For Quick Alerts
ALLOW NOTIFICATIONS  
For Daily Alerts

INR- USD ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಗೆ ಚಾಲನೆ; ಇದರಿಂದ ಏನೆಲ್ಲ ಲಾಭ?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು INR- USD ಫ್ಯೂಚರ್ಸ್ ಅಂಡ್ ಆಪ್ಷನ್ಸ್ (F&O) ಕಾಂಟ್ರ್ಯಾಕ್ಟ್ ಗಳಿಗೆ ಎರಡು ಅಂತರರಾಷ್ಟ್ರೀಯ ಎಕ್ಸ್ ಚೇಂಜ್ ಗಳಲ್ಲಿ ಚಾಲನೆ ನೀಡಿದ್ದಾರೆ. ಬಿಎಸ್ ಇ ಇಂಡಿಯಾದ INX ಹಾಗೂ NSEಯ NSE- IFSCಗೆ ಗುಜರಾತ್ ನ ಗಾಂಧೀನಗರದಲ್ಲಿ ಇರುವ GIFT (ಇಂಟರ್ ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್)ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಕೊಟ್ಟಿದ್ದಾರೆ.

INR- USD ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಆರಂಭಿಸುವುದು ಬಹಳ ಪ್ರಯೋಜನಕಾರಿ. ಇದರಿಂದ ಭಾರತೀಯ ಕರೆನ್ಸಿ ಮಾರ್ಕೆಟ್ ನಲ್ಲಿ ಏರಿಳಿತ ಮತ್ತು ಅಪಾಯವನ್ನು ಕಡಿಮೆ ಮಾಡಬಹುದು.

ಫ್ಯೂಚರ್ ಮತ್ತು ಆಪ್ಷನ್ಸ್ ಕರೆನ್ಸಿ ಕಾಂಟ್ರ್ಯಾಕ್ಟ್ ಅಂದರೇನು?

ಫ್ಯೂಚರ್ ಮತ್ತು ಆಪ್ಷನ್ಸ್ ಕರೆನ್ಸಿ ಕಾಂಟ್ರ್ಯಾಕ್ಟ್ ಅಂದರೇನು?

ಒಬ್ಬ ವ್ಯಕ್ತಿಯು ಭವಿಷ್ಯದ ದಿನಾಂಕಕ್ಕೆ ತನ್ನ ಆಯ್ಕೆಯಂತೆ ಖರೀದಿ ಅಥವಾ ಮಾರಾಟ ಮಾಡುವುದನ್ನು ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಎನ್ನುತ್ತಾರೆ. ಭಾರತದ ರುಪಾಯಿಯು ಅಮೆರಿಕದ ಡಾಲರ್ ವಿರುದ್ಧ ಈ ವರ್ಷದ ನವೆಂಬರ್ ಹೊತ್ತಿಗೆ ಕುಸಿತ ಕಾಣುತ್ತದೆ ಎಂದು ನಿಮಗೆ ಅನಿಸಿದರೆ, F&O ಮಾರ್ಕೆಟ್ ನಲ್ಲಿ ನೀವು ಈಗ ಡಾಲರ್ ಖರೀದಿ ಮಾಡಬಹುದು. F&O ಕಾಂಟ್ರ್ಯಾಕ್ಟ್ ಅವಧಿ ನವೆಂಬರ್ ಗೆ ಮುಗಿಯುವಂಥದ್ದಾಗಿರಬೇಕು.

ಇನ್ನು ರುಪಾಯಿ ವಿರುದ್ಧ ಡಾಲರ್ ಕುಸಿತ ಕಾಣುತ್ತದೆ ಎಂದು ನೀವು ಅಂದುಕೊಳ್ಳುವುದಾದರೆ, ನವೆಂಬರ್ ಕಾಂಟ್ರ್ಯಾಕ್ಟ್ ನಲ್ಲಿ ಈಗಲೇ ನೀವು ಮಾರಾಟ ಮಾಡಬಹುದು. ನೀವು ಮರು ಖರೀದಿ ಅಥವಾ ಮಾರಾಟವನ್ನು ನವೆಂಬರ್ ತನಕ ಕಾದಿದ್ದೇ ಮಾಡಬೇಕು ಅಂತೇನಿಲ್ಲ. ನೀವು ಲಾಭ ಬಂದ ಮೇಲೆ ಯಾವಾಗಲಾದರೂ ಸ್ಕ್ವೇರ್ ಆಫ್ ಮಾಡಿಕೊಳ್ಳಬಹುದು.

ಇಲ್ಲಿ ನವೆಂಬರ್ ಎಂದು ಹೇಳಿದ್ದು ಉದಾಹರಣೆ ಅಷ್ಟೇ. ಜೂನ್, ಜುಲೈ, ಆಗಸ್ಟ್... ಹೀಗೆ ಯಾವ ತಿಂಗಳ ಕಾಂಟ್ರ್ಯಾಕ್ಟ್ ಆದರೂ ಖರೀರಿ ಮಾಡಬಹುದು.

ನಮ್ಮ ಹತ್ತಿರ ಡಾಲರ್ ಇಲ್ಲದೆ ಮಾರುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಉದ್ಭವಿಸಬಹುದು. ಅದೇ F&O ಮಾರ್ಕೆಟ್ ವ್ಯವಹಾರದಲ್ಲಿನ ರೀತಿ. ನಿಮ್ಮ ಬಳಿ ಇಲ್ಲದಿದ್ದಾಗಲೂ ಮಾರಾಟ ಮಾಡಬಹುದು. ಆದರೆ ನೆನಪಿಟ್ಟುಕೊಳ್ಳಿ, ನವೆಂಬರ್ ಕಾಂಟ್ರ್ಯಾಕ್ಟ್ ಮುಗಿಯುವುದರೊಳಗೆ ನೀವು ಮಾರಿದಷ್ಟು ಪ್ರಮಾಣದಲ್ಲಿ ಮತ್ತೆ ಖರೀದಿ ಮಾಡಿಟ್ಟುಕೊಳ್ಳಬೇಕು.

ನೀವು ಫ್ಯೂಚರ್ಸ್ ಅಂಡ್ ಆಪ್ಷನ್ಸ್ ನಲ್ಲಿ ಷೇರು ಖರೀದಿಸುವಾಗ ಯಾವಾಗಲೂ ಲಾಟ್ ನಲ್ಲಿ ಖರೀದಿ ಮಾಡುತ್ತೀರಿ. F&O ಸೆಗ್ಮೆಂಟ್ ನಲ್ಲಿ ಒಂದು ಲಾಟ್ ಅಂದರೆ 1000, 500 ಷೇರು ಹೀಗೆ. ಕರೆನ್ಸಿ ಮಾರ್ಕೆಟ್ ನಲ್ಲೂ ಹಾಗೇ. ನೀವು 1000 ಡಾಲರ್ ಖರೀದಿಸಬಹುದು ಅಥವಾ 1000 ಡಾಲರ್ ಮಾರಬಹುದು. ಆಸಕ್ತಿಕರ ವಿಷಯ ಏನೆಂದರೆ, ನಿಮ್ಮ ಬಳಿ ಮಾರ್ಜಿನ್ ಇರಬೇಕು.

ಏನಿದು ಮಾರ್ಜಿನ್?

ಏನಿದು ಮಾರ್ಜಿನ್?

ಈಗ ನೀವು ವಿದೇಶಕ್ಕೆ ಹೋಗುತ್ತಿದ್ದೀರಿ ಅಂದುಕೊಳ್ಳಿ. ಡಾಲರ್ ಅನ್ನು ನೀವು ತೆಗೆದುಕೊಂಡು ಹೋಗಬೇಕು. 1000 ಡಾಲರ್ ಗೆ 75,000 ರುಪಾಯಿ ಪಾವತಿಸಬೇಕಾಗುತ್ತದೆ. ಆದರೆ F&O ನಲ್ಲಿ 10 ಪರ್ಸೆಂಟ್ ಮಾರ್ಜಿನ್ ಪಾವತಿಸಿದರೆ ಸಾಕು. ಅಂದರೆ ನೀವು 7500 ರುಪಾಯಿ ನೀಡಿದರೆ ಆಯಿತು. ಇದು F&O ಮಾರ್ಕೆಟ್ ಅನುಕೂಲಗಳಲ್ಲಿ ಒಂದು. ಸಣ್ಣ ಮೊತ್ತದ ದೊಡ್ಡ ಪ್ರಮಾಣದ ಖರೀದಿ ಮಾಡಬಹುದು. ಆದರೆ ನಿಮ್ಮ ರಿಸ್ಕ್ ವಿಪರೀತ ಹೆಚ್ಚಿರುತ್ತದೆ.

BSE, NSEಯಲ್ಲಿ INR- USD F&O ಕಾಂಟ್ರ್ಯಾಕ್ಟ್ಸ್ ಅನುಕೂಲಗಳೇನು?

BSE, NSEಯಲ್ಲಿ INR- USD F&O ಕಾಂಟ್ರ್ಯಾಕ್ಟ್ಸ್ ಅನುಕೂಲಗಳೇನು?

ಇದರಿಂದ ಏರಿಳಿತ ಕಡಿಮೆ ಆಗಲು ಸಹಾಯ ಆಗುತ್ತದೆ. ಈ ಹಿಂದೆ ಯಾವಾಗಲೂ ಆರ್ ಬಿಐನಿಂದ ಡಾಲರ್ ವಿರುದ್ಧ ರುಪಾಯಿ ಮೌಲ್ಯಕ್ಕೆ ನಿರ್ದಿಷ್ಟ ಬೆಲೆಯ ಗುರಿ ಇರಲಿಲ್ಲ. ಆದರೆ ಯಾವಾಗಲೂ ಏರಿಳಿತ ಇರದಂತೆ ನೋಡಿಕೊಳ್ಳುವ ಬಗ್ಗೆಯೇ ಗಮನ ಇದೆ. ನಮಗೆ F&O ಸೆಗ್ಮೆಂಟ್ ನಲ್ಲಿ ವ್ಯವಹಾರ ನಡೆಸುವಂಥ ಆಯ್ಕೆ ಇದ್ದಲ್ಲಿ ಖಂಡಿತಾ ಏರಿಳಿತ ತಗ್ಗುತ್ತದೆ.

ಈ ಹಿಂದೆ ನಾವೇ ನೋಡಿದ್ದೇವೆ: ಕೆಲವೇ ಟ್ರೇಡಿಂಗ್ ಸೆಷನ್ ನಲ್ಲಿ ರುಪಾಯಿ ಮೌಲ್ಯ ತೀವ್ರಗತಿಯಲ್ಲಿ ಕುಸಿದಿದೆ. ಕರೆನ್ಸಿ ಮಾರ್ಕೆಟ್ ನ ಏರಿಳಿತವು ಭಯ ಹುಟ್ಟಿಸುತ್ತದೆ. ಅದರಲ್ಲೂ ಬಂಡವಾಳ ಮಾರುಕಟ್ಟೆಗೆ ಫಾರಿನ್ ಪೋರ್ಟ್ ಫೋಲಿಯೋ ಇನ್ ಫ್ಲೋ ದಲ್ಲಿ. ಅದೃಷ್ಟ ಏನೆಂದರೆ, ಯಾವುದೇ ಬಗೆಯ ಏರಿಳಿತವನ್ನು ನಿಯಂತ್ರಿಸಬಹುದಾದಷ್ಟು ವಿದೇಶಿ ವಿನಿಮಯ ಮೀಸಲು ಭಾರತದ ಬಳಿ ಇದೆ.

English summary

Here All You Need To Know About The Newly Launched INR-USD FandO

Finance Minister Nirmala Sitaraman launched INR-USD Futures and Options (F&O) contracts on the two international exchanges through a video conference.
Story first published: Friday, May 8, 2020, 20:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X