Special Offer: 50 ಲೀಟರ್ ಪೆಟ್ರೋಲ್, ಡೀಸೆಲ್ ಉಚಿತ!
ನವದೆಹಲಿ, ಫೆಬ್ರವರಿ.21: ಭಾರತದಲ್ಲಿ ಪೆಟ್ರೋಲ್ ದರವು ಶತಕದ ಆಸುಪಾಸಿನಲ್ಲಿದೆ. ಡೀಸೆಲ್ ಮತ್ತು ಪೆಟ್ರೋಲ್ ದರದ ನಡುವಿನ ಅಂತರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂಧನ ದರದಲ್ಲಿ ಇಳಿಕೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಹಿನ್ನೆಲೆ ಹೆಚ್ ಡಿಎಫ್ ಸಿ ಬ್ಯಾಂಕ್ ವಿಶೇಷ ಆಫರ್ ನ್ನು ನೀಡಿದೆ.
ಹೆಚ್ ಡಿಎಫ್ ಸಿ ಬ್ಯಾಂಕಿನ ಇಂಡಿಯನ್ ಆಯಿಲ್ ಕ್ರೆಡಿಟ್ ಕಾರ್ಡ್ ಮೂಲಕ 50 ಲೀಟರ್ ಪೆಟ್ರೋಲ್ ನ್ನು ಉಚಿತವಾಗಿ ನೀಡುವ ಆಫರ್ ಘೋಷಿಸಲಾಗಿದೆ. ಹೆಚ್ ಡಿಎಫ್ ಸಿಯ ಐಓಸಿಎಲ್ ಕಾರ್ಡ್ ಬಳಕೆಯಿಂದ ಹೆಚ್ಚುವರಿ ಪಾಯಿಂಟ್ ಗಳು ಸೇರ್ಪಡೆಯಾಗುತ್ತದೆ. ಒಂದು ವರ್ಷದಲ್ಲಿ ಉಚಿತವಾಗಿ 50 ಲೀಟರ್ ಪಡೆಯುವ ಅವಕಾಶ ನಿಮ್ಮಗೂ ಆಗಬಹುದಾಗಿದೆ.
ಪೆಟ್ರೋಲ್, ಡೀಸೆಲ್ ದರ ಸತತ 12ನೇ ದಿನ ಏರಿಕೆ: ಮುಂಬೈನಲ್ಲಿ ಲೀಟರ್ಗೆ 97 ರೂ.
ಇಂಧನ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 44 ಪೈಸೆ ಮತ್ತು ಡೀಸೆಲ್ ಗೆ 43 ಪೈಸೆ ಏರಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.64 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 88.57 ರೂಪಾಯಿ ಆಗಿದೆ. ರಾಜ್ಯದಲ್ಲಿ ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.20 ರೂಪಾಯಿ ಇದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 88.14 ರೂಪಾಯಿ ಆಗಿತ್ತು.

ಹೆಡ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಪ್ರಯೋಜನ
- IOCL ಕಾರ್ಡಿನ ಒಟ್ಟು ಬಳಕೆಯ ಶೇ.5ರಷ್ಟು ಹಣದಿಂದ ವರ್ಷದ ಆರಂಭಿಕ ಆರು ತಿಂಗಳವರೆಗೂ ಗರಿಷ್ಠ 250 ಇಂಧನ ಅಂಶಗಳು ಕ್ರೂಢೀಕರಣವಾಗುತ್ತವೆ. ಆರು ತಿಂಗಳ ನಂತರದಲ್ಲಿ 150ರಷ್ಟು ಇಂಧನ ಅಂಶಗಳು ಕ್ರೂಢೀಕರಣವಾಗುತ್ತವೆ.
- ಕಾರ್ಡ್ ಹೊಂದಿರುವವರು ಕಿರಾಣಿ ಶಾಪಿಂಗ್ ಮತ್ತು ಬಿಲ್ ಪಾವತಿಗಳಲ್ಲಿ ಶೇಕಡಾ 5ರಷ್ಟು ಇಂಧನ ಪಾಯಿಂಟ್‌ಗಳನ್ನು ಪಡೆಯಬಹುದು. 150 ರೂಪಾಯಿಗಿಂತ ಹೆಚ್ಚು ವಹಿವಾಟಿನ ಪ್ರತಿ ವಿಭಾಗದಲ್ಲಿ ತಿಂಗಳಿಗೆ ಗರಿಷ್ಠ 100 ಇಂಧನ ಪಾಯಿಂಟ್‌ಗಳನ್ನು ಪಡೆಯುವುದಕ್ಕೆ ಸಾಧ್ಯವಿದೆ.
- ಗರಿಷ್ಠ 250 ರೂಪಾಯಿ ವಹಿವಾಟಿನಿಂದ ಶೇ.1ರಷ್ಟು ಪಾಯಿಂಟ್ ಗಳನ್ನು ಪಡೆಯುವುದಕ್ಕೆ ಸಾಧ್ಯವಿದೆ.

ಕ್ರೆಡಿಟ್ ಕಾರ್ಡ್ ಸದಸ್ಯರತ್ವ ಪಡೆಯುವ ವಿಧಾನ
ಹೆಚ್ ಡಿಎಫ್ ಸಿ ಬ್ಯಾಂಕಿನ ಇಂಡಿಯನ್ ಆಯಿಲ್ ಕ್ರೆಡಿಟ್ ಕಾರ್ಡ್ ನೀಡಿದವರಿಗೆ ಆರಂಭದಲ್ಲಿ 500 ರೂಪಾಯಿ ಶುಲ್ಕ ಮತ್ತು ಒಂದು ವರ್ಷದ ನಂತರ ಕಾರ್ಡ್ ನವೀಕರಣಕ್ಕೆ ಅದೇ ಶುಲ್ಕವನ್ನು ವಿಧಿಸಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಪಾವತಿದಾರರು 50,000ಕ್ಕಿಂತ ಅಧಿಕ ಹಣವನ್ನು ಬಳಸಿಕೊಂಡಿದ್ದಲ್ಲಿ, ಶುಲ್ಕದ ದರವನ್ನು ಮನ್ನಾ ಮಾಡಲಾಗುತ್ತದೆ.

ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಯಾರಿಗೆ ಸಿಗುತ್ತದೆ?
ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಯ್ 21 ವರ್ಷದಿಂದ 60 ವರ್ಷದೊಳಗಿನ ಎಲ್ಲರಿಗೂ ಈ ಯೋಜನೆಯು ಅನ್ವಯವಾಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅರ್ಜಿದಾರರ ವೇತನವು ಕನಿಷ್ಠ 12000 ರೂಪಾಯಿ ಆಗಿರುತ್ತದೆ. ಸ್ವಯಂ ಉದ್ಯೋಗಿಗಳು ಇದಕ್ಕಾಗಿ ಅರ್ಜಿ ಸಲ್ಲಿಸುವುದಾದರೆ ವಾರ್ಷಿಕ 2 ಲಕ್ಷಕ್ಕಿಂತ ಹೆಚ್ಚಿನ ಆದಾಯ ತೆರಿಗೆಯನ್ನು ಪಾವತಿಸಬೇಕಿದೆ ಎಂದು ಉಲ್ಲೇಖಿಸಲಾಗಿದೆ.

IOCL ಕಾರ್ಡ್ ಪಡೆದುಕೊಳ್ಳುವ ವಿಧಾನ?
ಸಾರ್ವಜನಿಕರು ಹೆಚ್ ಡಿಎಫ್ ಸಿ ಬ್ಯಾಂಕಿನ ಇಂಡಿಯನ್ ಆಯಿಲ್ ಕ್ರೆಡಿಟ್ ಬ್ಯಾಂಕ್ ಕಾರ್ಡ್ ಪಡೆಯುವುದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಇನ್ನೊಂದು ರೀತಿಯಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಇರುವ ಹತ್ತಿರದ ಬ್ಯಾಂಕ್ ಬ್ರಾಂಡ್ ಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.