For Quick Alerts
ALLOW NOTIFICATIONS  
For Daily Alerts

HDFC Bank Q3 results: ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯ ಎಷ್ಟು ಏರಿಕೆ?

|

ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಶನಿವಾರ ಅಕ್ಟೋಬರ್‌ನಿಂದ ಡಿಸೆಂಬರ್‌ಗೆ ಅಂತ್ಯವಾಗುವ 3ನೇ ತ್ರೈಮಾಸಿಕದ ನಿವ್ವಳ ಆದಾಯವನ್ನು ಘೋಷಿಸಿದೆ. ಡಿಸೆಂಬರ್ 2022ರಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು ಶೇಕಡ 18.5ರಷ್ಟು ಏರಿಕೆಯಾಗಿ 12,260ಕ್ಕೆ ತಲುಪಿದೆ. ಈ ಹಿಂದಿನ ವರ್ಷದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು 10,342.2 ಕೋಟಿ ರೂಪಾಯಿ ಆಗಿತ್ತು.

ಅಕ್ಟೋಬರ್‌-ಡಿಸೆಂಬರ್ ತ್ರೈಮಾಸಿಕದಲ್ಲಿ ಆದಾಯವು 51,207.61 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ ಆದಾಯವು 40,651.60 ಕೋಟಿ ರೂಪಾಯಿ ಆಗಿತ್ತು. ಇನ್ನು ಡಿಸೆಂಬರ್ 30, 2022ರವರೆಗೆ ನಾನ್‌-ಪರ್ಫೂರ್ಮಿಂಗ್ ಅಸೆಟ್ (ಎನ್‌ಪಿಎ) ಶೇಕಡ 1.23ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷವೂ ಎನ್‌ಎಪಿ ಹೆಚ್ಚು ಏರಿಕೆಯಾಗಿರಲಿಲ್ಲ. ಡಿಸೆಂಬರ್ 2021ರವರೆಗೆ ಎನ್‌ಎಪಿ ಶೇಕಡ 0.37ರಷ್ಟು ಬೆಳವಣಿಗೆ ಕಂಡಿತ್ತು.

Safest Banks in India : ಭಾರತದ ಸುರಕ್ಷಿತ-ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿ ಬಿಡುಗಡೆ: ಆರ್‌ಬಿಐSafest Banks in India : ಭಾರತದ ಸುರಕ್ಷಿತ-ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿ ಬಿಡುಗಡೆ: ಆರ್‌ಬಿಐ

ಇನ್ನು ನಿವ್ವಳ ಬಡ್ಡಿದರ ಆದಾಯ (ಬಡ್ಡಿದರದಿಂದ ಲಭ್ಯವಾದ ಆದಾಯ) ಡಿಸೆಂಬರ್‌ 31ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಶೇಕಡ 24.6ರಷ್ಟು ಹೆಚ್ಚಳವಾಗಿದೆ. 22,987.8 ಕೋಟಿ ರೂಪಾಯಿ ಆದಾಯವು ಬಡ್ಡಿದರದಿಂದಲೇ ಲಭ್ಯವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಬಡ್ಡಿದರದಿಂದಾಗಿ 18.443.5 ಕೋಟಿ ರೂಪಾಯಿ ಆದಾಯ ಲಭಿಸಿತ್ತು.

Q3 results: ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯ ಎಷ್ಟು ಏರಿಕೆ?

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಲೆಕ್ಕಾಚಾರ

ಎಚ್‌ಡಿಎಫ್‌ಸಿ ಬ್ಯಾಂಕ್ ಅಂದಾಜಿಗಿಂತ ಅಧಿಕ ಲಾಭವನ್ನೇ ಗಳಿಸಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು ಶೇಕಡ 22.30ರಷ್ಟು ಏರಿಕೆಯಾಗಿ, 11,125.21 ಕೋಟಿ ರೂಪಾಯಿಗೆ ತಲುಪಿತ್ತು. ಸಂಸ್ಥೆಯ ಆದಾಯವು ವರ್ಷದಿಂದ ವರ್ಷಕ್ಕೆ ಶ 38,754 ಕೋಟಿ ರೂಪಾಯಿಯಿಂದ 46,182 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬಡ್ಡಿ ಮೂಲಕ ಲಭ್ಯವಾದ ಆದಾಯವು ಶೇಕಡ 18.3ರಷ್ಟು ಏರಿಕೆಯಾಗಿ 28,869.8 ಕೋಟಿ ರೂಪಾಯಿಗೆ ತಲುಪಿತ್ತು.

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಇನ್ನೂ 8-10 ತಿಂಗಳು ಅಗತ್ಯ!ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಇನ್ನೂ 8-10 ತಿಂಗಳು ಅಗತ್ಯ!

ಇದಕ್ಕೂ ಮುಂಚಿನ ತ್ರೈಮಾಸಿಕದಲ್ಲಿಯೂ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು ಹೆಚ್ಚಳವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡ 19ರಷ್ಟು ಅಧಿಕ ನಿವ್ವಳ ಲಾಭವನ್ನು ಕಂಡಿದೆ. 2,984.1 ಕೋಟಿ ರೂಪಾಯಿ ತೆರಿಗೆಯನ್ನು ಒದಗಿಸಿದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ತ್ರೈಮಾಸಿಕದ ನಿವ್ವಳ ಲಾಭವು 9,196 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಶುಕ್ರವಾರ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು 1,601 ರೂಪಾಯಿಗೆ ತಲುಪಿ ವಹಿವಾಟು ಅಂತ್ಯ ಮಾಡಿದೆ. ಕಳೆದ ತಿಂಗಳ ಎನ್‌ಎಸ್‌ಇಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಶೇಕಡ 18ರಷ್ಟು ಬೆಳವಣಿಗೆ ಕಂಡಿದೆ. ಆದರೆ ಬ್ಯಾಂಕ್‌ನ ಷೇರುಗಳು ಮಾತ್ರ ಕಳೆದ ಕೆಲವು ದಿನಗಳಿಂದ ಇಳಿಯುತ್ತಿದೆ.

English summary

HDFC Bank Q3 results: Net profit jumps 18.5 percent to Rs. 12,260 crore

HDFC Bank, the country’s largest private lender, on Saturday reported a 18.5% year-on-year (YoY) rise in its net profit for the october-december quarter at ₹12,260 crore.
Story first published: Saturday, January 14, 2023, 15:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X