For Quick Alerts
ALLOW NOTIFICATIONS  
For Daily Alerts

HDFC ಬ್ಯಾಂಕ್ ತ್ರೈಮಾಸಿಕ ಲಾಭ ಶೇ. 16.1ರಷ್ಟು ಏರಿಕೆ: 7,730 ಕೋಟಿ ರೂಪಾಯಿ

|

ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ ವರದಿಯನ್ನು ಶನಿವಾರ ಪ್ರಕಟಿಸಿದೆ. ಬ್ಯಾಂಕಿನ ತ್ರೈಮಾಸಿಕ ಲಾಭವು ವರ್ಷದಿಂದ ವರ್ಷಕ್ಕೆ ಶೇ 16.1 ರಷ್ಟು ಹೆಚ್ಚಾಗಿದೆ.

 

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 6,658,60 ಕೋಟಿ ರೂ. ಲಾಭವಾಗಿತ್ತು. ಆದರೆ ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇದು 7,729.60 ಕೋಟಿ ರೂ. ತಲುಪಿದೆ. ಆದಾಗ್ಯೂ, ಬ್ಯಾಂಕಿನ ಲಾಭವು ತಜ್ಞರ ಅಂದಾಜುಗಿಂತ ಕಡಿಮೆಯಾಗಿತ್ತು. ಆರ್ಥಿಕ ತಜ್ಞರ ಅಂದಾಜಿನಂತೆ ಬ್ಯಾಂಕ್ 7900 ಕೋಟಿ ರೂ. ಲಾಭಗಳಿಸಬಹುದು ಎನ್ನಲಾಗಿತ್ತು.

 
HDFC ಬ್ಯಾಂಕ್ ತ್ರೈಮಾಸಿಕ ಲಾಭ ಶೇ. 16.1ರಷ್ಟು ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕಿನ ಬಡ್ಡಿ ಆದಾಯವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. 15,665.7 ಕೋಟಿ ರೂ.ಗಳಿಂದ ಬ್ಯಾಂಕಿನ ಬಡ್ಡಿ ಆದಾಯವು ಶೇಕಡಾ 8.57 ರಷ್ಟು ಏರಿಕೆಯಾಗಿ 17009 ಕೋಟಿ ರೂ. ತಲುಪಿದೆ. ಬ್ಯಾಂಕಿನ ಪ್ರಗತಿಯು ಶೇಕಡಾ 14.4 ರಷ್ಟು ಏರಿಕೆಯಾಗಿದೆ, ಇದರಿಂದಾಗಿ ಅದರ ಬಡ್ಡಿ ಆದಾಯವು ತುಂಬಾ ಹೆಚ್ಚಾಗಿದೆ.

ಕೋವಿಡ್‌ನ ಎರಡನೇ ಅಲೆಯು ತ್ರೈಮಾಸಿಕದ ಮೂರನೇ ಎರಡರಷ್ಟು ವ್ಯಾಪಾರ ಚಟುವಟಿಕೆಯನ್ನು ಅಡ್ಡಿಪಡಿಸಿತು ಮತ್ತು ಸಂಗ್ರಹಣೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಬ್ಯಾಂಕ್ ಹೇಳಿದೆ.

ಒಟ್ಟು ನಿಷ್ಕ್ರಿಯ ಆಸ್ತಿ (ಎನ್‌ಪಿಎ) ಮಾರ್ಚ್ ತ್ರೈಮಾಸಿಕದಲ್ಲಿ ಶೇ 1.32 ಕ್ಕೆ ಹೋಲಿಸಿದರೆ, ಶೇ. 1.47 ರಷ್ಟಿದೆ ಮತ್ತು ವರ್ಷದ ಹಿಂದಿನ ತ್ರೈಮಾಸಿಕದಲ್ಲಿ ಶೇ 1.36 ರಷ್ಟಿದೆ.

English summary

HDFC Bank Q1 Report: Profit Up 16.1 Percent To Rs 7730 Crore

HDFC Bank on Saturday reported a 16.1 per cent year-on-year rise in standalone net profit at Rs 7,729.60 crore compared with Rs 6,658,60 crore in the same quarter last year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X