For Quick Alerts
ALLOW NOTIFICATIONS  
For Daily Alerts

ಹೆಲ್ತ್ ಇನ್ಷುರೆನ್ಸ್, ಮೋಟಾರ್ ಇನ್ಷುರೆನ್ಸ್ ಪ್ರೀಮಿಯಂ ಕಟ್ಟಲು ಏಪ್ರಿಲ್ 21ರವರೆಗೂ ಅವಕಾಶ

|

ದೇಶದಲ್ಲಿ ಕೊರೊನಾ ಕಾರಣದಿಂದ 21 ದಿನಗಳ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಆರೋಗ್ಯ ವಿಮೆ, ಮೋಟಾರ್ ವಿಮೆಗಳ ಪ್ರೀಮಿಯಂ ಪಾವತಿ ಅವಧಿಯನ್ನು ಏಪ್ರಿಲ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

 
ಹೆಲ್ತ್, ಮೋಟಾರ್ ಇನ್ಷುರೆನ್ಸ್ ಪ್ರೀಮಿಯಂ ಅವಧಿ ವಿಸ್ತರಣೆ

ಪ್ರೀಮಿಯಂ ಪಾವತಿ ಮಾಡದೆ ಪಾಲಿಸಿದಾರರಿಗೆ ವಿಮೆ ಅನ್ವಯವಾಗುವುದಿಲ್ಲ ಎಂಬ ಅಂಶವು ವಿಮಾ ಕಾಯ್ದೆ, 1939ರ ಸೆಕ್ಷನ್ 64ವಿಬಿ ಒಳಗೊಂಡಿದೆ. ಹೀಗಾಗಿ ಸರ್ಕಾರ ಇದಕ್ಕೆ ತಿದ್ದುಪಡಿ ತಂದು ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದಾಗಿ ಮಾರ್ಚ್‌ 25 , 2020 ರಿಂದ ಏಪ್ರಿಲ್ 14, 2020 ರವರೆಗಿನ ಅವಧಿಯನ್ನು ಏಪ್ರಿಲ್ 21ರವರೆಗೆ ವಿಸ್ತರಿಸಲಾಗಿದೆ.

 

ಆದಾಯ ತೆರಿಗೆ ರಿಟರ್ನ್ಸ್ ಪಾಲಿಕೆ ಹಾಗೂ ಪಾನ್-ಆಧಾರ್ ಸಂಪರ್ಕಿಸುವ ಅವಧಿಯನ್ನು ಜೂನ್ 30ರ ವರೆಗೂ ವಿಸ್ತರಿಸುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಅಲ್ಲದೆ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಅವಕಾಶವನ್ನೂ ಜೂನ್ 30ರ ವರೆಗೂ ವಿಸ್ತರಿಸಲಾಗಿದೆ.

English summary

Health Motar Insurance Policies Extended To April 21

The ministry of finance issued notifications , Health and Motar Insurance Policies Extended To April 21
Story first published: Thursday, April 2, 2020, 17:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X