For Quick Alerts
ALLOW NOTIFICATIONS  
For Daily Alerts

ಇನ್ಕಂ ಟ್ಯಾಕ್ಸ್ ರಿಟರ್ನ್ ಪಾವತಿಸಿದ್ದೀರಾ? ಆನ್ಲೈನ್ ಮೂಲಕ ಹೀಗೆ ವೆರಿಫೈ ಮಾಡಿ...

|

ಇ-ಫೈಲಿಂಗ್ ವ್ಯವಸ್ಥೆಯಲ್ಲಿ ಆನ್ಲೈನ್ ಅಥವಾ ಆಫ್ಲೈನ್ ವಿಧಾನದಲ್ಲಿ ಆದಾಯ ತೆರಿಗೆ ರಿಟರ್ನ್ (Income Tax Return -ITR) ಸಲ್ಲಿಸಿದಾಗ, ಅದು ಪಾವತಿಯಾಗಿದೆಯೇ ಎಂಬುದನ್ನು ಪರಿಶೀಲಿಸುವುದು ತುಂಬಾ ಮುಖ್ಯ. ಈ ಪ್ರಕ್ರಿಯೆಯ ಭಾಗವಾಗಿ ಡಿಜಿಟ;;ಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC), ಆಧಾರ್ ಓಟಿಪಿ, ಪೂರ್ವ ದೃಢೀಕೃತ ಬ್ಯಾಂಕ್ ಖಾತೆ ವಿವರಗಳನ್ನು ಆಧರಿಸಿದ ಇವಿಸಿ, ಪೂರ್ವ ದೃಢೀಕೃತ ಡಿಮ್ಯಾಟ್ ಖಾತೆ ಆಧರಿಸಿದ ಇವಿಸಿ ವಿಧಾನಗಳ ಮೂಲಕ ತೆರಿಗೆ ಪಾವತಿದಾರನು ತನ್ನ ಐಟಿಆರ್ ಅನ್ನು ದೃಢೀಕರಿಸಿಕೊಳ್ಳಬಹುದು. ಹಾಗೆಯೇ ತಮ್ಮ ಇನಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಇ-ವೆರಿಫೈ ಮೂಲಕ ದೃಢೀಕರಿಸಿಕೊಳ್ಳಲು ಬಯಸದೇ ಇರುವವರು ಸಹಿ ಮಾಡಿದ ITR-V ಫಾರ್ಮ್ ಅನ್ನು "ಕೇಂದ್ರೀಕೃತ ಸಂಸ್ಕರಣಾ ಕೇಂದ್ರ, ಆದಾಯ ತೆರಿಗೆ ಇಲಾಖೆ, ಬೆಂಗಳೂರು - 560500" ಇಲ್ಲಿಗೆ ಕಳುಹಿಸುವ ಮೂಲಕ ಐಟಿಆರ್ ದೃಢೀಕರಿಸಬಹುದು. ಐಟಿಆರ್ ಫೈಲ್ ಮಾಡಿದ 120 ದಿನಗಳ ಒಳಗೆ ಸಾದಾ ಅಂಚೆ ಅಥವಾ ರಿಜಿಸ್ಟರ್ ಅಂಚೆಯ ಮೂಲಕ ಈ ಫಾರ್ಮ್ ಕಳುಹಿಸಬೇಕು.

ITR-V ವೆರಿಫೈ ಆಗದೆ ಐಟಿ ರಿಫಂಡ್ ಬರಲ್ಲ

ಅಂದರೆ ಐಟಿಆರ್ ಫೈಲ್ ಮಾಡಿದ ನಂತರ ಅದನ್ನು ಆನ್ಲೈನ್ ನಲ್ಲಿ 'My Account > e-Verify Return' ವಿಧಾನದ ಮೂಲಕ ಇ-ವೆರಿಫೈ ಮಾಡಬೇಕು ಅಥವಾ ದೃಢೀಕೃತ ITR-V ಫಾರ್ಮ್ ಅನ್ನು ಸಿಪಿಸಿ, ಬೆಂಗಳೂರು ಕಚೇರಿಗೆ ಕಳುಹಿಸಬೇಕು. ದೃಢೀಕರಣ ಮಾಡಿಸದ ಐಟಿ ರಿಟರ್ನ್ ಗಳನ್ನು ಆದಾಯ ತೆರಿಗೆ ಇಲಾಖೆಯು ಮಾನ್ಯ ಮಾಡುವುದಿಲ್ಲ ಹಾಗೂ ಅವುಗಳ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ. ಇದರ ಜೊತೆಗೆ, ಒಂದು ವೇಳೆ ನಿಮಗೆ ಐಟಿಆರ್ ರಿಫಂಡ್ ಬರಬೇಕಿದ್ದಲ್ಲಿ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಿ ದೃಢೀಕರಿಸಿದರೆ ಮಾತ್ರ ರಿಫಂಡ್ ಬರುತ್ತದೆ. ಐಟಿಆರ್ ದೃಢೀಕರಣಕ್ಕೆ 120 ದಿನಗಳ ಕಾಲಾವಕಾಶವಿದ್ದು, ಈ ಅವಧಿಯೊಳಗೆ ನಿಮ್ಮ ಫಾರ್ಮ್ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ತಲುಪುವಂತೆ ಖಾತ್ರಿ ಪಡಿಸಿಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ನಲ್ಲಿ ITR-V ನ ಸ್ಥಿತಿಯನ್ನು ಹೇಗೆ ತಿಳಿಯುವುದು ಅಥವಾ ವೆರಿಫೈ ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ITR-V ಆನ್ಲೈನ್ ಮೂಲಕ ದೃಢೀಕರಿಸುವ ಸ್ಟೆಪ್-ಬೈ-ಸ್ಟೆಪ್ ಗೈಡ್

https://www.incometax.gov.in/iec/foportal ಗೆ ಭೇಟಿ ನೀಡಿ ಅದರಲ್ಲಿ 'Our Services' ವಿಭಾಗದಲ್ಲಿರುವ 'Income Tax Return (ITR) Status' ಆಪ್ಷನ್ ಕ್ಲಿಕ್ ಮಾಡಿ. ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

ಈಗ https://eportal.incometax.gov.in/iec/foservices/#/pre-login/itrStatus ಈ ಪುಟಕ್ಕೆ ರಿಡೈರೆಕ್ಟ್ ಆಗುವಿರಿ. ಇದರಲ್ಲಿ ನೀವು ಸ್ವೀಕೃತಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.

ಐಟಿ ರಿಟರ್ನ್ ಸ್ಥಿತಿಗತಿ ಆನ್ಲೈನ್ ಮೂಲಕ ಪರಿಶೀಲನೆ ಹೇಗೆ?

'Continue' ಎಂಬುದನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.

ಓಟಿಪಿ ನಮೂದಿಸಿ 'Submit' ಎಂಬುದನ್ನು ಕ್ಲಿಕ್ ಮಾಡಿ.

ಓಟಿಪಿ ಯಶಸ್ವಿಯಾಗಿ ಪರಿಶೀಲನೆಯಾದ ನಂತರ ನಿಮಗೆ ಐಟಿಆರ್ ಸ್ಥಿತಿಗತಿಯ ಮಾಹಿತಿ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಐಟಿಆರ್ ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನೆಯಾಗಿ ದೃಢೀಕೃತಗೊಂಡಿದ್ದಲ್ಲಿ 'ITR verified' ಎಂಬ ಮಾಹಿತಿ ಇರುತ್ತದೆ.

ಒಂದು ವೇಳೆ ಐಟಿಆರ್ ಇನ್ನೂ ದೃಢೀಕೃತಗೊಂಡಿಲ್ಲವಾದರೆ 'Pending for e-verification' ಎಂಬ ಮಾಹಿತಿ ಕಾಣಿಸುತ್ತದೆ.

ಇದರೊಂದಿಗೆ ನಿಮ್ಮ ITR-V ಯನ್ನು ಆದಾಯ ತೆರಿಗೆ ಇಲಾಖೆ ಸ್ವೀಕರಿಸಿದಾಗ ನಿಮಗೆ ಎಸ್ಸೆಮ್ಮೆಸ್ ರೂಪದಲ್ಲಿ ಅಥವಾ ಇಮೇಲ್ ರೂಪದಲ್ಲಿ ಸ್ವೀಕೃತಿ ಸಂದೇಶ ಬರುತ್ತದೆ.

ಐಟಿಆರ್ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ ಅದನ್ನು ಮುಂದಿನ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಹಾಗೂ ನಿಮ್ಮ ಪರವಾಗಿ ಸೆಕ್ಷನ್ 143 (1) ರ ಅಡಿಯಲ್ಲಿ ಸೂಚನಾ ನೋಟಿಸ್ ಹೊರಡಿಸಲಾಗುತ್ತದೆ.

ಸಹಿ ಮಾಡಿದ ITR-V ಕಳುಹಿಸುವಾಗ ಗಮನದಲ್ಲಿಡಬೇಕಾದ ಸಂಗತಿಗಳು

ಆದಾಯ ತೆರಿಗೆ ಇಲಾಖೆಗೆ ಸಹಿ ಮಾಡಿದ ITR-V ಕಳುಹಿಸುವ ಸಂದರ್ಭದಲ್ಲಿ ಈ ಕೆಳಗಿನ ಮಹತ್ವದ ಸಂಗತಿಗಳ ಬಗ್ಗೆ ಗಮನವಿರಲಿ.

ITR-V ಪ್ರಿಂಟ್ ಮಾಡಿಕೊಂಡ ಕಾಪಿಯನ್ನು ಸಂಪೂರ್ಣವಾಗಿ ನೀಲಿ ಶಾಯಿಯಿಂದಲೇ ತುಂಬಿ ಸಹಿ ಮಾಡಬೇಕು. ನಂತರ ಸಾದಾ ಅಂಚೆ ಅಥವಾ ರಿಜಿಸ್ಟರ್ ಅಂಚೆಯ ಮೂಲಕ ಮಾತ್ರ ಅದನ್ನು ಕಳುಹಿಸಬೇಕು.

ITR-V ಫಾರ್ಮ್ ಮೇಲಿನ ಬಾರ್‌ಕೋಡ್ ಸ್ಪಷ್ಟವಾಗಿ ಕಾಣಿಸುವಂತಿರಬೇಕು ಮತ್ತು ಇದರ ಮೇಲೆ ಏನನ್ನೂ ಬರೆಯಬಾರದು.

ಒಂದಕ್ಕಿಂತ ಹೆಚ್ಚು ITR-V ಫಾರ್ಮ್ ಗಳನ್ನು ಸಲ್ಲಿಸಬೇಕಿದ್ದರೆ ಒಟ್ಟಾಗಿ ಎಲ್ಲವನ್ನೂ ಕಳುಹಿಸಬಹುದು.

ITR-V ಫಾರ್ಮ್ ಮೇಲಿನ ಸಹಿ ನಿಮ್ಮ ಪ್ಯಾನ್ ಕಾರ್ಡಿನಲ್ಲಿರುವ ಸಹಿಯಂತೆಯೇ ಇರಬೇಕು.

ಕೊರಿಯರ್ ಮೂಲಕ ಕಳುಹಿಸಲಾದ ITR-V ಫಾರ್ಮ್ ಗಳನ್ನು ತಿರಸ್ಕರಿಸಲಾಗುತ್ತದೆ. ಇನ್ನು ಫಾರ್ಮ್ ಮೇಲೆ ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಏನಾದರೂ ಅನಗತ್ಯ ಬರಹ ಬರೆದಿದ್ದರೂ ಫಾರ್ಮ್ ತಿರಸ್ಕಾರವಾಗುತ್ತದೆ.

ITR-V ನೊಂದಿಗೆ ಯಾವುದೇ ದಾಖಲೆಗಳನ್ನು ಕಳುಹಿಸುವ ಅಗತ್ಯವಿರುವುದಿಲ್ಲ. ಈ ಫಾರ್ಮ್ ಅನ್ನು ಪ್ರಿಂಟೌಟ್ ತೆಗೆದಿಟ್ಟುಕೊಂಡಿದ್ದರೆ ಸಾಕು.

English summary

How To Check ITR-V Receipt Status Online?

How To Check ITR-V Receipt Status Online? - Here is step by step guide in Kannada.
Story first published: Saturday, October 30, 2021, 12:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X