For Quick Alerts
ALLOW NOTIFICATIONS  
For Daily Alerts

HDFC Bank Q1 results: ನಿವ್ವಳ ಲಾಭ ಶೇ.19 ಏರಿಕೆ

|

ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡ 19ರಷ್ಟು ಅಧಿಕ ನಿವ್ವಳ ಲಾಭವನ್ನು ಕಂಡಿರುವುದಾಗಿ ಶನಿವಾರ ಪ್ರಕಟಿಸಿದೆ. 2,984.1 ಕೋಟಿ ರೂಪಾಯಿ ತೆರಿಗೆಯನ್ನು ಒದಗಿಸಿದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ತ್ರೈಮಾಸಿಕದ ನಿವ್ವಳ ಲಾಭವು 9,196 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

 

ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂದಿನ ವರ್ಷದ ಅವಧಿಯಲ್ಲಿ 7,729.64 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯ (ಎನ್‌ಐಐ) ಶೇಕಡ 14.5ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 17,009.0 ಕೋಟಿ ರೂಪಾಯಿ ನಿವ್ವಳ ಬಡ್ಡಿ ಆದಾಯವಿದ್ದರೆ, ಈ ವರ್ಷದಲ್ಲಿ 19,481.4 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಒಟ್ಟಾರೆಯಾಗಿ ಶೇಕಡ 22.5ರಷ್ಟು ಬೆಳವಣಿಗೆ ಹೊಂದಿದೆ. ಶೇಕಡ 19.2ರಷ್ಟು ಠೇವಣಿಗಳು ಅಧಿಕವಾಗಿದೆ. ಶೇಕಡ 20.3ರಷ್ಟು ಬ್ಯಾಲೆನ್ಸ್ ಶೀಟ್ ಬೆಳವಣಿಗೆಯಾಗಿದೆ. ಖಾಸಗಿ ಬ್ಯಾಂಕ್‌ನ ನಿವ್ವಳ ಆದಾಯವು (ವ್ಯಾಪಾರ ಮತ್ತು ಮಾರುಕಟ್ಟೆಯಿಂದ ಮಾರುಕಟ್ಟೆಯ ನಷ್ಟವನ್ನು ಹೊರತುಪಡಿಸಿ) ಜೂನ್ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಶೇಕಡ 19.8ರಷ್ಟು ಏರಿಕೆಯಾಗಿದೆ.

HDFC Bank Q1 results: ನಿವ್ವಳ ಲಾಭ ಶೇ.19 ಏರಿಕೆ

ಒಟ್ಟು ನಿವ್ವಳ ಆದಾಯಗಳು ಅಂದರೆ ನಿವ್ವಳ ಬಡ್ಡಿ ಆದಾಯ ಮತ್ತು ಇತರ ಆದಾಯ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,869.6 ಕೋಟಿ ರೂಪಾಯಿ ಆಗಿದೆ. ಕೋರ್ ನೆಟ್ ಇಂಟ್ರೆಸ್ಟ್ ಮಾರ್ಜಿನ್ ಶೇಕಡ 4.0ರಷ್ಟಿದ್ದರೆ, ಬಡ್ಡಿ ಗಳಿಸುವ ಆಸ್ತಿಗಳ ಆಧಾರದ ಮೇಲೆ ಶೇಕಡ 4.2ರಷ್ಟು ಕೋರ್ ನೆಟ್ ಇಂಟ್ರೆಸ್ಟ್ ಮಾರ್ಜಿನ್ ಇದೆ.

ಈ ವರ್ಷದ ಜೂನ್ 30ರಲ್ಲಿ ಎನ್‌ಪಿಎ ಶೇಕಡ 1.28ರಷ್ಟಿತ್ತು. ಕಳೆದ ವರ್ಷ ಜೂನ್ 30ಕ್ಕೆ ಶೇಕಡ 1.47ರಷ್ಟಿತ್ತು. ಪ್ರೀ-ಪ್ರೊವಿಷನ್ ಆಪರೇಟಿಂಗ್ ಪ್ರಾಫಿಟ್ (ಪಿಪಿಒಪಿ) ರೂಪಾಯಿ 15,367.8 ಕೋಟಿ ಇದೆ. ಕಳೆದ ವರ್ಷ ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕಿಂತ ಶೇಕಡ 14.7ರಷ್ಟು ಬೆಳವಣಿಗೆ ಕಂಡಿದೆ.

ದೇಶೀಯ ಬ್ರೋಕರೇಜ್‌ಗಳಾದ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಮತ್ತು ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್ ತೆರಿಗೆ ನಂತರದ ಲಾಭ ಶೇಕಡ 20ರಷ್ಟು ಏರಿಕೆಯಾಗಿ 9,280 ಕೋಟಿ ರೂಪಾಯಿಗೆ ತಲುಪಬಹುದು ಎಂದು ನಿರೀಕ್ಷೆ ಹೊಂದಿದ್ದವು. ಈ ನಡುವೆ ಶುಕ್ರವಾರದ ವಹಿವಾಟಿನ ಅಂತ್ಯದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಎನ್‌ಎಸ್‌ಇಯಲ್ಲಿ ಶೇಕಡ 0.96ರಷ್ಟು ಏರಿಕೆಯಾಗಿ ರೂಪಾಯಿ 1,364.00ಕ್ಕೆ ವಹಿವಾಟು ಅಂತ್ಯ ಮಾಡಿದೆ.

English summary

HDFC Bank Q1 results: Net profit jumps 19 percent to Rs. 9,196 crore

HDFC Bank, the country’s largest private lender, on Saturday reported a 19% year-on-year (YoY) rise in its net profit for the April-June quarter at ₹9,196 crore after providing ₹2,984.1 crore for taxation.
Story first published: Saturday, July 16, 2022, 19:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X