿದೆ. ರಾಜ್ಯದ ಆರ್ಥಿಕ ರಾಜಧಾನಿ ಅಹಮದಾಬಾದ್‌ನಲ್ಲಿ ಸುಮಾರು ಅರ್ಧದಷ್ಟು ಕೋವಿಡ್‌ ಪಾಸಿಟಿವ್‌ 1,660 ವರದಿ ಆಗಿದೆ. ಇನ್ನು ಗುಜರಾತ್‌ನಲ್ಲಿ ಓಮಿಕ್ರಾನ್‌ ಪ್ರಕರಣಗಳು ಕೂಡಾ ಏರಿಕೆ ಕಾಣುತ್ತಿದೆ. ಬುಧವಾರ 50 ಓಮಿಕ್ರಾನ್‌ ಪ್ರಕರಣಗಳು ದೇಶದಲ್ಲಿ ಕಾಣಿಸಿಕೊಂಡಿದೆ.

English summary

Gujarat govt postpones Vibrant Gujarat summit Due To rising Covid cases

Gujarat govt postpones Vibrant Gujarat summit Due To rising Covid cases.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X