For Quick Alerts
ALLOW NOTIFICATIONS  
For Daily Alerts

HDFC ಎರಡನೇ ತ್ರೈಮಾಸಿಕದ ಲಾಭ 28% ಇಳಿಕೆ

|

ಗೃಹ ಸಾಲ ಒದಗಿಸುವ ಎಚ್ ಡಿಎಫ್ ಸಿ ಜುಲೈನಿಂದ ಸೆಪ್ಟೆಂಬರ್ ನ ಎರಡನೇ ತ್ರೈಮಾಸಿಕದ ಫಲಿತಾಂಶ ಸೋಮವಾರ (ನವೆಂಬರ್ 2, 2020) ಪ್ರಕಟಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 3962 ಕೋಟಿ ರುಪಾಯಿ ದಾಖಲು ಮಾಡಿದ್ದ ಎಚ್ ಡಿಎಫ್ ಸಿ, ಈ ಬಾರಿ 2870 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಲಾಭದ ಪ್ರಮಾಣದಲ್ಲಿ 28% ಇಳಿಕೆ ಆಗಿದೆ.

PMAY: CLSS ಸ್ಕೀಮ್ ನಲ್ಲಿ HDFCಯಿಂದ 47 ಸಾವಿರ ಕೋಟಿ ವಿತರಣೆPMAY: CLSS ಸ್ಕೀಮ್ ನಲ್ಲಿ HDFCಯಿಂದ 47 ಸಾವಿರ ಕೋಟಿ ವಿತರಣೆ

ನಿವ್ವಳ ಬಡ್ಡಿ ಆದಾಯವು (NII) ಸೆಪ್ಟೆಂಬರ್ 30, 2020ಕ್ಕೆ 3647 ಕೋಟಿ ರುಪಾಯಿ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3021 ಕೋಟಿ ರುಪಾಯಿ ಬಂದಿತ್ತು. ಆ ಮೂಲಕ 21% ಬೆಳವಣಿಗೆ ದಾಖಲಾಗಿದೆ. ಸೆಪ್ಟೆಂಬರ್ 30, 2020ಕ್ಕೆ ಗ್ರಾಸ್ ನಾನ್ ಪರ್ಫಾರ್ಮಿಂಗ್ ಸಾಲ 8511 ಕೋಟಿ ರುಪಾಯಿ ಇದೆ.

HDFC ಎರಡನೇ ತ್ರೈಮಾಸಿಕದ ಲಾಭ 28% ಇಳಿಕೆ

ಈ ಬಾರಿಯ ತ್ರೈಮಾಸಿಕಕ್ಕೆ ಪ್ರಾವಿಷನ್ 12304 ಕೋಟಿ ರುಪಾಯಿ ಮೀಸಲಿರಿಸಲಾಗಿದೆ. ಕೊರೊನಾಗಾಗಿ ಸೆಪ್ಟೆಂಬರ್ 30ರ ಕೊನೆಗೆ ಹೆಚ್ಚುವರಿ ಪ್ರಾವಿಷನ್ 1200 ಕೋಟಿ ರುಪಾಯಿ ಮೀಸಲಿಡಲಾಗಿದೆ. ಎಚ್ ಡಿಎಫ್ ಸಿ ಷೇರಿನ ಬೆಲೆ ದಿನದ ಕೊನೆಗೆ ಐದು ಪರ್ಸೆಂಟ್ ಗೂ ಹೆಚ್ಚು ಏರಿಕೆ ದಾಖಲಿಸಿದೆ.

English summary

HDFC Q2 Net Profit Down By 28 Percent

HDFC stand alone Q2 FY21 net profit down by 28%. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X