For Quick Alerts
ALLOW NOTIFICATIONS  
For Daily Alerts

ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಭಾರತೀಯ ವಲಸಿಗರು

|

ವಿಶ್ವದೆಲ್ಲೆಡೆ ಕೊರೊನಾವೈರಸ್ ಹರಡುವಿಕೆಯಿಂದ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಇದರಿಂದ ಕೊಲ್ಲಿ ರಾಷ್ಟ್ರಗಳು ಸಹ ಹೊರತಾಗಿಲ್ಲ. ಈಗಾಗಲೇ ಅನೇಕ ಕಂಪನಿಗಳು ವೇತನವನ್ನು ತಡೆಹಿಡಿದಿವೆ. ಹೀಗಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸದ ಅನಿಶ್ಚಿತತೆಯನ್ನು ಎದುರಿಸುತ್ತಾರೆ.

ಕೊರೊನಾವೈರಸ್‌ ವಿರುದ್ಧ ಗಲ್ಫ್‌ ರಾಷ್ಟ್ರಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಗೃಹಬಂಧನ ಕೂಡ ಇರಿಸಲಾಗಿದೆ. ಇದರ ಜೊತೆಗೆ ಗಡಿಪಾರು ಮತ್ತು ಬಂಧನಕ್ಕೂ ಕಾರಣವಾಗಬಹುದೆಂಬ ಭಯ ಎದುರಿಸುತ್ತಿದ್ದಾರೆ.

ಕಳೆದ 8-10 ದಿನಗಳಿಂದ ಗೃಹ ಬಂಧನದಲ್ಲಿರುವ ಕಾರ್ಮಿಕರು

ಕಳೆದ 8-10 ದಿನಗಳಿಂದ ಗೃಹ ಬಂಧನದಲ್ಲಿರುವ ಕಾರ್ಮಿಕರು

ಕೊರೊನಾವೈರಸ್ ಸೋಂಕಿನ ಸವಾಲನ್ನು ಗಲ್ಫ್ ರಾಷ್ಟ್ರಗಳು ಎದುರಿಸುತ್ತಿವೆ. ಸೌದಿ ಅರೇಬಿಯಾ, ದುಬೈ, ಕತಾರ್‌, ಕುವೈತ್‌ನಲ್ಲಿ ಕೊರೊನಾ ಸೋಂಕು ಕಾಡುತ್ತಿದೆ. ಸೋಂಕಿತರ ಸಂಖ್ಯೆಯು ದಿನೇ ದಿನೇ ಏರತೊಡಗಿದ್ದು, ವೇತನ ಸಿಗುತ್ತಾ, ಇಲ್ಲವೇ ಎಂಬ ಭೀತಿಯು ಕಾರ್ಮಿಕರಿಗಿದೆ.

"ನಾವು ಕಳೆದ ಎಂಟರಿಂದ 10 ದಿನಗಳಿಂದ ಲಾಕ್‌ಡೌನ್‌ನಲ್ಲಿದ್ದೇವೆ, ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ" ಎಂದು ಹೇಳುವ ಕತಾರ್‌ನ 27 ವರ್ಷದ ಪಾಕಿಸ್ತಾನಿ ಎಂಜಿನಿಯರ್ ಕಡ್ಡಾಯ ಕ್ಯಾರೆಂಟೈನ್ ಅಡಿಯಲ್ಲಿ ಎರಡನೇ ವಾರವನ್ನು ಕಳೆಯುತ್ತಿದ್ದಾರೆ.

 

ಎದುರಾಗುತ್ತಿವೆ ದಿನಸಿ, ಆಹಾರ ಸಮಸ್ಯೆ

ಎದುರಾಗುತ್ತಿವೆ ದಿನಸಿ, ಆಹಾರ ಸಮಸ್ಯೆ

ಸದ್ಯ ಲಾಕ್‌ಡೌನ್ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಸದ್ಯಕ್ಕೇನು ಮೂಲ ಅವಶ್ಯಕತೆಗಳಿಗೆ ತೊಂದರೆಯಿಲ್ಲ ಸರ್ಕಾರ ಒದಗಿಸುತ್ತಿದೆ. ಆದರೆ ಇದು ಜಾಸ್ತಿ ದಿನ ಇರದು ಎಂಬ ಅನಿಶ್ಚಿತತೆಯಲ್ಲಿ ಸಹ ಕಾರ್ಮಿಕರು ದಿನ ದೂಡುತ್ತಿದ್ದಾರೆ.

"ನಾವು ಈಗ ಎದುರಿಸುತ್ತಿರುವ ಮೂಲ ಸಮಸ್ಯೆ ದಿನಸಿಗಳು. ಸರ್ಕಾರವು ನಮಗೆ ಆಹಾರವನ್ನು ಒದಗಿಸುತ್ತಿದೆ ಆದರೆ ಕೆಲವು ದಿನಗಳ ಮಟ್ಟಿಗೆ ಮಾತ್ರ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಾತ್ರ." ಎನ್ನುತ್ತಾರೆ ವಲಸೆ ಕಾರ್ಮಿಕರು.

 

ಭಯದಲ್ಲಿ ಬದುಕುತ್ತಿರುವ ದೋಹಾ ಕೈಗಾರಿಕಾ ಪ್ರದೇಶದ ಕಾರ್ಮಿಕರು

ಭಯದಲ್ಲಿ ಬದುಕುತ್ತಿರುವ ದೋಹಾ ಕೈಗಾರಿಕಾ ಪ್ರದೇಶದ ಕಾರ್ಮಿಕರು

ಕತಾರ್‌ನ ದೋಹಾದ ಬ್ಲ್ಯೂ ಕೊಲ್ಲಾರ್ ಜಿಲ್ಲೆಯಲ್ಲಿ ಡಜನ್‌ಗಟ್ಟಲೆ ಕಾರ್ಮಿಕರು ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ದೋಹಾದ ಕೈಗಾರಿಕಾ ಪ್ರದೇಶಕ್ಕೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಗೃಹ ಬಂಧನ ಎದುರಿಸುತ್ತಿದ್ದಾರೆ.

ಗಲ್ಫ್‌ನಾದ್ಯಂತ ವಲಸೆ ಕಾರ್ಮಿಕರಿಗೆ ಕೊರೊನಾ ಅಪಾಯ

ಗಲ್ಫ್‌ನಾದ್ಯಂತ ವಲಸೆ ಕಾರ್ಮಿಕರಿಗೆ ಕೊರೊನಾ ಅಪಾಯ

ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯು) ಮತ್ತು ಅಮ್ನೆಸ್ಟಿ ಸೇರಿದಂತೆ ವಕೀಲ ಗುಂಪುಗಳು ಈಗಾಗಲೇ ಕೊರೊನಾವೈರಸ್‌ನಿಂದಾಗಿ ಆಗುವ ಅಪಾಯಗಳನ್ನು ಮುಂದಿಟ್ಟಿದೆ. ಇಕ್ಕಟ್ಟಾದ ವಸತಿ ಮತ್ತು ಅಸಮರ್ಪಕ ನೈರ್ಮಲ್ಯವು ಗಲ್ಫ್‌ನಾದ್ಯಂತದ ವಲಸೆ ಕಾರ್ಮಿಕರಿಗೆ ಅಪಾಯವನ್ನುಂಟುಮಾಡುತ್ತದೆ. ಇವರು ಸರ್ಕಾರದಿಂದ ಸಿಗುವ ಆರೋಗ್ಯ ಸೇವೆಯ ಪ್ರವೇಶವನ್ನು ಹೊಂದಿಲ್ಲದಿರಬಹುದು ಎಂದಿದೆ.

ವೇತನ/ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು

ವೇತನ/ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು

ಕೊರೊನಾ ಸೋಂಕು ತಗುಲುವ ಭೀತಿ ಎದುರಿಸುತ್ತಿರುವ ಕಾರ್ಮಿಕರು ವೇತನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಲ್ಲದೆ ಗಡಿಪಾರು ಮಾಡುವ ಭಯದಲ್ಲೂ ಇದ್ದಾರೆ. ಇದರ ಜೊತೆಗೆ ಇವರ ಆದಾಯದ ಮೇಲೆ ಅವಲಂಬಿತಗೊಂಡಿರುವ ಮನೆಯಲ್ಲಿ ಕುಟುಂಬಗಳು ಭಾರೀ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.

ವಲಸೆ ಕಾರ್ಮಿಕರು ಈಗಾಗಲೇ ಸೌಲಭ್ಯ ವಂಚಿತರು

ವಲಸೆ ಕಾರ್ಮಿಕರು ಈಗಾಗಲೇ ಸೌಲಭ್ಯ ವಂಚಿತರು

"ಗಲ್ಫ್‌ನಲ್ಲಿರುವ ವಲಸೆ ಕಾರ್ಮಿಕರು ಈಗಾಗಲೇ ಕಾರ್ಮಿಕ ಆಡಳಿತ ವ್ಯವಸ್ಥೆಯಲ್ಲಿ ಅನಾನುಕೂಲರಾಗಿದ್ದಾರೆ. ಇದು ಉದ್ಯೋಗದಾತರಿಗೆ ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ ಮತ್ತು ಅವರ ನಿಂದನೆ ಮತ್ತು ಶೋಷಣೆಗೆ ಚಾಲನೆ ನೀಡುತ್ತದೆ" ಎಂದು ಎಚ್‌ಆರ್‌ಡಬ್ಲ್ಯೂನ ಗಲ್ಪ್ ಸಂಶೋಧಕ ಹಿಬಾ ಜಯಾಡಿನ್ ಎಎಫ್‌ಪಿಗೆ ತಿಳಿಸಿದ್ದಾರೆ.

ವಲಸಿಗರು ಇರುವ ಪ್ರದೇಶದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳನ್ನು ಪರಿಚಯಿಸುವಲ್ಲಿ ಕೊಲ್ಲಿ ರಾಷ್ಟ್ರಗಳು ಅಷ್ಟಾಗಿ ಮುತುವರ್ಜಿ ವಹಿಸದೇ ಇರಬಹುದು. ಒಂದು ವೇಳೆ ನಿಧಾನವಾಗಿ ಕ್ರಮ ಕೈಗೊಂಡಿದ್ದಲ್ಲಿ ಪರಿಸ್ಥಿತಿ ಕೈ ಮೀರಬಹುದು.

 

ಸಾವಿರಾರು ಕಾರ್ಮಿಕರಲ್ಲಿ ಸಾಮಾಜಿಕ ದೂರ ಅಸಾಧ್ಯವಾಗಿದೆ

ಸಾವಿರಾರು ಕಾರ್ಮಿಕರಲ್ಲಿ ಸಾಮಾಜಿಕ ದೂರ ಅಸಾಧ್ಯವಾಗಿದೆ

ಕತಾರ್‌ನಲ್ಲಿ ಈಗಾಗಲೇ 630ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೋಹಾ ಕೈಗಾರಿಕಾ ಪ್ರದೇಶದ ಕಾರ್ಮಿಕರಲ್ಲೂ ಹೆಚ್ಚು ಕಾಣಿಸಿಕೊಂಡಿರುವುದರಿಂದ "ಶಿಬಿರಗಳಲ್ಲಿ ಸಿಕ್ಕಿಬಿದ್ದ" ಕಾರ್ಮಿಕರು ವಿಶೇಷವಾಗಿ ದುರ್ಬಲರಾಗಿದ್ದಾರೆ, ಸಾಮಾಜಿಕ ದೂರವನ್ನು ಅಸಾಧ್ಯವಾಗಿಸುವ ನಿರಂತರ ಪರಿಸ್ಥಿತಿಗಳು ಎದುರಿಸುತ್ತಿದ್ದಾರೆ ಎಂದು ಅಮ್ನೆಸ್ಟಿ ಹೇಳಿದೆ.

ಸೌದಿ ಅರೇಬಿಯಾ, ಕುವೈತ್‌ನಲ್ಲಿ ಅತಿ ಹೆಚ್ಚು ವಲಸಿಗರು

ಸೌದಿ ಅರೇಬಿಯಾ, ಕುವೈತ್‌ನಲ್ಲಿ ಅತಿ ಹೆಚ್ಚು ವಲಸಿಗರು

ಯುಎಇ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಲಸಿಗರು ಇರುವುದು ಸೌದಿ ಅರೇಬಿಯಾದಲ್ಲಿ. ಸೌದಿಯಲ್ಲಿ ಒಟ್ಟಾರೆ 8.7 ಮಿಲಿಯನ್(87 ಲಕ್ಷ) ವಲಸಿಗರಿದ್ದಾರೆ. ನಂತರದ ಸ್ಥಾನದಲ್ಲಿ ಕುವೈತ್ ಇದ್ದು 2.8 ಮಿಲಿಯನ್(28 ಲಕ್ಷ) ವಲಸಿಗರಿದ್ದಾರೆ.

ಕುವೈತ್‌ಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ 90 ಪರ್ಸೆಂಟ್ ಜನರು ವಲಸಿಗರೇ ಇದ್ದು, 2.75 ಮಿಲಿಯನ್‌ (27 ಲಕ್ಷ) ವಲಸಿಗರಿದ್ದಾರೆ.

 

English summary

Gulf's Migrant Workforce Facing Job Uncertainty

Millions of migrant workers across the Gulf face uncertainty as host countries lock down, employers withhold wages or mull redundancies
Story first published: Monday, March 30, 2020, 16:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X